ವಿಶ್ವ ಕ್ಯಾನ್ಸರ್ ರೋಗ – ದಿನ ಜನಜಾಗೃತಿ.
ಹೊನ್ನಾಕಟ್ಟಿ ಫೆ.04

ಹೊನ್ನಾಕಟ್ಟಿ ಗ್ರಾಮದಲ್ಲಿ ಚಾವಡಿ ಕಟ್ಟಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹಯೋಗದಲ್ಲಿ ವಿಶ್ವ ಕ್ಯಾನ್ಸರ್ ರೋಗ ದಿನ ಜನಜಾಗೃತಿ ಆಯೋಜಿಸಲಾಗಿತ್ತು ಗ್ರಾಮ ಪಂಚಾಯತ ಸದಸ್ಯರಾದ ಗೋವಿಂದಪ್ಪ ಕೆ ಗೌಡರ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್ ಎಸ್ ಅಂಗಡಿಯವರು ಆಧುನಿಕ ಜೀವನ ಶೖಲಿ ಮಾನವನಲ್ಲಿ ಅಸಾಂಕ್ರಾಮಿಕ ರೋಗಗಳು ಅಧಿಕವಾಗಿ ಮಾನವನನ್ನು ಬಾಧಿಸಿ ಬದುಕು ನರಕ ಕೂಪಕ್ಕೆ ತಳ್ಳುತ್ತಿವೆ. ತಂಬಾಕು ಗುಟ್ಕಾ ಸೇವನೆ, ಬೀಡಿ ಸಿಗರೇಟ್ ಧೂಮ್ರಪಾನ ಮದ್ಯಪಾನ ದುಶ್ಚಟಗಳಿಂದ ಅಸಾಂಕ್ರಾಮಿಕ ರೋಗಗಳಾದ ಮಧುಮೆಹ, ರಕ್ತದೊತ್ತಡ, ಕ್ಯಾನ್ಸರ್ ಸ್ಥೂಲಕಾಯ ಅಂಧತ್ವ ರೋಗಗಳ ನಿಯಂತ್ರಣ ಮುಂಜಾಗ್ರತೆ ಕ್ರಮಗಳನ್ನು ಪಾಲಸಬೇಕು ಪೋಷಕಾಂಶಯುಕ್ತ ಆಹಾರ ಸೇವನೆ ಯೋಗ ಸ್ವಚ್ಛತೆಗೆ ಮಹತ್ವ ನೀಡುವದರಿಂದ ಮಾನವ ಆರೋಗ್ಯವಂತ ಜೀವನ ನಡೆಸಬಹುದು ಬೇಕರಿ ಪಧಾರ್ಥ ವರ್ಜಿಸಬೇಕು ಹಣ್ಣು ತರಕಾರಿ ಹೆಚ್ಚು ಸೇವಿಸಬೇಕು ಯಾವುದೇತರಹ ರೋಗ ಲಕ್ಷಣಗಳು ಕಂಡು ಬಂದರೆ ಉಚಿತ ಕರೆ ಸಂಖ್ಯೆ 104 ಸಂಪರ್ಕಿಸಿ ಸಲಹೆ ಪಡೆಯಬಹುದು.

ಅಸಾಂಕ್ರಾಮಿಕ ರೋಗಗಳಿಗೆ ಸರಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಚಿಕಿತ್ಸೆ ಉಚಿತವಾಗಿರುತ್ತದೆ. ಕ್ಯಾನ್ಸರ್ ರೋಗದ ಭಯ ಬೇಡ ಜಾಗೃತಿ ಇರಲಿ ಎಂದು ಮಾಹಿತಿ ನೀಡಿದರು. ವಿಶ್ವ ಕ್ಯಾನ್ಸರ್ ದಿನ ಜನಜಾಗೃತಿ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಬಸಪ್ಪ ಧಮ್ಮೂರ, ಅಂಬಣ್ಣ ಲೋಂಡವೆ, ಕಾಂತಪ್ಪ ಖ್ಯಾಡದ, ಪರಸಪ್ಪ ಗೌಡರ, ಶ್ರೀಶೈಲ ಬ ಖ್ಯಾಡದ, ನೀಲಪ್ಪ ಪೂಜಾರಿ ಆರೋಗ್ಯ ಇಲಾಖೆಯ ವಿವಿಧ ಹಂತದ ಆರೋಗ್ಯ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತರು, ಆಶಾ ಕಾರಾಯಕರ್ತೆಯರು ಗ್ರಾಮದ ಸ್ತ್ರೀಶಕ್ತಿ ಸದಸ್ಯರು ಯುವಕರು ಭಾಗವಹಿಸಿದ್ದರು.