ಶ್ರೀ ರಾಜ ವೀರ ಮದಕರಿ ನಾಯಕ ಜಯಂತೋತ್ಸವ ಮತ್ತು ಪ್ರತಿಮೆ ಲೋಕಾರ್ಪಣೆ.

ಕೂಡ್ಲಿಗಿ ಅ. 14

ಮದಕರಿ ನಾಯಕರ ಆಡಳಿತ, ಅವರ ಧೈರ್ಯ, ಜನಪರ ಕಾಳಜಿಯನ್ನು ನಾವುಗಳು ಅರಿತು ಕೊಂಡು ಅವರಿಗೆ ಗೌರವ ಬರುವಂತೆ ನಾವು ಬದುಕಿ ತೋರಿಸಬೇಕು ಎಂದು ಹೇಳಿದರು. ತಾಲೂಕಿನ ಕಾನ ಹೊಸಹಳ್ಳಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ದಿ ಎನ್.ಟಿ ಬೊಮ್ಮಣ್ಣ ಮಾಜಿ ಶಾಸಕರು ಇವರ ವೇದಿಕೆಯಲ್ಲಿ ಆಯೋಜಿಸಿದ್ದ ರಾಜ ವೀರ ಮದಕರಿ ನಾಯಕ ಜಯಂತೋತ್ಸವ ಹಾಗೂ ಪ್ರತಿಮೆ ಲೋಕಾರ್ಪಣೆಯನ್ನು ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ‌.ಎನ್.ಟಿ ಶ್ರೀನಿವಾಸ್ ನೆರವೇರಿಸಿ ಮಾತನಾಡಿದರು. ರಾಜಕಾರಣಿಗಳು ರಾಜರಲ್ಲ ಸೇವಕರು ನಾನು ಕೂಡ ಈ ಕ್ಷೇತ್ರದಲ್ಲಿ ಸೇವೆ ಮಾಡಲು ನಿಮ್ಮ ಸೇವಕ. ಇಂದು ಈ ರಾಜ ವೀರ ಮದಕರಿ ನಾಯಕ ಜಯಂತಿ ಆಚರಿಸಲು ಎಲ್ಲಾ ಸಮಾಜದ ಮುಖಂಡರು ಪಾಲ್ಗೊಂಡಿರುವುದು ತುಂಬಾ ಸಂತೋಷ, ಸಂತಸ ರಾಜ ವೀರ ಮದಕರಿ ನಾಯಕ ಯಾವುದೇ ಜಾತಿ-ಧರ್ಮಕ್ಕೆ ಸೀಮಿತ ಗೊಂಡಿರಲಿಲ್ಲ ಎಲ್ಲಾ ಜಾತಿ ಧರ್ಮದವರನ್ನು ಗೌರವಿಸುತ್ತಾ ಈ ರಾಜ್ಯವನ್ನು ಮುನ್ನಡೆಸಿ ಕೊಂಡು ಬಂದವರು ಅವರು ಮಾಡಿದಂತಹ ಕಾರ್ಯಗಳನ್ನು ಸ್ಮರಿಸಿ ಕೊಳ್ಳಬೇಕು. ಅವರ ಆದರ್ಶಗಳನ್ನು ಮೈಗೂಡಿಸಿ ಕೊಂಡು ಮುನ್ನಡೆಯಬೇಕು. ದುರ್ಗದ ಮಣ್ಣಿನ ಹೆಮ್ಮೆಯ ಪುತ್ರ ರಾಜ ವೀರ ಮದಕರಿ ನಾಯಕನ ತನ್ನ ಆಳ್ವಿಕೆ ಅವಧಿಯಲ್ಲಿ ಕೈಗೊಂಡ ಹಲವು ರಾಜಕೀಯ ನಿರ್ಣಯಗಳು ಚಿತ್ರದುರ್ಗ ಸಂಸ್ಥಾನದ ಕೀರ್ತಿ ಭಾರತದೆಲ್ಲೆಡೆ ಹರಡಲು ಕಾರಣವಾಯಿತು. ಕರ್ನಾಟಕ ರಾಜಕೀಯ ಮತ್ತು ಸಂಸ್ಕೃತಿಕ ಚರಿತ್ರೆಯಲ್ಲಿ ಮಹತ್ವ ಪಾತ್ರ ವಹಿಸಿದ್ದರು. ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದಲ್ಲಿ ಎಲ್ಲಾ ಸಮಾಜದ ಮಹಾನುಭಾವರ ಪುತ್ತಳಿಗಳನ್ನು ನಿರ್ಮಿಸಲು ನಾನು ಶ್ರಮಿಸುತ್ತೇನೆ ಎಂದರು.ಈ ಸಂದರ್ಭದಲ್ಲಿ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣ ಅವರು ಮಾತನಾಡಿ ನಾವು ಮತ್ತು ಎಲ್ಲಾ ಸಮಾಜದವರು ಮದಕರಿ ಜಯಂತಿ ಅದ್ದೂರಿಯಾಗಿ ಆಚರಿಸುತ್ತ ಬರುತ್ತಿರುವುದು ಸಂತೋಷದ ವಿಚಾರ. ಮದಕರಿ ನಾಯಕರ ಆಡಳಿತ, ಅವರ ಧೈರ್ಯ, ಜನಪರ ಕಾಳಜಿ ನಾವು ತಿಳಿದುಕೊಂಡು ಅವರಿಗೆ ಗೌರವ ಬರುವ ರೀತಿ ನಡೆದು ಕೊಳ್ಳಬೇಕು. ಜನಾಂಗದ ಅಭಿವೃದ್ಧಿಗೆ ಶಿಕ್ಷಣ ಮುಖ್ಯ. ವಾಲ್ಮೀಕಿ ಜನಾಂಗದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ವಾಲ್ಮೀಕಿ ಯುವಕ ಸಂಘ ಈ ದಿಸೆಯಲ್ಲಿ ಹೆಚ್ಚು ಪ್ರಯತ್ನ ಶೀಲರಾಗಬೇಕು ಎಂದು ಕಿವಿಮಾತು ಹೇಳಿದರು.ಈ ಸಂದರ್ಭದಲ್ಲಿ ಶ್ರಿ ಪ್ರಸನ್ನನಂದ ಪುರಿ ಮಹಾಸ್ವಾಮಿಗಳು ವಾಲ್ಮೀಕಿ ಗುರುಪೀಠ ರಾಜನಹಳ್ಳಿ ಮಾತನಾಡಿ ರಾಜ ವೀರ ಮದಕರಿ ನಾಯಕ. ಚಿತ್ರದುರ್ಗದ ನಾಯಕರು ಕೊನೆಯ ದೊರೆ ರಾಜ ವೀರ ಮದಕರಿ ನಾಯಕ. 12 ವರ್ಷದ ಬಾಲಕ. ರಾಜ್ಯವನ್ನು ಆಳ್ವಿಕೆ ಮಾಡಲು ಯುದ್ಧ ಭೂಮಿಗೆ ಇಳಿಯುತ್ತಾನೆ. ರಾಜ ವೀರ ಮದಕರಿ ನಾಯಕ. ಪರಾಕ್ರಮಿ ಶಕ್ತಿ ಶಾಲಿ. ಇವರ ಆಳ್ವಿಕೆ ಕಾಲದಲ್ಲಿ ಸಾಕಷ್ಟು ಕೆರೆ ಹೊಂಡಗಳನ್ನು. ನಿರ್ಮಿಸಿದಂತಹ ಮಹಾ ನಾಯಕ. ಆದಿಕವಿ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣದಲ್ಲಿ 24,000 ಶ್ಲೋಕಗಳಿವೆ. ಸಾಮಾನ್ಯ ಬೇಡರ ಕುಲದ ವ್ಯಕ್ತಿ ವಾಲ್ಮೀಕಿ, ಕುಟುಂಬ ಸಲಹಲು ದರೋಡೆ ಕೋರನಾಗಿರುತ್ತಾರೆ. ನಾರದ ಮುನಿ ಅವರನ್ನು ಕಂಡು, ದರೋಡೆ ಪಾಪದ ಕೆಲಸ ಹಾಗೂ ಈ ಪಾಪದ ಪಾಲನ್ನು ಕುಟುಂಬದವರು ಪಡೆಯುತ್ತಾರೆಯೇ ಎಂದು ಕೇಳುತ್ತಾರೆ. ವಾಲ್ಮೀಕಿ ಮನೆಗೆ ಹೋಗಿ ಇದೇ ಪ್ರಶ್ನೆ ಕೇಳಿದಾಗ ಅವರನ್ನು ಪಾಪದ ಪಾಲು ಪಡೆಯಲು ಕುಟುಂಬದವರು ಒಪ್ಪುವುದಿಲ್ಲ. ಇದರಿಂದ ವಾಲ್ಮೀಕಿ ಮನಸ್ಸು ಪರಿವರ್ತನೆ ಯಾಗುತ್ತದೆ. ಬೇಡರ ಕುಟುಂಬದ ವ್ಯಕ್ತಿ ದೊಡ್ಡ ಸಾಮ್ರಾಜ್ಯಗಳಿಗೆ ಗುರುಗಳಾಗುತ್ತಾರೆ. ಒಬ್ಬ ವ್ಯಕ್ತಿ ಜ್ಞಾನ ದಿಂದ ಎತ್ತರಕ್ಕೇರಲು ಸಾಧ್ಯ ಎಂಬುದು ವಾಲ್ಮೀಕಿ ಜೀವನ ದಿಂದ ತಿಳಿಯುತ್ತದೆ ಎಂದರು. ಡಾ, ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ಲಕ್ಷ್ಮಣದ ಸಹೋದರತೆ, ರಾಮರಾಜ್ಯ, ತಂದೆಯ ಆದೇಶದ ಮೇರೆಗೆ ಶ್ರೀರಾಮ ವನವಾಸ ಮಾಡುವ ಪಿತೃ ವಾಕ್ಯ ಪರಿಪಾಲನೆ, ರಾಮನ ಪಾದುಕೆಗಳನ್ನಿಟ್ಟು ರಾಜ್ಯಾಭಾರ ಉಸ್ತುವಾರಿ ಮಾತ್ರ ಹೊರುವ ಭರತ, ಮೊದಲಾದ ಮೌಲ್ಯಗಳು ರಾಮಾಯಣ ದಲ್ಲಿದೆ. ಇದಕ್ಕಾಗಿ ರಾಮಾಯಣವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು ಎಂದರು. ವಾಲ್ಮೀಕಿ ಜನಾಂಗ ನಿಷ್ಠೆ, ಪ್ರಾಮಾಣಿಕತೆಗೆ ಹೆಸರುವಾಸಿ. ಭಕ್ತಿಗೆ ಹೆಸರಾದ ಶಬರಿ, ಗುರುಭಕ್ತ ಏಕಲವ್ಯ, ಬೇಡರ ಕಣ್ಣಪ್ಪ, ಒನಕೆ ಓಬವ್ವ, ಸುರಪುರದ ನಾಯಕರು, ಎಲ್ಲರೂ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಶೂರ, ತ್ಯಾಗಿಗಳು. ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ, ಶ್ರೀನಿವಾಸ್ ರವರು ಕೂಡ ಬೇಡರ ಕಣ್ಣಪ್ಪ ಇದ್ದ ಹಾಗೆ. ಅವರು ಈ ಕ್ಷೇತ್ರದಲ್ಲಿ ಸಾಕಷ್ಟು. ಕಣ್ಣಿನ ಶಾಸ್ತ್ರ ಚಿಕಿತ್ಸೆಗಳು ಮತ್ತು ಅವರು ಮಾಡಿದಂತಹ ಸೇವೆಯಿಂದಲೇ ಅತಿ ಹೆಚ್ಚು ಮತಗಳ ಅಂತರದಿಂದ ಈ ಕ್ಷೇತ್ರದ ಜನರು. ಆಯ್ಕೆ ಮಾಡಿರುತ್ತಾರೆ. ಒಳ ಮೀಸಲಾತಿ ವಿಚಾರದಲ್ಲಿ ನಮ್ಮ ನೆಲವು ಸ್ವಸ್ಥತೆ ಇದೆ. ನಮ್ಮ ರಾಜ ವೀರ ಮದಕರಿ ನಾಯಕ ಜಯಂತಿ ಜನ ಸರ್ಕಾರ ರಜೆ ಘೋಷಣೆ ಮಾಡಬೇಕು. ನಮ್ಮ ಸಮಾಜದ ಎಲ್ಲಾ ಸಚಿವರು ಶಾಸಕರು ಸಂಸದರು. ಈ ಹೋರಾಟಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಷ.ಬ್ರ. ಪ್ರಶಾಂತ ಸಾಗರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಕೂಡ್ಲಿಗಿ ಮಾತನಾಡಿ ಮಹಾನ್‌ ನಾಯಕರರನ್ನು ಜಾತಿ-ಧರ್ಮಕ್ಕೆ ಸೀಮಿತ ಗೊಳಿಸದೆ ಅವರು ಮಾಡಿದಂತಹ ಕಾರ್ಯಗಳನ್ನು ಸ್ಮರಿಸಿ ಕೊಳ್ಳಬೇಕು. ಅವರ ಆದರ್ಶಗಳನ್ನು ಮೈಗೂಡಿಸಿ ಕೊಂಡು ಮುನ್ನಡೆಯ ಬೇಕು ಎಂದು ಆಶೀರ್ವಚನ ನೀಡಿದರು. ಈ ಕಾರ್ಯಕ್ರಮದ ಉಪನ್ಯಾಸವನ್ನು ಡಾ, ವೆಂಕಟಗಿರಿ ದಳವಾಯಿ ಸಹಾಯಕ ಪ್ರಾಧ್ಯಾಪಕರು ಕನ್ನಡ ವಿಶ್ವವಿದ್ಯಾಲಯ ಹಂಪಿ ಇವರು ಮಾತನಾಡಿ ಚಿತ್ರದುರ್ಗ ನಾಯಕ ಅರಸರಲ್ಲಿ ಕೊನೆಯ ದೊರೆ ರಾಜವೀರ ಮದಕರಿ ನಾಯಕ. ಈತನನ್ನು ಇತಿಹಾಸದಲ್ಲಿ ಚಿಕ್ಕಮದಕರಿ, ಕೊನೇ ಮದಕರಿ, 5 ನೇ ಮದಕರಿ, ವೀರಮದಕರಿ ಎಂದೆಲ್ಲಾ ಕರೆಯಲಾಗಿದೆ. ಈತನು ಜಾನಕಲ್ಲು ತೊದಲು ಭರಮಪ್ಪ ನಾಯಕನ ಎರಡನೇ ಮಗನಾಗಿದ್ದನು. 1754 ರಲ್ಲಿ ಕಸ್ತೂರಿ ರಂಗಪ್ಪ ನಾಯಕ ಮರಣ ಹೊಂದಿದ ಸಂದರ್ಭದಲ್ಲಿ ಈತನ ತಾಯಿ ಗಂಡಿಲ ಓಬವ್ವ ನಾಗತಿಯು ಜಾನಕಲ್ಲಿನಿಂದ ಭರಮಪ್ಪನ ಮಗ ‘ಚಿಕ್ಕ ಮದಕರಿ’ಯನ್ನು ಕರೆತಂದು ದುರ್ಗದಲ್ಲಿ ಪಟ್ಟ ಕಟ್ಟಿದಳು. ಪಟ್ಟಾಭಿಷೇಕ ಮಾಡುವಾಗ ಇವರಿಗೆ ಕೇವಲ 12 ವರ್ಷದ ಬಾಲಕ. ಮದಕರಿ ನಾಯಕ ತನ್ನ ಆಳ್ವಿಕೆ ಅವಧಿಯಲ್ಲಿ ಕೈಗೊಂಡ ಹಲವು ರಾಜಕೀಯ ನಿರ್ಣಯಗಳು ಚಿತ್ರದುರ್ಗ ಸಂಸ್ಥಾನದ ಕೀರ್ತಿಯನ್ನು ದಕ್ಷಿಣ ಭಾರತದಲ್ಲೆಲ್ಲಾ ಹರಡಲು ಕಾರಣವೆನಿಸಿದವು. ಈತನ ಆಳ್ವಿಕೆ ಯಿಂದಾಗಿಯೆ ಚಿತ್ರದುರ್ಗ ಸಂಸ್ಥಾನವು ಹೆಚ್ಚು ಪ್ರವರ್ಧಮಾನಕ್ಕೆ ಬರಲು ಸಾಧ್ಯವಾಯಿತು. ಮುಖ್ಯವಾಗಿ ಶ್ರೀರಂಗಪಟ್ಟಣದ ನವಾಬರು ಮತ್ತು ಮರಾಠ ಪೇಶ್ವೆಗಳೊಡನೆ ಈ ನಾಯಕನು ಇಟ್ಟುಕೊಂಡಿದ್ದ ರಾಜಕೀಯ ಬಾಂಧವ್ಯ ಮತ್ತು ನಡೆಸಿದ ಹೋರಾಟಗಳು ಆತನ ರಾಜಕೀಯ ದೂರದೃಷ್ಟಿ ಹಾಗೂ ಶೌರ್ಯ- ಸಾಹಸಗಳನ್ನು ಪ್ರತಿ ನಿಧಿಸುತ್ತವೆ. ತನ್ನ ಬದುಕಿನ ಬಹುಕಾಲ ಯುದ್ಧೋತ್ಸವಗಳಲ್ಲೆ ಭಾಗಿಯಾಗುತ್ತಿದ್ದ ಮದಕರಿಯು ಸಂಸ್ಥಾನವನ್ನು ಬಲ ಪಡಿಸುವಲ್ಲಿ, ರಾಜ್ಯವನ್ನು ಸುಭೀಕ್ಷೆಯಿಂದ ಇಟ್ಟು ಕೊಳ್ಳುವಲ್ಲಿ ವಹಿಸುತ್ತಿದ್ದ ಪಾತ್ರ ವಿಶೇಷವಾದುದು ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಶ್ರಿ ಪ್ರಸನ್ನನಂದ ಪುರಿ ಮಹಾಸ್ವಾಮಿಗಳು ವಾಲ್ಮೀಕಿ ಗುರುಪೀಠ ರಾಜನಹಳ್ಳಿ, ವರದಾನೇಶ್ವರ ಮಹಾಸ್ವಾಮಿಗಳು ವಾಲ್ಮೀಕಿ ಆಶ್ರಮದ ಗೋಲಪಲ್ಲಿ ರಾಯಚೂರು, ದಾ.ಮ‌ ಐಮಡಿ ಶರಣಾಯರ ದಾಸೋಹ ಮಠ ಕಾನಮಡುಗು, ಶ್ರೀ ಬಸವಲಿಂಗ ಸ್ವಾಮಿಗಳು ವಿಜಯ ಮಹಂತೇಶ್ವರ ಇಳಕಲ್ ಶಾಖಾ ಮಠ ಸಿದ್ದಯ್ಯನ ಕೋಟೆ ಸಾನಿಧ್ಯವನ್ನು ವಹಿಸಿ ಕೊಟ್ಟರು. ಈ ಕಾರ್ಯಕ್ರಮದಲ್ಲಿ ಯೋಗೇಶ್ ಬಾಬು ಅಧ್ಯಕ್ಷರು ದ್ರಾಕ್ಷಾರಸ ಮಂಡಳಿ ಬೆಂಗಳೂರು, ಎಸ್.ಪಿ ಪ್ರಕಾಶ್, ಗುಂಡುಮುಣಗು ತಿಪ್ಪೇಸ್ವಾಮಿ, ಮಾಜಿ ಜಿ.ಪಂ ಸದಸ್ಯರು ಶಶಿಧರ್ ಸ್ವಾಮಿ, ಎನ್.ಟಿ ತಮ್ಮಣ್ಣ, ಎಸ್ ಸುರೇಶ್ ಅಧ್ಯಕ್ಷ ವಾಲ್ಮೀಕಿ ಮಹಾಸಭಾ ಕೂಡ್ಲಿಗಿ, ಜಿ ಓಬಣ್ಣ, ಮಾಜಿ ತಾ.ಪಂ ಸದಸ್ಯರು ಎಸ್.ಜಿ ಪಾಪನಾಯಕ, ಬೋಮ್ಮಣ್ಣ, ಮಂಜುನಾಥ ಗುಂಡುಮುಣುಗು, ಗುಡ್ಡರೆಡ್ಡಿ, ವೆಂಕಟೇಶ್ ಕುಲುಮೆಹಟ್ಟಿ ಯುವ ಮುಖಂಡರು, ಬಾಲಪ್ಪ, ಸೂರ್ಯ ಪ್ರಕಾಶ್ ಯುವ ಮುಖಂಡರು, ಬಿಟ್ಟಲಿಂಗನಹಟ್ಟಿ ಬೊಮ್ಮಣ್ಣ, ಕಂಡಕ್ಟರ್ ಬಸವರಾಜ, ಡಾ. ಟಿ ಓಂಕಾರಪ್ಪ,ಹೂಡೇಂ ಗ್ರಾ‌.ಪಂ ಅಧ್ಯಕ್ಷ ರಾಮಚಂದ್ರಪ್ಪ, ತಳವಾರ ಶರಣಪ್ಪ ನಿವೃತ್ತಿ ಬಿ.ಆರ್.ಸಿ ಬೊಮ್ಮಯ್ಯ ವಂದಿಸಿದರು. ಸೇರಿದಂತೆ ಕಾನ ಹೊಸಹಳ್ಳಿ ಗ್ರಾಮ ಪಂಚಾಯತಿ ಸರ್ವ ಸದಸ್ಯರು, ಸುತ್ತ ಮುತ್ತಲಿನ ವಾಲ್ಮೀಕಿ ಸಮುದಾಯದ ಮುಖಂಡರು ಸಾರ್ವಜನಿಕರು ಸೇರಿದ್ದರು.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ. ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button