ವಿದ್ಯಾರ್ಥಿಗಳು ತಂದೆ ತಾಯಿ ಗುರುಗಳಿಗೆ ವಿಧೇಯರಾಗಿ ಚಿಂತನಾಶೀಲರಾಗಿ, ಕ್ರಿಯಾಶೀಲರಾಗಿ ಬದುಕು ರೂಪಿಸಿ ಕೊಳ್ಳಿ- ಶಾಸಕ ಡಾ, ಶ್ರೀನಿವಾಸ್.ಎನ್.ಟಿ
ಕೂಡ್ಲಿಗಿ ಫೆ.04

ವಿದ್ಯಾರ್ಥಿಗಳು ಶಿಕ್ಷಣದಿಂದ ಭವಿಷ್ಯ ರೂಪಿಸಿ ಕೊಳ್ಳುವ ದಿಕ್ಕಿನಲ್ಲಿ ಸಾಗಿ ಭವಿಷ್ಯದ ಭಾರತ ನಿರ್ಮಾಣ ಮಾಡುವ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಲು ಸಜ್ಜಾಗಬೇಕು ಎಂದು ಶಾಸಕ ಡಾ, ಎನ್.ಟಿ ಶ್ರೀನಿವಾಸ್ ಹೇಳಿದರು. ಪಟ್ಟಣದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ 4 ನೂತನ ಕೊಠಡಿಗಳ ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಓದುವಂತ ವಿದ್ಯಾರ್ಥಿಗಳು ಬಡವರ ಮಕ್ಕಳಾಗಿರು ವುದರಿಂದ ನಿಮ್ಮ ಭವಿಷ್ಯ ಉಜ್ವಲವಾಗ ಬೇಕಾದರೆ ದುಚ್ಚಟಗಳಿಂದ ದೂರವಿದ್ದು, ಸಿಕ್ಕಿರುವ ಸುವರ್ಣ ಅವಕಾಶವನ್ನು ಸದುಪಯೋಗ ಪಡಿಸಿ ಕೊಳ್ಳಬೇಕು. ವಿದ್ಯಾರ್ಥಿಗಳು ತಂದೆ, ತಾಯಿ, ಗುರುಗಳಿಗೆ ವಿಧೇಯರಾಗಿ ಸದಾ ಚಿಂತನಾಶೀಲರಾಗಿ, ಕ್ರಿಯಾಶೀಲರಾಗಿ ಬದುಕನ್ನು ರೂಪಿಸಿಕೊಂಡು ಪಾಲಕರ, ಊರಿನ ಕೀರ್ತಿ ಹೆಚ್ಚಿಸುವ ಮಕ್ಕಳಾಗಿ ಬೆಳೆಯಬೇಕು ಎಂದರು.ಅದಕ್ಕೂ ಮೊದಲು ತಾಲೂಕಿನ ಚಂದ್ರಶೇಖರ್ ಪುರ, ಅಮ್ಮನಕೆರೆ ಹಾಗೂ ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ನಗರದ ದಲಿತ ಕಾಲೋನಿಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಚಂದ್ರಶೇಖರ್ ಪುರ ಗ್ರಾಮದಲ್ಲಿ. ಶಾಸಕ. ಡಾ, ಶ್ರೀನಿವಾಸ್ ಅವರು ಸಿ.ಸಿ ರಸ್ತೆ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ. ಗ್ರಾಮದ ವಿದ್ಯಾವಂತ ಯುವಕರು. ನಮ್ಮ ಗ್ರಾಮದ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ ಅವಶ್ಯಕತೆ ಇದೇ ಆದ್ದರಿಂದ ತಾವುಗಳು ನಮ್ಮ ಗ್ರಾಮದಲ್ಲಿರುವ ಅಂಬೇಡ್ಕರ್ ಭವನ. ದುರಸ್ತಿಯಲ್ಲಿದೆ ಅಂಬೇಡ್ಕರ್ ಭವನ ದುರಸ್ತಿ ಮಾಡಿಸಿ ಗ್ರಂಥಾಲಯ ಮಾಡಿ ಕೊಡಬೇಕೆಂದು ಬೇಡಿಕೆ ಇಟ್ಟರು.

ಶಾಸಕರು ಮಾತನಾಡಿ ಭಾರತ ಕಂಡ ಅತ್ಯಂತ ಶ್ರೇಷ್ಠ ವಿದ್ವಾಂಸರಲ್ಲಿ ಮೊದಲ ಸ್ಥಾನದಲ್ಲಿರುವ ವ್ಯಕ್ತಿ ಡಾ, ಬಿ.ಆರ್ ಅಂಬೇಡ್ಕರ್ ಅವರ ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂದು ಅಂಬೇಡ್ಕರ್ ಹೇಳಿದಂತೆ ಇತಿಹಾಸವನ್ನು ನೀವು ಸೃಷ್ಟಿಸ ಬೇಕಾದರೆ ನಿಮ್ಮ ಬದುಕಿನಲ್ಲಿ ಭಾರತರತ್ನ ಡಾ, ಬಿ.ಆರ್ ಅಂಬೇಡ್ಕರ್ ಅವರ ಚಿಂತನೆ ಮತ್ತು ತತ್ವಗಳನ್ನು ಅಳವಡಿಸಿ ಕೊಳ್ಳಬೇಕು. ನಮ್ಮ ಮನೆಗಳನ್ನು ಎಷ್ಟು ಸ್ವಚ್ಛವಾಗಿ ಹಿಡಿದು ಕೊಳ್ಳುತ್ತವೆ. ಹಾಗೆ ಗ್ರಾಮಗಳಲ್ಲಿ ಅಂಬೇಡ್ಕರ್ ಸಮುದಾಯ ಭವನ ಮತ್ತು ಇತರೆ ಸಮುದಾಯ ಭವನಗಳನ್ನು ಸ್ವಚ್ಛವಾಗಿ ಕಾಪಾಡಿ ಕೊಳ್ಳುವುದು ನಮ್ಮೆಲ್ಲರ ಧರ್ಮ ಎಂದರು. ಈ ಸಂದರ್ಭದಲ್ಲಿ ಪಟ್ಟಣ ಪಂ.ಅಧ್ಯಕ್ಷರು ಕಾವಲಿ ಶಿವಪ್ಪ ನಾಯಕ, ಪ್ರಾಚಾರ್ಯರು ಕೊತ್ತಲಮ್ಮ, ಜಿ ಒಬಣ್ಣ, ಪ್ರಭಾಕರ್, ಎಸ್.ಸುರೇಶ್, ಎಸ್.ದುರುಗೇಶ್, ಎಇಇ ನಾಗನಗೌಡ, ರಾಮದುರ್ಗ ಗ್ರಾ.ಪಂಚಾಯಿತಿ ಅಧ್ಯಕ್ಷ ಓ.ರಾಜಪ್ಪ, ಗ್ರಾ.ಪಂ ಪಿಡಿಒ ಕೃಷ್ಣನಾಯ್ಕ, ಕಾಂಗ್ರೆಸ್ ಮುಖಂಡರಾದ ಸಿ.ನಿಂಗಣ್ಣ, ಮಂಜುನಾಥ್, ಜಿ.ಎಂ.ಪ್ರಸನ್ನಕುಮಾರ್, ಎಂ.ಈರಣ್ಣ, ಸದಸ್ಯರಾದ ಗುರುಸಿದ್ದಪ್ಪ, ಗೂಳೆಪ್ಪ, ವಿ.ಈರಣ್ಣ, ಕೆ.ರುದ್ರಮುನಿ, ಟಿ.ರುದ್ರೇಶ್, ಎನ್.ಎಂ.ಮಲಿಯಪ್ಪ, ಶಾಸಕರ ಆಪ್ತ ಸಹಾಯಕ ಮರುಳಸಿದ್ದಪ್ಪ, ಬಸವನಗೌಡ, ಗ್ರಾಪಂ ಕಾರ್ಯದರ್ಶಿ ರಾಜಾಭಕ್ಷಿ ಸೇರಿದಂತೆ ಮುಖಂಡರು ಇತರರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರಸಾಲುಮನೆ ಕೂಡ್ಲಿಗಿ.