ಕರ್ನಾಟಕ ಪತ್ರಕರ್ತರ ಸಂಘದಲ್ಲಿ ಕಾರ್ಯನಿರತರಾಗಿ ಅಗಲಿದ ಆತ್ಮೀಯ ಸ್ನೇಹಿತರ ಕುಟುಂಬಕ್ಕೆ, ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಾಂತ್ವನ ಹೇಳಿ – ಆರ್ಥಿಕ ಧನ ಸಹಾಯ ಹಸ್ತ ನೀಡಿದರು.

ಕೂಡ್ಲಿಗಿ ಜು.30

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸುಮಾರು ವರ್ಷಗಳಿಂದ ಅಮ್ಮನಕೇರಿ ಎ.ಎಂ ಬಸವರಾಜ್ ಸ್ವಾಮಿ ರವರು ಧರಣಿ ಟಿವಿ ಚಾನಲ್ ನಲ್ಲಿ ತಾಲೂಕು ವರದಿಗಾರರಾಗಿ ಹಾಗೂ ಸಂಘದ ಉಪಾಧ್ಯಕ್ಷರು ಆಗಿದ್ದ ಅವರು ಹಾಗೂ ಇನ್ನೋರ್ವ ಸ್ನೇಹಿತನಾದ ಗುನ್ನಳ್ಳಿ ರಾಘವೇಂದ್ರ ಕೂಡ್ಲಿಗಿ ಅರ್ಚನವಾಣಿ ಕನ್ನಡ ದಿನ ಪತ್ರಿಕೆ ವರದಿಗಾರರು ರವರು ಸಹ ಇಬ್ಬರು ಸ್ನೇಹಿತರು ಅನಾರೋಗ್ಯ ನಿಮಿತ್ತ ಅವರ ಕುಟುಂಬವನ್ನು ಹಾಗೂ ನಮ್ಮನ್ನಗಲಿದ್ದಾರೆ.

ಆದ್ದರಿಂದ ಕರ್ನಾಟಕ ಪತ್ರಕರ್ತರ ಸಂಘದಿಂದ ಆರ್ಥಿಕ ನೆರವಿನ ಹಸ್ತವನ್ನು ಅಮ್ಮನಕೇರಿ ಗ್ರಾಮದಲ್ಲಿ ಬಸವರಾಜ್ ಸ್ವಾಮಿ ಅವರ ತಂದೆ ವೀರಭದ್ರಪ್ಪ ಹಾಗೂ ಪತ್ನಿ ಶೃತಿ ಹಾಗೂ ಅವರಿ ಕೈಯಲ್ಲಿ ಕೊಡಲಾಗಿತ್ತು ಹಾಗೂ ಗುನ್ನಳ್ಳಿ ರಾಘವೇಂದ್ರ ಅವರ ಪತ್ನಿಯಾದ ಜ್ಯೋತಿರವರ ಕೈಯಲ್ಲಿ ದಿನಾಂಕ:29-7-2026 ರಂದು ಕರ್ನಾಟಕ ಪತ್ರಕರ್ತರ ಸಂಘದ ಸಕ್ರಿಯ ಸದಸ್ಯರೂ, ಪತ್ರಕರ್ತರೂ ಆಗಿದ್ದ ಅಗಲಿದ ಸ್ನೇಹಿತರ ಬಸವರಾಜ್ ಸ್ವಾಮಿ ಹಾಗೂ ಗುನ್ನಳ್ಳಿ ರಾಘವೇಂದ್ರ ಅವರ ಅಕಾಲಿಕ ನಿಧನ ಸಮಸ್ತ ಮಾಧ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಸದಾ ಸಮಾಜದ ಹಿತಕ್ಕಾಗಿ ಶ್ರಮಿಸುತ್ತಿದ್ದ ನಮ್ಮ ಆತ್ಮೀಯ ಸ್ನೇಹಿತರ ಅಗಲಿಕೆಯಿಂದ ಕಂಗಾಲಾಗಿದ್ದ ಅವರ ಕುಟುಂಬಕ್ಕೆ ಸಂಘವು ಆರ್ಥಿಕ ಸಹಾಯ ಆಸರೆಯಾಗಿ ನಿಂತಿದೆ.

ಇಂದು ಸಂಘದ ಗೌರವಾನ್ವಿತ ಅಧ್ಯಕ್ಷರಾದ ರಾಘವೇಂದ್ರ ಸಾಲುಮನೆ ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ಅಗಲಿದ ಪತ್ರಕರ್ತರ ನಿವಾಸಕ್ಕೆ ಭೇಟಿ ನೀಡಿ, ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಲಾಯಿತು. ಅಲ್ಲದೆ, ಸಂಘದ ವತಿಯಿಂದ ₹10,000] ಮೊತ್ತದ ನೆರವಿನ ಹಣವನ್ನು ಹಸ್ತಾಂತರಿಸಲಾಯಿತು.

ಅಧ್ಯಕ್ಷರಾದ ರಾಘವೇಂದ್ರ ಸಾಲುಮನೆ ರವರು “ನಮ್ಮ ಸಂಘದ ನೆಚ್ಚಿನ ಸದಸ್ಯರನ್ನು ಕಳೆದು ಕೊಂಡಿರುವುದು ನಮಗೆಲ್ಲರಿಗೂ ತೀವ್ರ ದುಃಖ ತಂದಿದೆ. ಅವರ ಕುಟುಂಬಕ್ಕೆ ಎದುರಾಗಿರುವ ಈ ಕಷ್ಟದ ಸಮಯದಲ್ಲಿ ಸಂಘವು ಅವರನ್ನು ಮರೆಯದೆ ಜೊತೆಗಿರುತ್ತದೆ. ಮುಂಬರುವ ದಿನಗಳಲ್ಲೂ ಅವರ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡಲು ನಮ್ಮ ಪದಾಧಿಕಾರಿಗಳು ಬದ್ಧರಾಗಿದ್ದಾರೆ.”

ಈ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಕೆ.ಎಚ್.ಎಸ್. ರಾಜು ಸಂಘದ ಜಿಲ್ಲಾ ಗೌರವಾಧ್ಯಕ್ಷರಾದ ಮುರುಳಿದರ ಶೆಟ್ರು, ಕೂಡ್ಲಿಗಿ ಕರ್ನಾಟಕ ಪತ್ರಕರ್ತರ ಸಂಘದ ಗೌರವಾಧ್ಯಕ್ಷರಾದ ಹೊಂಬಾಳೆ ತಿಪ್ಪೇಸ್ವಾಮಿ, ಉಪಾಧ್ಯಕ್ಷರಾದ ಮಲ್ಲಾಪುರದ ತಿಪ್ಪೇಸ್ವಾಮಿ, ಇನ್ನೋರ್ವ ಉಪಾಧ್ಯಕ್ಷರಾದ ವೈ.ಮಹದೇವ ಪ್ರಧಾನ ಕಾರ್ಯದರ್ಶಿ ಗುನ್ನಳ್ಳಿ ಶ್ರೀಧರ ಹಾಗೂ ಸಂಘದ ಎಲ್ಲಾ ಕಾರ್ಯಕಾರಿ ಸಮಿತಿಯ ಪತ್ರಕರ್ತರು ಅಗಲಿದ ಪತ್ರಕರ್ತ ಮಿತ್ರರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಕರ್ನಾಟಕ ಪತ್ರಕರ್ತರ ಸಂಘವು ಪ್ರಾರ್ಥಿಸುತ್ತದೆ.

ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ ಬಿ ಸಾಲುಮನಿ ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button