“ಜಗಜ್ಯೋತಿ ವಿಶ್ವ ಗುರು ಶ್ರೀಬಸವಣ್ಣನವರ ಅಳಿಯದ ವಿಶ್ವ ಸಂದೇಶ”…..

ಜಗಜ್ಯೋತಿ ವಿಶ್ವಗುರು




ಶ್ರೀಬಸವಣ್ಣನವರ
ಅಳಿಯದ ವಿಶ್ವ ಸಂದೇಶ
ದೇವನೊಬ್ಬ ಮಾನವನಲ್ಲಿದ್ದಾನೆ
ದೇಹ ದೇಗುಲದಲ್ಲಿ
ಸುಮನದ ಆತ್ಮವೇ ಪರಮಾತ್ಮ
ಕಾಯಕದಲ್ಲಿ ಸ್ವರ್ಗದ ಸಿರಿ
ವಿಲಾಸಿತನ ಮೀತಿ ಇರಲಿ
ಆಲಸಿ ಜೀವನವೇ ನರಕ ಮತೀಯಭಾವ
ಲಿಂಗಗಬೇಧ ಬೇಡ
ಸಮಪಾಲು ಸಮಾನತೆಯೇ
ಮಾನವೀಯತೆಯ ನಿಜ ಸಾರ
ಅಯ್ಯಾ ಎನ್ನವುದೇ ಕಲ್ಯಾಣ
ಎಲವೋ ಎಂದರೆ ಹೀನ ಮನ
ಸರ್ವರ ಕಲ್ಯಾಣವೇ ಶ್ರೇಷ್ಠತೆಯು
ಬದುಕಿಗೆ ಮೆರಗು
ಕಾಲಜ್ಞಾನದ ವಚನ
ಸಾಹಿತ್ಯ ಜನಮನದ ಸಿರಿಯು
ದಯವೇ ಧರ್ಮದ ಮೂಲ ಕಾಯಕಜೀವಿಗೆ
ಸದಾ ಜಯ ಅಂಧಶ್ರೇದ್ಧೆ ಒಪ್ಪದು
ಅನುಭವ ಅಮೃತ ಸವಿ
ಲಿಂಪೂಜೆ ಶರಣ ತತ್ವ
ಜಗದಲಿ ಮಾನವೀಯತೆ ಪ್ರಜ್ವಲಿಸಲಿ ಸರ್ವ
ಮಾನವ ಹೃದಯ ಸಿಂಹಾಸನದಿ ನಿತ್ಯ
ನಿರಂತರ ನಂದಾದೀಪ ಬೆಳಗುತಿರಲಿ
-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.