ಜೆ.ಜೆ.ಎಂ ಹಾಗೂ ಸಿ.ಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕರು ರಾಜುಗೌಡ ಪಾಟೀಲ್.
ಕೊಂಡಗೂಳಿ ಜನೇವರಿ.13

ದೇವರಹಿಪ್ಪರಗಿ ತಾಲೂಕಿನ ಕೊಂಡಗೂಳಿ ಗ್ರಾಮದಲ್ಲಿಶನಿವಾರ 2022-23 ನೇ ಸಾಲಿನ ಜಲಜೀವನ ಮಿಷನ್ ಹಾಗೂ ಸಿಸಿ ರಸ್ತೆ ಯೋಜನೆ ಅಡಿಯಲ್ಲಿ ದೇವರಹಿಪ್ಪರಗಿ ಕೊಂಡಗೂಳಿ ಗ್ರಾಮದಲ್ಲಿ ಮನೆ ಮನೆಗಳ ಸಂಪರ್ಕ ಯೋಜನೆ ಕಾಮಗಾರಿ ಭೂಮಿ ಪೂಜೆ ಶಾಸಕರಾದ ಶ್ರೀ ರಾಜುಗೌಡ ಪಾಟೀಲ್ ಕುದರಿಸಾಲವಾಡಗಿಯಲ್ಲಿ ನೆರೆವೇರಿಸಿದರು. ನಮ್ಮ ಸರ್ಕಾರ ಇಲ್ಲ ಜೆಡಿಎಸ್ ಪಕ್ಷಕ್ಕೆ ಅಧಿಕಾರಕ್ಕೆ ಬಂದರೆ ನಾನು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುತಿದ್ದೆ ಕಾಂಗ್ರೆಸ್ ಸರ್ಕಾರ ಬಂದಿದ್ದರಿಂದ ಗ್ಯಾರಂಟಿ ಎಲ್ಲಾ ಹಣ ಬಳಸುತ್ತಿದ್ದಾರೆ ನಿಮ್ಮ ಜೊತೆಗಿದ್ದು ನನ್ನ ಕೈಲಿ ಆದಷ್ಟು ಮತ ಕ್ಷೇತ್ರದಲ್ಲಿ ಬರುವ ಎಲ್ಲಾ ಹಳ್ಳಿಗಳು ಅಭಿವೃದ್ಧಿ ಮಾಡುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು ಈ ಕಾರ್ಯಕ್ರಮ ದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷರಾದ ಸಾಯಬಣ್ಣ ಬಾಗೇವಾಡಿ, ಗ್ರಾಮ ಪಂಚಾಯತಿ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಅಭಿಯಂತರರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಮಲ್ಲಿಕಾರ್ಜುನ ಮಸಳಿ,ಸದಸ್ಯರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಭೀಮಪ್ಪ ಹಚ್ಯಾಳ.ದೇವರ ಹಿಪ್ಪರಗಿ