13-10-2024 ರಂದು ಖಾನಾ ಹೊಸಹಳ್ಳಿ ಗ್ರಾಮದಲ್ಲಿ ವೀರ ಮದಕರಿ ನಾಯಕ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ – ಭಾಗಿಯಾದ ಶಾಸಕರು.
ಮೊಳಕಾಲ್ಮುರು ಅ.14

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಖಾನಾ ಹೊಸಹಳ್ಳಿ ಗ್ರಾಮದಲ್ಲಿ ವೀರ ಮದಕರಿ ನಾಯಕ ವೃತ್ತದ ಪ್ರತಿಮೆ ಅನಾವರಣವನ್ನು ವಾಲ್ಮೀಕಿ ಪೂಜ್ಯರಾದ ಪ್ರಸನ್ನ ನಾನಂದ ಸ್ವಾಮಿಗಳು ಮತ್ತು ಸಿದ್ದಯ್ಯನ ಕೋಟೆ ಬಸವಲಿಂಗ ಸ್ವಾಮಿಗಳು ಕೂಡ್ಲಿಗಿ ಹಿರೇಮಠ ಶಿವಾಚಾರ್ಯಗಳು ಹಾಗೂ ಕಾನಮಡಗು ಶರಣಾರ್ಯರ ಸ್ವಾಮಿಗಳು ಮತ್ತು ಕೂಡ್ಲಿಗಿ ಕ್ಷೇತ್ರದ ಡಾಕ್ಟರ್, ಎನ್.ಟಿ ಶ್ರೀನಿವಾಸ್ ಶಾಸಕರು ಹಾಗೂ ಮೊಳಕಾಲ್ಮೂರು ಕ್ಷೇತ್ರದ ಎನ್.ವೈ ಗೋಪಾಲಕೃಷ್ಣ ಶಾಸಕರು ಭಾಗವಹಿಸಿದ್ದರು. ಕೆ ಹೊಸಹಳ್ಳಿ ಸರ್ಕಲ್ಲಿನ ವೀರ ಮದಕರಿ ಪ್ರತಿಮೆ ಅನಾವರಣವನ್ನು ಹೊಸದಾಗಿ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಡಾಕ್ಟರ್, ಎನ್.ಟಿ ಶ್ರೀನಿವಾಸ್ ಶಾಸಕರು ಭಾಗವಹಿಸಿ ಚಾಲನೆ ನೀಡಿದರು. ಕ್ಷೇತ್ರದಾದ್ಯಂತ ಸಮುದಾಯದ ಮುಖಂಡರಗಳು ಹಾಗೂ ಎಲ್ಲಾ ಸಮುದಾಯದ ಗಣ್ಯ ವ್ಯಕ್ತಿಗಳು ವಿ.ಐ.ಪಿ ಗಳು ಭಾಗವಹಿಸಿದ್ದರು. ಹಾಗೂ ಕೂಡ್ಲಿಗಿ ತಾಲೂಕಿನ ವಾಲ್ಮೀಕಿ ಅಧ್ಯಕ್ಷರಾದ ಸುರೇಶ್ ಜಿತಿಲಿಂಗನಟ್ಟಿ ಬೊಮ್ಮಣ್ಣ ಕಾನಾ ಹೊಸಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರು ಚೇತನ್ ಎ.ಸಿ ಚೆನ್ನಬಸಪ್ಪ ಸುಭಾಷ್ ಪಾಟೀಲ್ ಶಾಸಕರ ಅಣ್ಣನಾದ ಎನ್ ಟಿ ತಮ್ಮಣ್ಣ ಕಾಂಗ್ರೆಸ್ ಮುಖಂಡರು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಶಿ ಗುಂಡುಮಗು ತಿಪ್ಪೇಸ್ವಾಮಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್ ಪಿ ಪ್ರಕಾಶ್ ಹುಲಿಕೆರೆ ಒಂಕಾರಪ್ಪ ಶರಣಪ್ಪ ನಿವೃತ್ತ ಶಿಕ್ಷಕರು ಜುಮ್ಮನಹಳ್ಳಿ ಓಬಣ್ಣ ಪಾಪನಾಯಕ ಕೆಪಿ ಪಂಪಾಪತಿ ಹೊಸಳ್ಳಿ ಬೋರಣ್ಣ ಸುರೇಶ್ ಕಂಡಕ್ಟರ್ ಓಬಣ್ಣ ಯೋಗೇಶ್ ಬಾಬು ಇನ್ನು ಹಲವಾರು ಮುಖಂಡರಗಳು ಸಭೆಯಲ್ಲಿ ಭಾಗವಹಿಸಿ ಪರಮ ಪೂಜ್ಯ ಪ್ರಸನ್ನಾನಂದ ಸ್ವಾಮಿಗಳಿಗೆ ಆಶೀರ್ವದಿಸಿ ಸಭೆಯಲ್ಲಿ ಮಾತನಾಡಿದ ಸ್ವಾಮಿಗಳು ಮತ್ತು ಶಾಸಕರು ವೀರ ಮದಕರಿ ನಾಯಕ ಎಂದರೆ ಎಲ್ಲಾ ಸಮುದಾಯದ ಒಬ್ಬ ವ್ಯಕ್ತಿ ಎಂದು ತಿಳಿಯಬೇಕು ಏಕೆಂದರೆ ಹೈದರಾಲಿಯು ವೀರ ಮದಕರಿ ನಾಯಕರಿಗೆ ಯುದ್ಧ ಭೀತಿಯಾದಾಗ ಸಮುದಾಯದವರೇ 26 ಮಂದಿ ಹೈದರಾಲಿಯ ಪರವಾಗಿ ನಿಂತು ಸ್ವಲ್ಪ ನೋವುಂಟು ಮಾಡಿದರು ಆದರೂ ವೀರ ಮದಕರಿ ನಾಯಕ ಎದರಲಿಲ್ಲ ತನ್ನ ಬೇರೆ ಸಮುದಾಯ ದವರನ್ನು ಬೆಂಬಲಿಸಿ ಕೊಂಡು ಯುದ್ಧವನ್ನು ಗೆದ್ದು ಕೊಂಡರು ಚಿತ್ರದುರ್ಗ ಕೋಟೆಯ ಒಂದು ಕಲ್ಲನ್ನು ಮುಟ್ಟುವುದಕ್ಕೆ ಆಗಲಿಲ್ಲ ಅಂತ ಒಂದು ವೀರ ಮದಕರಿ ನಾಯಕ ಪ್ರತಿಮೆ ಅನಾವರಣ ಹೊಸಹಳ್ಳಿ ಗ್ರಾಮದಲ್ಲಿ ನೆರವೇರಿತು ಎಂದು ಡಾಕ್ಟರ್, ಎನ್.ಟಿ ಶ್ರೀನಿವಾಸ್ ಶಾಸಕರು ಮಾತನಾಡಿದರು.

ಮತ್ತು ಎನ್.ವೈ ಗೋಪಾಲಕೃಷ್ಣ ಶಾಸಕರು ವೇದಿಕೆಯಲ್ಲಿ ಮಾತನಾಡಿದ್ದು ಮೊದಲು ನಾವು ಬಡತನ ದಿಂದ ಬೆಳೆದು ಬಂದಿರುವುದು ಕಷ್ಟ ಏನು ಎಂಬುದು ನನಗೆ ಅರ್ಥವಾಗುತ್ತದೆ ಈಗ ನಮ್ಮ ಕಾಂಗ್ರೆಸ್ ಸರ್ಕಾರದ 5 ಭಾಗ್ಯಗಳನ್ನು ಬಡವರಿಗೆ ಸಹಾಯವಾಗಿದೆ ಅದರಲ್ಲಿ ಒಂದನೇ ಭಾಗ್ಯ ಬಹಳ ಮಹತ್ವವಾದ ಗೃಹಲಕ್ಷ್ಮಿ ಪ್ರತಿಯೊಂದು ಮನೆಗೆ 2,000 ಹಾಗೂ ಮಹಿಳೆಯರಿಗೆ ಶಕ್ತಿ ಯೋಜನೆ ಬಸ್ಸಿನಲ್ಲಿ ಓಡಾಡಲು ಮತ್ತು ಮನೆ ಮನೆಗೆ ಫ್ರೀ ವಿದ್ಯುತ್ ಅಕ್ಕಿ ಬದಲು ದುಡ್ಡು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಡವರ ಆಶಾ ಕಿರಣವಾಗಿ ಕನಸು ಎಂದು ತಿಳಿಯಬೇಕು ಈ ಹಿಂದೆ ಯಾವ ಸರ್ಕಾರನೂ ಮಾಡಿಲ್ಲ ಮುಂದೆ ಯಾವ ಸರ್ಕಾರನೂ ಮಾಡುವುದಿಲ್ಲ ಇಂತಹ ಒಂದು ಬಡವರ ಸಹಾಯಕ್ಕೆ ನಿಂತ ಭಾಗ್ಯಗಳು ಇಂದು ಘಂಟಾಗೋಷವಾಗಿ ಮಾತನಾಡಿ ನಾನು ಹಿಂದೆ ಶಾಸಕನಾಗಿದ್ದಾಗ ಸಾವಿರಾರು ಕೋಟಿಗಳು ಅನುದಾನ ತಂದು ಶಾಲೆ ಕೊಠಡಿಗಳು ರಸ್ತೆಗಳು ಅಂಗನವಾಡಿ ಶಾಲೆಗಳು ಮಿನಿ ವಿಧಾನ ಸೌಧ ಕೃಷಿ ಇಲಾಖೆ ಸಂತೆ ಮಾರ್ಕೆಟ್ ಪಟ್ಟಣ ಪಂಚಾಯಿತಿ ಬಿಲ್ಡಿಂಗ್ ಕೆಇಬಿ ಸಬ್ ಸ್ಟೇಷನ್ ಗಳು ಮುರಾರ್ಜಿ ವಸತಿ ಶಾಲೆಗಳು ಕಿತ್ತೂರು ರಾಣಿ ವಸತಿ ಶಾಲೆಗಳು ಮತ್ತು ನೂರಾರು ಕೋಟಿ ಚೆಕ್ ಡ್ಯಾಮ್ ಗಳು ಇನ್ನು ಅನೇಕ ಕೇವಲ 18 ತಿಂಗಳುಗಳಲ್ಲಿ ನಾನು ಕಾಮಗಾರಿಗಳ ಮುಗಿಸಿದ್ದೇನೆ ಕ್ಷೇತ್ರದ 74 ಕೆರೆಗಳಿಗೆ ನಾನು ನೀರು ತುಂಬಿಸಲು 90 ಪರ್ಸೆಂಟ್ ಕೆಲಸ ಮುಗಿಸಿ ಹೋಗಿದ್ದ ಹತ್ತು ಪರ್ಸೆಂಟ್ ಕಾರಣಾಂತರ ದಿಂದ ಕೆಲಸ ನಿಂತಿತ್ತು ಈಗ ನಮ್ಮ ಶ್ರೀನಿವಾಸ್ ಶಾಸಕರು ನಮ್ಮ ಜೊತೆಗೆ ಇದ್ದುಕೊಂಡು 99% ಕೆಲಸ ಆಗಿದೆ. ಇನ್ನೂ ಕೇವಲ ಒಂದು ಪರ್ಸೆಂಟ್ ನಲ್ಲಿ ಉಳಿದಿದೆ ಕೆಲವೇ ತಿಂಗಳಗಳಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತು ಡಿಕೆ ಶಿವಕುಮಾರ್ ಇವರು ಹಾಗೂ ಹಲವಾರು ಸಚಿವರು ಬಂದು ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಅತಿ ಶೀಘ್ರದಲ್ಲಿ ಉದ್ಘಾಟನೆ ಮಾಡಲಿದ್ದಾರೆ ಎಂದು ಎನ್.ವೈ ಗೋಪಾಲಕೃಷ್ಣ ಶಾಸಕರು ಮಾತನಾಡಿದರು. ಮತ್ತು ಈ ಸಭೆಗೆ ಬರಲು ನಮ್ಮ ಅಣ್ಣನಾದ ಮೂರು ರಾಜ್ಯದ ನಿವೃತ್ತ ನ್ಯಾಯಾಧೀಶರು ಮತ್ತು ಮಾಜಿ ಸಂಸದರು ಎನ್ ವೈ ಹನುಮಂತಪ್ಪನವರು ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ವೀರ ಮದಕರಿ ನಾಯಕ ವೃತ್ತ ಪ್ರತಿಮೆ ಅನಾವರಣ ಮಾಡಲು ನಿನಗೆ ಕಾರ್ಡ್ ಕೊಟ್ಟು ಹೋಗಿದ್ದಾರೆ ನೀನು ಹೋಗಿ ಆ ಸಭೆಗೆ ಭಾಗಿಯಾಗು ಎಂದಾಗ ಬಳ್ಳಾರಿಯಲ್ಲಿ ಇದ್ದ ಕೆಲಸವನ್ನು ಬಿಟ್ಟು ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಗ್ರಾಮದ ವೀರ ಮದಕರಿ ನಾಯಕನ ಪ್ರತಿಮೆ ಅನಾವರಣಕ್ಕೆ ಕೈಮುಗಿದು ಬಂದು ಪುಷ್ಪ ನಮನ ಮಾಡಿ ಮಾತನಾಡಿದ ಎನ್.ವೈ ಗೋಪಾಲಕೃಷ್ಣ ಶಾಸಕರು ಮತ್ತು ಸಿದ್ದಯ್ಯನ ಕೋಟೆ ಬಸವಲಿಂಗ ಸ್ವಾಮಿಗಳು ಮಾತನಾಡಿದ್ದು ಹೀಗೆ ಮನೆಯ ಮೊದಲ ಪಾಠಶಾಲೆ ಮಕ್ಕಳಿಗೆ ಸಂಸ್ಕಾರ ಕಲಿಸಿ ಶಿಕ್ಷಣ ಕಲಿಸಿ ದುಶ್ಚಟಗಳನ್ನು ಬಿಡಿಸಿ ಆಗ ಶಿಕ್ಷಣದಿಂದ ಮಾತ್ರ ನಾವು ಮುಂದೆ ಬರಲು ಸಾಧ್ಯ ಇಂದು ಮಾತನಾಡಿದ ಸಿದ್ಧನಕೋಟೆ ಬಸವಲಿಂಗ ಸ್ವಾಮಿಗಳು ಮತ್ತು ಪ್ರಸನ್ನಾನಂದ ಸ್ವಾಮಿಗಳು ಮಾತನಾಡಿದ್ದು ಹೀಗೆ ಡಾಕ್ಟರ್, ಎನ್.ಟಿ ಶ್ರೀನಿವಾಸ್ ಶಾಸಕರು ಚುನಾವಣೆ ಆರು ತಿಂಗಳು ಇದ್ದಾಗಿನಿಂದಲೂ ಹಾಗೆ ಮೊದಲೇ ಕ್ಷೇತ್ರದ ಎಲ್ಲಾ ಬಡ ವರ್ಗದ ಜನ ಸಾಮಾನ್ಯರಿಗೆ ಆರೋಗ್ಯ ಕ್ಯಾಂಪುಗಳನ್ನು ಮಾಡಿ ಯಾವುದೇ ಕಾಯಿಲೆ ಇರಲಿ ಫ್ರೀ ಚಿಕಿತ್ಸೆ ಕೊಟ್ಟು ಮೆಡಿಸಿನ್ ಸಹ ಫ್ರೀಯಾಗಿ ಕೊಡಿಸಿದಂತ ಶಾಸಕರು ಮತ್ತೆ ಕೇಂದ್ರ ಬಿಂದು ವಾಗಿರುವಂತಹ ಕಣ್ಣಿನ ಡಾಕ್ಟರ್, ಇವರು ಸುಮಾರು ಲಕ್ಷನು ಗಟ್ಟಲೆ ನಾಗರಿಕರಿಗೆ ಕಣ್ಣು ಕೊಟ್ಟಂತ ಶಾಸಕರು ಮತ್ತು ಚುನಾವಣೆ ಗೆದ್ದಾಗಿಂದಲೂ ಇವತ್ತಿನ ವರೆಗೂ ಟೈಮ್ ವೇಸ್ಟ್ ಮಾಡದೆ ಸರ್ಕಾರದ ಮೂಲಭೂತ ಸೌಕರ್ಯಗಳು ಸುರಿ ಮಳೆಯಾಗಿ ಅನುದಾನ ತಂದಿದ್ದಾರೆ.

ಯಾವುದೇ ವಿಷಯದಲ್ಲಿ ಆಗಲಿ ಅಹಂಕಾರ ಆಂಬುವ ಗರ್ವ ಇವು ಯಾವ ಇರುವುದಿಲ್ಲ ಕಲ್ಯಾಣ ಕರ್ನಾಟಕದಲ್ಲಿ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದಿರುವ ಮಾಜಿ ಶಾಸಕರು ಎನ್.ಟಿ ಬೊಮ್ಮಣ್ಣನ ಮಗ ಡಾಕ್ಟರ್, ಎನ್.ಟಿ ಶ್ರೀನಿವಾಸ್ ಶಾಸಕರು ಇವರು ಪ್ರಪ್ರಥಮ ಯುವಕ ನಗು ಮಗು ಇದ್ದ ಹಾಗೆ ಯಾವುದೇ ವಿಷಯ ದಲ್ಲಾಗಲಿ ಒಳ್ಳೆ ಮಾರ್ಗವಾಗಿ ನಡೆಯುತ್ತಿದ್ದಾರೆ. ಎಂದು ಎಲ್ಲಾ ವರ್ಗದ ಜನ ಸಾಮಾನ್ಯರ ಕೆಲಸಗಳನ್ನು ಮಾಡಲು ಮುಂದಾಗಿರುವ ಶಾಸಕರು ಎಂದು ಪ್ರಸನ್ನಾನಂದ ಸ್ವಾಮಿಗಳು ಮಾತನಾಡಿದ್ದು ಹೀಗೆ ಮತ್ತು ಹಂಪಿ ಯೂನಿವರ್ಸಿಟಿ ವೆಂಕಟಗಿರಿ ದಳವಾಯಿ ಇವರು ಮೊದಲು ನಾಗೇಂದ್ರಣ್ಣ ಶಾಸಕರ ಆಪ್ತ ಸಹಾಯಕ ಆಗಿದ್ದರು ಅವರು ಮಾತನಾಡಿದ್ದು ಹೀಗೆ ರಾಜವೀರ ಮದಕರಿ ನಾಯಕ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ ಎಲ್ಲಾ ವರ್ಗದ ಸಮುದಾಯದವರನ್ನು ಬೆಂಬಲಿಸಿ ಕೊಂಡು ಚಿತ್ರದುರ್ಗ ಕೋಟೆಯನ್ನು ಸುಭದ್ರ ಗೊಳಿಸಿದ ರಾಜ ವೀರ ಮದಕರಿ ನಾಯಕ ಎಂದು ಹೇಳಿದರು. ಈ ಸಂದರ್ಭದಲ್ಲಿ ಪತ್ರಿಕಾ ಮಾಧ್ಯಮದವರು ಪೊಲೀಸ್ ಇಲಾಖೆಯ ಸಿ.ಪಿ.ಐ ತಳವಾರ್ ಸುರೇಶ್ ಹೊಸಹಳ್ಳಿ ಪೊಲೀಸ್ ಸ್ಟೇಷನ್ ಪಿಎಸ್ಐ ರೇವಣಸಿದ್ದಪ್ಪ ಮತ್ತೆ ಏಎಸ್ಐ ಜಿಲಾನ್ ಹೊಸಹಳ್ಳಿ ಗ್ರಾಮದ ಪ್ರಮುಖರು ಹಾಗೂ ಗಣ್ಯರು ಹಾಗೂ ಕ್ಷೇತ್ರದ ಸುತ್ತ ಮುತ್ತಲಿನಿಂದ ಗ್ರಾಮಗಳಿಂದ ಬಂದಿರತಕ್ಕಂತ ಕಾಂಗ್ರೆಸ್ ಮುಖಂಡರಗಳು ಭಾಗವಹಿಸಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು