“ಸ್ನೇಹ ಬಳಗ ಬಂಧು ಬಾಂದವರಿಗೆ ಸ್ವಾಗತ ಸುಸ್ವಾಗತವು”…..

ಸ್ನೇಹ ಬಳಗ ಬಂಧು ಬಾಂದವರಿಗೆ ಸ್ವಾಗತ ಸುಸ್ವಾಗತವು
ಐತಿಹಾಸಿಕ ಸ್ನೇಹ ಸಮ್ಮೇಳಕ್ಕೆ ಸ್ವಾಗತ
ಸುಸ್ವಾಗತವು
ಅಕ್ಷರ ಜ್ಞಾನ ಗುರು ಗುರು ಮಾತೆಯರಿಗೆ
ಗೌರವದ ಸ್ವಾಗತ ಸುಸ್ವಾಗತವು
ಅನುಭವ ಅಮೃತ ಧಾರೆಯರೆದ ಹೆತ್ತವರಿಗೆ
ಹೊತ್ತ ಹಿರಿಯರಿಗೆ ಆದರದ ಸ್ವಾಗತ
ಸುಸ್ವಾಗತವು
ದೇವಾನು ದೇವ ನಾಡಿನ ಭಂಡಾರದ ಒಡೆಯ
ಶ್ರೀರಾವುತರಾಯ
ಶ್ರೀಕಾಶಿ ಕಲ್ಮೇಶ್ವರ ಕೃಪೆ ಕೊರುತ ಸ್ವಾಗತ
ಸುಸ್ವಗತವು ಶ್ರೀಬಸವ ಅನುಭವ ಮಂಟಪದ
ವೀರ “ವಚನ ರಕ್ಷಕ” ಮಡಿವಾಳ ಮಾಚಿದೇವ
ಪೂಣ್ಯ ಭೂಮಿಗೆ ಸ್ವಾಗತ ಸುಸ್ವಾಗತವು
ಸ್ನೇಹಿತರೇ ಸದಾ ಪ್ರೀತಿ ವಾತ್ಸಲ್ಯ ಚಿರ ನೆನಪು
ಬಾಲ್ಯದ ಸವಿ ನೆನಪ ಆಟ ಪಾಠ ಕೂಟ
ಸರ್ವ ಹೃದಯ ವೈಶಾಲ್ಯ ಬೇದವಿರದ
ಸುಮನಗಳಿಗೆ ಸ್ವಾಗತ ಸುಸ್ವಗತವು
ಎಲ್ಲೋ ಇದ್ದವರು ಇಂದು ಒಂದಡೆ ಸ್ನೇಹ
ಸಮ್ಮೇಳನದಿ ಸೇರುವ ಬಾಲ್ಯದ ಗೆಳೆಯರಿಗೆ
ಹರುಷದಿ ನಲಿಯೋಣ ಸವಿನೆನಪುಗಳ ಹೂವು
ಪರಿಮಳ ಸುಸೂವ ಸ್ನೇಹ ಬಳಗದವರಿಗೆ
ಆದರದ ಸ್ವಾಗತ ಸುಸ್ವಾಗತವು
-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟ