“ಕನ್ನಡ ತ್ರಿಪದಿ ಬ್ರಹ್ಮ ಶ್ರೀ ಸರ್ವಜ್ಞ”…..

ಸರ್ವಕಾಲ ಜನಹಿತ
ತ್ರಿಪದಿ ವಚನ ಸಂತ
ಶ್ರೀ ಸರ್ವಜ್ಞ ಕವಿ
ಕಾಶೀ ವಿಶ್ವನಾಥ ವರ
ಪುತ್ರ ಪುಷ್ಪದತ್ತ ನಾಮದಾರಿ
ಸಾಮಾಜಿಕ ಧಾರ್ಮಿಕ
ರಾಜ ನೀತಿಜ್ಞ ಸೃಷ್ಠಿಯ ಸಿರಿ
ಜನಸಾಮಾನ್ಯರ ಅರಿವಿನ
ಗುರು ಸಾರಥಿ ಜನ ಹಿತ ಸಂತ
ಶ್ರೀಸರ್ವಜ್ಞ ಆಡು ಮುಟ್ಟದ
ಸೊಪ್ಪಿಲ್ಲ ಸರ್ವಜ್ಞ ಕವಿ
ತ್ರಿಪದಿ ವಚನವಿಲ್ಲ
ನಾಡನುಡಿ ಅಗಮ್ಯ
ಪಾಂಡಿತ್ಯ ಪ್ರವೀಣ
ಸರಳತೆಯ ಸಂಗತಿ
ಪ್ರಾಸ ಸಹಿತ ವಚನ
ವಿಶ್ವದ ಮಹಾ ಬೆಳಕು
ಮಹಾಜ್ಞಾನಿ ಸರ್ವರೊಳು
ಒಂದೊಂದು ನುಡಿ ಕಲಿತು
ವಿದ್ಯಯ ಪರ್ವತವಾದ
ಆಶು ಮಹಾಕವಿ
ಕನ್ನಡ ತ್ರಿಪದಿ ಬ್ರಹ್ಮ
ಬದುಕಿನ ಕೌಶಲ್ಯಚಾಣಕ್ಯ
ಅನುಭವದ ನುಡಿ ಮುತ್ತು
ಸರಳವಾದ ಸಮಾಜೀಕ
ನಂದಾ ದೀಪವು
ನಿಜ ತಮ ಕಳೆವ
ಜಗದ ಬೆಳಕು
ಕನ್ನಡಕೊಬ್ಬನೇ ಚಿರ
ನೆನಪು ಶ್ರೀಸರ್ವಜ್ಞ
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.