ಶಾಸಕರು ಎಲ್ಲಿ ? ಗರಗ ಗ್ರಾಮ – ಕಾಣಿಸಲಿಲ್ಲವೇ?.
ಮಾರಿಯಮ್ಮನಹಳ್ಳಿ ಅ.06

ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಗರಗ ಗ್ರಾಮದ ಮಣ್ಣಿನ ರಸ್ತೆಗಳಲ್ಲಿ ನೀರು ನಿಂತು ಮನೆಯೊಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ ಇದರಿಂದ ಗ್ರಾಮಸ್ಥರು ಆಕ್ರೋಶ ಭರಿತರಾಗಿದ್ದಾರೆ.ಹೋಬಳಿಯ ಜಿ.ನಾಗಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಗರಗ ಗ್ರಾಮವನ್ನು ಅಭಿವೃದ್ಧಿಯಿಂದ ಕಡೆ ಗಣಿಸಲಾಗಿದೆ. ಸರಿಯಾದ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಪ್ರತೀ ಸಲ ಮಳೆಗಾಲ ಬಂದಾಗ ಮಣ್ಣಿನ ರಸ್ತೆಗಳು ಕೊಚ್ಚೆಯಂತಾಗುತ್ತವೆ. ಪ್ರತೀ ಸಲ ಇದೇ ಪರಿಸ್ಥಿತಿ ಎದುರಿಸುತಿದ್ದೇವೆ. ಈ ಬಗ್ಗೆ ಕ್ಷೇತ್ರದ ಶಾಸಕ ನೇಮಿರಾಜ್ ನಾಯ್ಕ್ ಆಗಲಿ ಅಧಿಕಾರಿಗಳಾಗಲಿ ಗ್ರಾಮ ಪಂಚಾಯಿತಿಯ ಯಾವೊಬ್ಬ ಸದಸ್ಯರೂ ಈ ಕಡೆ ಗಮನ ಹರಿಸುತ್ತಿಲ್ಲ. ಮತ್ತು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಜನ ಪ್ರತಿನಿಧಿಗಳ ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಶಾಸಕರಾದ ನೇಮಿರಾಜ್ ನಾಯ್ಕ್ ಅವರು ಇತ್ತೀಚಿಗೆ ನಾಗಲಾಪುರ ಗ್ರಾಮಕ್ಕೆ ಆಗಮಿಸಿ ಕೆ.ಎಂ.ಆರ್.ಸಿ, ಕೆ.ಕೆ.ಆರ್.ಡಿ.ಬಿ, ಹಾಗೂ ಡಿ.ಎಂ.ಎಫ್. ಯೋಜನೆ ಅಡಿಯಲ್ಲಿ ಸಿಸಿ ರಸ್ತೆ ಇತರೆ ಕಾಮಗಾರಿಗಳನ್ನು ಕೈಗೊಂಡಿದ್ದು. ಮರಿಯಮ್ಮನಹಳ್ಳಿ ಹೋಬಳಿ ಯಾದ್ಯಾಂತ ಗ್ರಾಮಗಳಿಗೆ 140 ಕೋಟಿ ಗಳ ಕಾಮಗಾರಿ ಮಾಡಲಾಗುವುದು ಎಂದು ಹೇಳಿ, ಇಲ್ಲಿನ ಅಗತ್ಯ ಬೇಡಿಕೆಯಾಗಿದ್ದ ಹಳ್ಳದ ಸೇತುವೆ ನಿರ್ಮಾಣಕ್ಕೆ 2.25 ಕೋಟಿ ಕಾಮಗಾರಿಗೆ ಚಾಲನೆ ನೀಡಿ ಹೋಗಿದ್ದಾರೆ. ಆದರೆ ಗರಗ ಗ್ರಾಮದ ಸಮಸ್ಯೆ ಕಾಣಲಿಲ್ಲವೇನೋ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.ನಮ್ಮದು ಮೂಲಭೂತ ಸೌಲಭ್ಯಗಳಿಂದ ವಂಚಿತ ಗ್ರಾಮ ಎಂಬಂತಾಗಿದೆ. ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಕ್ಕೆ ನಾವು ಶಾಸಕರನ್ನು ಮತ್ತು ಸದಸ್ಯರನ್ನು ನಮ್ಮ ಪ್ರತಿನಿಧಿಯನ್ನಾಗಿ ಆರಿಸುತ್ತೇವೆ ಅವರು ಗೆದ್ದ ನಂತರ ಕಾಣಿಯಾಗಿರಬಹುದು ಹಾಗಾಗಿ ಅವರನ್ನು ಹುಡುಕುವ ಪ್ರಯತ್ನ ನಾವು ಮಾಡಬೇಕಿದೆ. ಶಾಸಕರು ಎಲ್ಲಿದ್ದಾರೆ ಎನ್ನುವುದು ಹುಡುಕಾಡುವ ಪರಿಸ್ಥಿತಿ ಎದುರಾಗಿದೆ ಅವರು ಎಲ್ಲಿದ್ದಾರೆ ಎಂದು ತಿಳಿಯದಾಗಿದೆ. ಪ್ರತೀ ವರ್ಷ ಮಳೆ ಶುರುವಾಯಿತು ಎಂದರೆ ನೀರಿನ ಹರಿವು ವಿಪರೀತ ವಾಗುತ್ತದೆ ಹಲವಾರು ವರ್ಷಗಳಿಂದ ಗ್ರಾಮದಲ್ಲಿ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ನೀರು ರಸ್ತೆ ಮೇಲೆ ಹರಿದು ಇಲ್ಲಿನ ಕೆಲ ಮೆನೆಯೊಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ.ಚುನಾವಣೆಗಳು ಬಂದಾಗ ಮಾತ್ರ ನಾವು ನೆನೆಪಾಗುತ್ತೇವೆ. ಈ ಭಾರಿ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿ ಕೈ ಕಾಲು ಮುಗಿದು ಓಟು ಹಾಕಿಸಿಕೊಳ್ಳುತ್ತಾರೆ. ನಂತರ ನಮ್ಮ ಗೋಳು ಕೇಳೋರಿರುವುದಿಲ್ಲ, ಈ ಕಡೆ ಇಣಿಕಿಯೂ ನೋಡೋದಿಲ್ಲ. ಇದೇ ರೀತಿ ನಿರ್ಲಕ್ಷ್ಯ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಿ ಅಧಿಕಾರಿಗಳ ವಿರುದ್ಧ ಹೊರಾಟ ಹಮ್ಮಿ ಕೊಳ್ಳಬೇಕಾಗುವುದು ಎಂದು ಸ್ಥಳಿಯರು ಪತ್ರಿಕೆಗೆ ತಿಳಿಸಿದರು. ಇನ್ನೂ ಮುಂದೆ ಶಾಸಕರು, ಅಧಿಕಾರಿಗಳು ಈ ಕಡೆ ಗಮನ ಹರಿಸಿ ಅಭಿವೃದ್ಧಿಗೆ ಮುಂದಾಗಬೇಕೆಂದರು ಎಂದರು. “ಈ ಬಗ್ಗೆ ಸ್ಪಷ್ಟನೆಗಾಗಿ ಶಾಸಕರಿಗೆ ಫೋನ್ ಕರೆ ಮಾಡಲಾಗಿ ಕರೆ ಸ್ವೀಕರಿಸಲಿಲ್ಲ.
“ಬಾಕ್ಸ್:-
“ಶಾಸಕರು 8 ಕೋಟಿಯ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದ್ದಾರೆ, ಕೇವಲ ತಾಂಡಗಳನ್ನು ಅಭಿವೃದ್ಧಿ ಮಾಡಿದರೆ ಸಾಕ, ಉಳಿದ ಗ್ರಾಮಗಳು ಇಲ್ವಾ? “ಮಾರೇಶ್ ಯಾದವ್ ಹೋಬಳಿ ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇಧಿಕೆ, ಗರಗ ಗ್ರಾಮ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್ ಹೊಸಪೇಟೆ