ಪೋಲೀಸ್ ರ ಗುಂಡಾವರ್ತನೆ ಖಂಡನೀಯ – ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಒತ್ತಾಯ.
ಹುನಗುಂದ ಡಿಸೆಂಬರ್.9

ಚಿಕ್ಕ ಮಂಗಳೂರಿನ ವಕೀಲ ಪ್ರೀತಮ್ ಮೇಲೆ ಅಮಾನವೀಯ ಹಲ್ಲೆ ನಡೆಸಿದ ಪೊಲೀಸರ್ ಮೇಲೆ ಕ್ರಮ ಜರುಗಿಸುವುದು ಮತ್ತು ಕಲಬುರ್ಗಿಯ ವಕೀಲ ಈರಣ್ಣ ಪಾಟೀಲ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆಯನ್ನು ಖಂಡಿಸಿ ಮತ್ತು ವಕೀಲರ ಹಿತ ರಕ್ಷಣೆ ಕಾಯ್ದೆ ತಕ್ಷಣವೇ ಜಾರಿಗೊಳಿಸುವಂತೆ ಒತ್ತಾಯಿಸಿ ಶುಕ್ರವಾರ ಹುನಗುಂದ ವಕೀಲರ ಸಂಘ ಕೋರ್ಟ್ ಕಲಾಪವನ್ನು ಬಹಿಷ್ಕರಿಸಿ ಬೈಕ್ ರ‍್ಯಾಲಿ ಮೂಲಕ ಪ್ರತಿಭಟನೆ ನಡೆಸಿ ತಹಶೀಲ್ದಾರ ನಿಂಗಪ್ಪ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.ವಕೀಲ ಎಂ.ಎಚ್.ಮಳ್ಳಿ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪೊಲೀಸ್ ದಬ್ಬಾಳಿಕೆ,ಧರ್ಪ ಹೆಚ್ಚಾಗಿದೆ ಎನ್ನುವುದ್ದಕ್ಕೆ ಕಳೆದ ನ.೩೦ ರಂದು ಚಿಕ್ಕ ಮಂಗಳೂರನಲ್ಲಿ ನಡೆದ ವಕೀಲ ಪ್ರೀತಮ್ ಮೇಲೆ ಪೊಲೀಸರು ನಡೆಸಿದ ಹಲ್ಲೆಯೇ ತಾಜಾ ಉದಾಹರಣೆಯಾಗಿದೆ.ಹೆಲ್ಮೇಟ್ ಇಲ್ಲ ಎನ್ನುವ ಕಾರಣಕ್ಕೆ ವಕೀಲರನ್ನು ಪೊಲೀಸ್ ಠಾಣಿಗೆ ಕರೆದು ಕೊಂಡು ಹೋಗಿ ಏಕವಚನದಲ್ಲಿ ನಿಂಧಿಸಿದ್ದಲ್ಲದೇ ಎಂಟು ಜನ ಪೊಲೀಸ್‌ರು ಸೇರಿ ಕೊಂಡು ಮನಬಂದಂತೆ ಅಮಾನವೀಯವಾಗಿ ಹಲ್ಲೆ ಮಾಡಿದರೂ ಅನ್ಯಾಯಕ್ಕೊಳಗಾದ ವಕೀಲರು ಕೇಸ್ ಕೊಡಲು ಹೋದರೇ ಅವರ ಕೇಸ್ ತಗೆದುಕೊಳ್ಳೋದಿಲ್ಲ.ಕಾನೂನು ಬಲ್ಲ ಒಬ್ಬ ವಕೀಲರಿಗೆ ಈ ಸ್ಥಿತಿಯಿದ್ದು ಇನ್ನು ಜನ ಸಾಮಾನ್ಯರ ಪರಸ್ಥಿತಿ ಇನ್ನೇನು ? ಪ್ರಜಾಪ್ರಭುತ್ವ ದೇಶದಲ್ಲಿ ಪೊಲೀಸ್ ರಾಜ್ಯ ನಿರ್ಮಿಸಲು ಹೊರಟಂತೆ ಕಾಣುತ್ತಿದೆ.ನಮ್ಮನ್ನು ಯಾರು ಪ್ರಶ್ನೆಸಬಾರದು ಎನ್ನುವ ರೀತಿ ಪೊಲೀಸ್‌ರು ನಡೆದು ಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರುಇನ್ನೂ ಪೊಲೀಸ್‌ರು ಕೇಸ್ ರಜಿಸ್ಟರ್ ಮಾಡಿದರೇ ಮಾತ್ರ ವಕೀಲರಿಗೆ ಹೊಟ್ಟೆಗೆ ಅನ್ನ ಕೈ ತುಂಬಾ ಹಣ ಬರುತ್ತೇ ನಾವೇ ಮಾಡದಿದ್ದರೇ ನೀವು ಬದುಕೋದು ಕಷ್ಟ ಅಂತಾ ವಕೀಲ ವೃತ್ತಿಗೆ ಪೊಲೀಸ್ರು ಅವಮಾನ ಮಾಡುತ್ತಿರುವುದು ಖಂಡನೀಯ,ಪೊಲೀಸರೇ ನೀವು ಮಾಡಿರೋ ಕೇಸ್‌ಗೆ ವಕೀಲರು ನ್ಯಾಯ ಕೊಡಸ್ತಾರೆ ಹೊರೆತು ನೀವು ಕೊಡಸೋದಿಲ್ಲ ಎನ್ನುವುದ್ದನ್ನು ಮೊದಲು ಅರ್ಥ ಮಾಡಕೋಬೇಕು.ಕಲಬುರ್ಗಿಯಲ್ಲಿ ಹಾಡುಹಗಲೇ ವಕೀಲ ಈರಣ್ಣ ಪಾಟೀಲ ಎಂಬುವರು ಮನೆಯಿಂದ ಕೋರ್ಟ್ ಕಲಾಪಕ್ಕೆ ಬರುವ ವೇಳೆ ಅಟ್ಟಾಡಿಸಿ ಕೊಂಡು ಬಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದು ಸಿಸಿ ಟಿವಿಯಲ್ಲಿ ರೀಕಾರ್ಡ ಇದ್ದರೂ ಕೂಡಾ ಆರೋಪಿತರನ್ನು ಬಂಧಿಸುವಲ್ಲಿ ಪೊಲೀಸ್‌ರು ಮೀನಾಮೇಷ ಎನ್ನಿಸುತ್ತೀದ್ದಾರೆ.ತಕ್ಷಣವೇ ಕೊಲೆಯಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು.ವಕೀಲರು ನೆಮ್ಮದ್ದಿಯಿಂದ ಜೀವನ ಮಾಡಲು ವಕೀಲರ ಹಿತ ರಕ್ಷಣಾ ಕಾಯ್ದೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.ವಕೀಲ ರಾಜಕುಮಾರ ಬಾದವಾಡಗಿ ಮಾತನಾಡಿ ಕಕ್ಷಿಗಾರರಿಗೆ ನ್ಯಾಯ ಕೊಡಿಸುವ ವಕೀಲರ ಮೇಲೆ ನಿರಂತರ ಹಲ್ಲೆ.ಜನ ಪ್ರತಿನಿಧಿಗಳ ಮಾತು ಕೇಳಿ ಅನ್ಯಾಯ ಕ್ಕೊಳಗಾದ ವ್ಯಕ್ತಿಯ ಮೇಲೆ ಪ್ರಕರಣವನ್ನು ದಾಖಲಿಸುವ ಮನಸ್ಥಿತಿಯಲ್ಲಿ ಪೊಲೀಸ್‌ರು ಇದ್ದಾರೆ. ಚಿಕ್ಕ ಮಂಗಳೂರ ಮತ್ತು ಕಲಬುರ್ಗಿ ಪ್ರಕರಣಕ್ಕೆ ನ್ಯಾಯ ಕೊಡಿಸೋ ಕೆಲಸ ಮಾಡಬೇಕು ಎಂದರು.ವಕೀಲ ವೆಂಕಟೇಶ ದೇಶಪಾಂಡೆ ಮಾತನಾಡಿದರು,ವಕೀಲರ ಸಂಘದ ಅಧ್ಯಕ್ಷ ಪ್ರಕಾಶ ಕಠಾಣಿ ಮನವಿಯನ್ನು ಓದಿ ತಹಶೀಲ್ದಾರ ಅವರಿಗೆ ಸಲ್ಲಿಸಿದರು.ವಕೀಲರ ಸಂಘದ ಮಾಜಿ ಅಧ್ಯಕ್ಷ ಮಾಧವ ದೇಶಪಾಂಡೆ,ಬಿ.ಎ.ಅವಟಿ,ಪಿ.ಬಿ. ಹುಲ್ಯಾಳ,ಎಸ್.ಎಂ. ಉಪ್ಪಾರ,ಎಂ.ಎ.ಸಂಗಮಕರ,ವ್ಹಿ.ಆರ್.ಜನಾದ್ರಿ,ಸಿ.ಬಿ. ಸಜ್ಜನ,ವಿ.ಬಿ.ದಮ್ಮೂರಮಠ,ವಾದಿರಾಜ ದೇಶಪಾಂಡೆ,ಪ್ರದೀಪ ತಾರಿವಾಳ,ವಿ.ಎಸ್.ಕಪನೂರ,ವೀರೇಶ ಬಂಡಿ,ನಾಗರಾಜ ಮಡಿಕಾರ,ಟಿ.ಎಂ.ಚಲವಾದಿ,ಶಾಂತು ಮೂಕಿ,ಮಾರುತಿ ದಾಸರ ಸೇರಿದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ