ಧ್ವನಿ ಸಂಘಟನೆ ಅಧ್ಯಕ್ಷರಾಗಿ ಎಸ್.ಹೆಚ್ ಮುಧೋಳ ಆಯ್ಕೆ.
ಕೊಪ್ಪಳ ಅ.26

ಜಿಲ್ಲೆಯ ಗಂಗಾವತಿ ತಾಲೂಕಿನ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ತಾಲೂಕ ಘಟಕದ ಅಧ್ಯಕ್ಷರಾಗಿ ತುಂಗಾ ವಾಣಿ ಪತ್ರಿಕೆಯ ಸಂಪಾದಕರಾದ ಎಸ್.ಎಚ್ ಮುಧೋಳ ಆಯ್ಕೆ ಯಾಗಿರುತ್ತಾರೆ. ಗಂಗಾವತಿ ನಗರದ ಪ್ರವಾಸಿ ಮಂದಿರದಲ್ಲಿ ಜರುಗಿದ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಸದಸ್ಯರ ಸಭೆಯಲ್ಲಿ ಸರ್ವಾನುಮತ ದಿಂದ ಎಚ್.ಎಸ್ ಮುಧೋಳ್ ಅವರನ್ನು ಆಯ್ಕೆ ಮಾಡಲಾಯಿತು ಎಂದು ಜಿಲ್ಲಾಧ್ಯಕ್ಷರಾದ ಗಿರೀಶ್ ಹಿರೇಮಠ ಘೋಷಣೆ ಮಾಡಿದರು. ಈ ವೇಳೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಮುದೋಳ ಮಾತನಾಡುತ್ತಾ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಅವರ ಆದೇಶದ ಮೇರೆಗೆ ಸಂಘದ ಸರ್ವ ಸದಸ್ಯರು ಒಮ್ಮತದಿಂದ ನನ್ನನ್ನು ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದು ಹೆಮ್ಮೆಯ ವಿಷಯವಾಗಿದ್ದು ನನ್ನ ಮೇಲೆ ಜವಾಬ್ದಾರಿಯ ಸಹ ಹೆಚ್ಚಾಗಿರುತ್ತದೆ.

ತಾಲೂಕಿನ ಪತ್ರಕರ್ತರ ಏಳಿಗೆಗೆ ಸದಾ ಸ್ಪಂದಿಸುವುದಾಗಿ ತಿಳಿಸಿದರು. ನಂತರ ಜಿಲ್ಲಾಧ್ಯಕ್ಷ ರಾದ ಮಾತನಾಡುತ್ತಾ ಸಮಾಜದಲ್ಲಿ ಪತ್ರಕರ್ತರಿಗೆ ಅನೇಕ ಅಡೆ ತಡೆಗಳು ಉಂಟಾಗುತ್ತಿದ್ದು. ನಿರ್ಭಯರಾಗಿ ನಿಷ್ಪಕ್ಷಪಾತ ದಿಂದ ವರದಿ ಮಾಡಲು ಅನೇಕ ತೊಂದರೆಗಳು ಉಂಟಾಗುತ್ತಿವೆ. ಎಲ್ಲಾ ಪತ್ರಕರ್ತರು ಸಂಘಟನಾತ್ಮಕವಾಗಿ ಕಾರ್ಯ ನಿರ್ವಹಿಸಿದಲ್ಲಿ ನೈಜ ವರದಿ ಪ್ರಕಟಿಸಲು ಸಾಧ್ಯವಾಗುತ್ತದೆ ಆದ್ದರಿಂದ ನೂತನ ತಾಲೂಕ ಅಧ್ಯಕ್ಷರು ಪತ್ರಕರ್ತರ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸಿಲಿ ಎಂದು ತಿಳಿಸಿದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಎಚ್ ಮುಧೋಳ ಅವರಿಗೆ ಸನ್ಮಾನಿಸಿ ಅಭಿನಂದನೆಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರಾದ ಎಂ.ಡಿ ಅಲಿ, ಎಂ.ಡಿ ಗೌಸ್, ನಾಗರಾಜ ಕೊಟ್ನೆಕಲ್, ಸಲೀಂ ಬಾಗವಾನ, ರಾಮಕೃಷ್ಣ ಸಿ.ಡಿ, ಕುಕನೂರು ತಾಲೂಕ ಧ್ವನಿ ಸಂಘಟನೆ ಅಧ್ಯಕ್ಷ ಸುನಿಲ ಕುಮಾರ ಮಠದ, ಪ್ರಧಾನ ಕಾರ್ಯ ದರ್ಶಿಯಾದ ಅಲಿಯಾಸ್ ವೀರಯ್ಯ ವಿ ಹಿರೇಮಠ, ಶಿವಪ್ಪ ಕಾಮದೋಡ್ಡಿ, ಹುಸೇನ್ ಹಂಚಿನಾಳ, ರಮೇಶ್ ಕಾಳಿ, ಇನ್ನಿತರರು ಪಾಲ್ಗೊಂಡಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಂಜುನಾಥ್.ನವಲಿ.ಕೊಪ್ಪಳ.