ವಿಜಯನಗರ ಜಿಲ್ಲೆಯ 90-ವಿಜಯನಗರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಹೆಚ್. ಆರ್.ಗವಿಯಪ್ಪ ಭರ್ಜರಿ ರೋಡ್ ಶೋ
ಹೊಸಪೇಟೆ ಏ.18
ಹೆಚ್.ಅರ್.ಗವಿಯಪ್ಪ ರವರು ದಿನಾಂಕ 17/04/2023 ಸೋಮವಾರ ಹೊಸಪೇಟೆ. ನಗರದ ಶ್ರೀ ಮಹಾತ್ಮಾ ಗಾಂಧಿ ವೃತ್ತದಿಂದ ಮೆರವಣಿಗೆ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಹಿತೈಷಿಗಳು, ಅಭಿಮಾನಿಗಳು, ಎಲ್ಲಾ ಸಮಾಜದ ಮುಖಂಡರುಗಳು ಮತ್ತು ಕ್ಷೇತ್ರದ ಮತದಾರರ ಮೂಲಕ ರೋಡ್ ಶೋ ಮೂಲಕ ತೆರಳಿ ಸಹಾಯಕ ಆಯುಕ್ತರು ಕಚೇರಿಗೆ ತೆರಳಿ ತಮ್ಮ ನಾಮಪತ್ರವನ್ನು ಸಲ್ಲಿಸಿದರು.

ನಂತರ ಹೆಚ್.ಅರ್.ಗವಿಯಪ್ಪ ಮೂರು ಬಾರಿ ಅಭ್ಯರ್ಥಿಯಾದ ಆನಂದ್ ಸಿಂಗ್ ಬಡಜನರಿಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳು ನಿರುದ್ಯೋಗ ಯುವಕರಿಗೆ ಉದ್ಯೋಗಾವಕಾಶಗಳು ನಿವೇಶನಗಳು ಕಲ್ಪಿಸಿಲ್ಲ ಕನಿಷ್ಠ ಸೌಲಭ್ಯಗಳನ್ನಾದರೂ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಸಿರಾಜ್ ಶೇಕ್,
ರಾಜಶೇಖರ್ ಹಿಟ್ನಾಳ್,ಅವರು ಮಾತನಾಡಿ ಒಟ್ಟು 11 ಜನ ಅಭ್ಯರ್ಥಿಗಳಿದ್ದರೂ ಸಹ ಪಕ್ಷದ ತೀರ್ಮಾನದಂತೆ ಎಲ್ಲರೂ ಒಗ್ಗೂಡಿ ಪಕ್ಷದ ಅಭ್ಯರ್ಥಿ ಎಚ್ ಆರ್ ಗವಿಯಪ್ಪ ಪರ ಕೆಲಸ ಮಾಡುತ್ತೇವೆ ಕಾಂಗ್ರೆಸ್ ಪಕ್ಷವು ಈ ಭಾರಿ ಗೆಲುವು ಸಾಧಿಸುವುವೆವು ಎಂದು ರಾಜಶೇಖರ್ ಹಿಟ್ನಾಳ್ ಹೇಳಿದರು,

ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷರಾದ ಸಿರಾಜ್ ಶೇಕ್, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ರಾಜಶೇಖರ್ ಹಿಟ್ನಾಳ್, ಸೈಯದ್ ಮೊಹಮದ್, ಇಮಾಮ್ ನಿಯಾಜಿ, ಕೆ.ಎಂ.ಹಾಲಪ್ಪ, ಕುರಿ ಶಿವಮೂರ್ತಿ, ಗುಜ್ಜಲ ನಾಗರಾಜ್, ರಘು.ಗುಜ್ಜಲ , ನಿಂಬಗಲ್ ರಾಮಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ವಿನಾಯಕ ಶೆಟ್ಟರ್, ಸೇವಾದಳ ಘಟಕದ ಜಿಲ್ಲಾ ಸಂಘಟಕ ಬಿ.ಮಾರೆಣ್ಣ, ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಕೊಟಗಿನಾಳ್ ಹುಲುಗಪ್ಪ, ಯುವ ಮುಖಂಡರಾದ ಹೆಚ್.ಜಿ.ಗುರುದತ್ತ, ಹೆಚ್.ಜಿ.ವಿರುಪಾಕ್ಷಪ್ಪ, , ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಭಾಗ್ಯ ಲಕ್ಷ್ಮೀ ಭರಾಡೆ, ಕೆಪಿಸಿಸಿ , ಕಾಂಗ್ರೆಸ್ ಪಕ್ಷದ ಮುಖಂಡರುಗಳು, ನಗರಸಭಾ ಸದಸ್ಯರುಗಳು, ಎಲ್ಲ ಮುಂಚೂಣಿ ಘಟಕಗಳ ಅಧ್ಯಕ್ಷರು ಎಲ್ಲಾ ಸಮಾಜದ ಮುಖಂಡರು, ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಿತೈಷಿಗಳು ಉಪಸ್ತಿತರಿದ್ದರು.
ಜಿಲ್ಲಾ ವರದಿಗಾರರು:ಮಾಲತೇಶ್ ಶೆಟ್ಟರ್.ಹೊಸಪೇಟೆ