ಬಸ್ ಸ್ಟ್ಯಾಂಡ್ ಗೆ ಆಗ್ರಹಿಸಿ ಸಾರ್ವಜನಿಕರ ಕೈಗೆ ಆಮ್ ಆದ್ಮಿ ಪಕ್ಷದ ಸಿಂಬಲ್ – ಕೈಗೆತ್ತಿ ಕೊಳ್ಳುವ ಸಮಯ ಸನ್ನಿಹಿತವಾಗಿದೆ.
ಕಲಕೇರಿ ಅ. 07

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಇರುವ ಬಸ್ ನಿಲ್ದಾಣದ ಆರು ವರ್ಷಗಳ ಕಾಲ ಗತಿಸಿದರು ಕಲಕೇರಿ ಬಸ್ ನಿಲ್ದಾಣದ ಸಿ.ಸಿ ರಸ್ತೆ ಆಗಿಲ್ಲ ಇನ್ನೂ ಹಲವಾರು ಕೆಲಸಗಳು ಬಾಕಿ ಇದ್ದಾಗೂ ಕೂಡ ಅಧಿಕಾರಿಗಳು ಇಲ್ಲಿವರೆಗೂ ಯಾವ ಕೆಲಸಗಳನ್ನು ಮಾಡಿಲ್ಲ.ಈ ಬಸ್ಟಾಪ್ನಲ್ಲಿ ಯಾವುದೇ ಬಸ್ ಗಳು ಬಂದರೆ ಐದು ಮಿಂಟ್ ನಿಲ್ಲೋದಕ್ಕೆ ಆಗ್ತಾ ಇಲ್ಲ ಇವರಿಗೆ ಸ್ಟ್ಯಾಂಡಿನಲ್ಲಿ ಬಸ್ಸುಗಳು 10.15 ಮಿಂಟ್ ನಿಲ್ಲಬೇಕು ಆದರೆ ಇಲ್ಲಿ ಈ ಬಸ್ ಸ್ಟಾಂಡ್ ನಲ್ಲಿ ಯಾವ ಬಸ್ಸುಗಳು ಬಂದರೆ ಬಂದ ತಕ್ಷಣ ಹೋಗಿ ಬಿಡುತ್ತಾರೆ ಸಂಬಂಧಪಟ್ಟ ಅಧಿಕಾರಿಗಳು ಕಲಕೇರಿ ಬಸ್ಟಾಪ್ ನಲ್ಲಿ ಹತ್ತರಿಂದ ಇಪ್ಪತ್ಮೆಂಟು ನಿಲ್ಲಬೇಕು ಬಸ್ಸುಗಳು ಆ ಕೆಲಸ ಅಧಿಕಾರಿಗಳು ಮಾಡಬೇಕು ಬಸ್ ನಿಲ್ದಾಣ ಯಾವ ಕೆಲಸ ಆಗದ ಕಾರಣ ಹಲವಾರು ಸಲ ಅಧಿಕಾರಿಗಳಿಗೆ ತಿಳಿಸಿದರು. ಇಲ್ಲಿವರೆಗೂ ಯಾವ ಅಧಿಕಾರಿಗಳು ಯಾವ ಕೆಲಸಗಳನ್ನು ಮಾಡಿಲ್ಲ ಮತ್ತು ಕಲಕೇರಿ ಗ್ರಾಮದ ಬಸ್ ನಿಲ್ದಾಣದ ಒಳಗೆ ಪರ ಸ್ಥಳದಿಂದ ಬಂದಂತ ಜನರಿಗೆ ಕುಡಿಯೋದಕ್ಕೆ ನೀರಿನ ವ್ಯವಸ್ಥೆ ಇಲ್ಲ ಕೆ.ಎಸ್.ಆರ್.ಟಿ.ಸಿ ಗುಲ್ಬರ್ಗಾ ಡಿಸಿ ಅವರಿಗೆ ಕೂಡ ತಿಳಿಸಿದ್ದೇವೆ. ಮತ್ತು ವಿಜಯಪುರ ಅಧಿಕಾರಿಗಳಿಗೆ ಕೂಡ ತಿಳಿಸಿದ್ದೇವೆ. ಮತ್ತು ತಾಳಿಕೋಟಿ ಅಧಿಕಾರಿಗಳಿಗೆ ಕೂಡ ತಿಳಿಸಿದ್ದೇವೆ. ಯಾವ ಅಧಿಕಾರಿ ಬರುತ್ತಾರೆ ನಾಳೆ ನಾಡಿದ್ದು ಮಾಡುತ್ತೇವೆ. ಎಂದು ಭರವಸೆ ನೀಡುತ್ತಾರೆ ಮತ್ತೆ ತಿರುಗಿ ಕೂಡ ನೋಡುವುದಿಲ್ಲ ಈಗಲಾದರೂ ಕಲಕೇರಿ ಬಸ್ ನಿಲ್ದಾಣದ ಸಂಬಂಧಪಟ್ಟ ಅಧಿಕಾರಿಗಳ ಬಸ್ಟ್ಯಾಂಡ್ ದ ಒಳಗೆ ಸಿ.ಸಿ ರಸ್ತೆ ಮಾಡಬೇಕು ಬಸ್ಸುಗಳು ನಿಲ್ಲುವ ಪ್ಲಾಟ್ಫಾರಂಗಳು ತಕ್ಷಣವೇ ಮಾಡಬೇಕೆಂದು ಕಲಕೇರಿ ಬಸ್ ನಿಲ್ದಾಣದ ಕೆಲಸಗಳನ್ನು ಮಾಡದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಗ್ರಾಮಸ್ಥರು, ಸಾರ್ವಜನಿಕರ ಕೈಗೆ ಆಮ್ ಆದ್ಮಿ ಪಕ್ಷದ ಸಿಂಬಲ್ ಕೈಗೆತ್ತಿ ಕೊಳ್ಳುವುದು ಸಮಯ ಸನ್ನಿಹಿತವಾಗಿದೆ ಎಂದು ಆಗ್ರಹಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ