ಅಸ್ತಮಾ ರೋಗವನ್ನು ನಿಷ್ಕಾಳಜಿ ಮಾಡದೇ, ಮುಂಜಾಗೃತಿ ಕ್ರಮ ವಹಿಸಿ – ಸಂಗಮೇಶ ಪಟ್ಟಣಶೆಟ್ಟಿ.
ಹುನಗುಂದ ಮೇ.17

ಅನುವಂಶಿಕವಾಗಿ, ಕಾಟನ್ ಫ್ಯಾಕ್ಟರಿ ಮತ್ತು ಕಲುಷಿತ ವಾತಾವರಣದ ಜೊತೆಗೆ ಧೂಮಪಾನ ಮಾಡುವದರಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಬರುವಂತ ಅಪಾಯಕಾರಿ ಅಸ್ತಮಾ ರೊಗವನ್ನು ಮುಂಜಾಗೃತಾ ಕ್ರಮವಾಗಿ ಇನ್ಸುಲೇಷನ್ ಚಿಕಿತ್ಸೆ ಮೂಲಕ ಸಂಪೂರ್ಣ ನಿಯಂತ್ರಣ ಮಾಡಬಹುದು ಎಂದು ಪ್ರಾಚಾರ್ಯ ಸಂಗಮೇಶ ಪಟ್ಟಣಶಟ್ಟಿ ಹೇಳಿದರು. ಪಟ್ಟಣದ ಗೌರಮ್ಮ ಚರಂತಿಮಠ ನರ್ಸಿಂಗ್ ವಿಜ್ಞಾನ ಮತ್ತು ಔಷಧ ಮಹಾ ವಿದ್ಯಾಲಯದಲ್ಲಿ ಹಮ್ಮಿಕೊಂಡ ವಿಶ್ವ ಅಸ್ತಮಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇತ್ತೀಚೆಗೆ ಅಸ್ತಮಾ ಸಾಮಾನ್ಯ ಕಾಯಿಲೆಯಾಗಿದ್ದರೂ ಸಹಿತ ನಿಷ್ಕಾಳಜಿ ಮಾಡಿದರೇ ಖಂಡಿತ ಅಪಾಯ ತಪ್ಪಿದ್ದಲ್ಲ. ಅದಕ್ಕೆ ತಕ್ಷಣ ಚಿಕಿತ್ಸೆ ಪಡೆದು ಅಸ್ತಮಾ ನಿಯಂತ್ರಣ ಮಾಡಿ ಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದರು. ನಾಗಾರ್ಜುನ್ ಎಂ ಮಾತನಾಡಿ ಕಾಯಿಲೆ ಬಂದರೆ ಅಪಾಯ ತಪ್ಪಿದ್ದಲ್ಲ. ಅಧುನಿಕ ತಂತ್ರಜ್ಞಾನ ಯುಗದಲ್ಲಿ ಯಾವುದೆ ಮಾರಣಾಂತಿಕ ಕಾಯಿಲೆ ಬರುವ ಮುನ್ನ ಲಭ್ಯವಿರುವ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಅಪಾಯದಿಂದ ಪಾರಾಗುವ ಮಾರ್ಗವನ್ನು ಅನುಸರಿಸಬೇಕು ಎಂದರು. ವೀಣಾ ಕಿರಗಿ, ಸುನೀಲ್ ಕೆ, ಜಯಶ್ರೀ ಎನ್, ಶರಣಮ್ಮ ನಾಡಗೌಡ ಮತ್ತು ಮಹಾಂತೇಶ ಭಾವಿಕಟ್ಟಿ, ಹನಮಂತ ಕರೆಕೋಟಿ ಉಪಸ್ಥಿತರಿದ್ದರು. ನರ್ಸಿಂಗ್ ವಿದ್ಯಾರ್ಥಿಗಳು ಭಾಗವಿಸಿದ್ದರು ಲಕ್ಷ್ಮಿ ರಂಜಿತಾ ಸ್ವಾಗತಿಸಿದರು. ಚಂದ್ರಕಲಾ ನಿರೂಪಿಸಿದರು. ರಾಹುಲ ವಂದಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ.