ತಾಲೂಕಿನ ಕೆಲವು ಗ್ರಾಮಗಳಲ್ಲಿ ಭೂಮಿ ಪೂಜೆ ಹಾಗೂ ಅಂಗನವಾಡಿ ಕೇಂದ್ರಗಳ ಉದ್ಘಾಟನೆ – ಮಾಡಿದ ಶಾಸಕ ಡಾ, ಎನ್.ಟಿ ಶ್ರೀ ನಿವಾಸ್.
ಕೂಡ್ಲಿಗಿ ಫೆ.04

ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಮತ್ತು ಅಂಗನವಾಡಿ ಕೇಂದ್ರಗಳನ್ನು ಉದ್ಘಾಟನೆ ಹಾಗೂ ಭೂಮಿ ಪೂಜೆಯನ್ನು ಮಂಗಳವಾರ ನೆರವೇರಿಸಿ ಶಾಸಕ ಡಾ, ಎನ್.ಟಿ. ಶ್ರೀನಿವಾಸ್ ಮಾತನಾಡಿದರು, ಕ್ಷೇತ್ರಾದಾಧ್ಯಂತ ಭರಪೂರ ಅಭಿವೃದ್ಧಿ ಕಾಮಗಾರಿಗಳು ನಡೆಯುವಂತೆ ಅನುದಾನವನ್ನು ತರಲಾಗಿದೆ. ಕೆಲವು ಗ್ರಾಮಗಳಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿರುವುದನ್ನು ಗಮನಿಸಿದ್ದೆ, ತಾಲೂಕಿನ ಮಡಕಲಕಟ್ಟೆ ಗ್ರಾಮದಿಂದ ಗುಂಡುಮುಣುಗು-ಓಬಳಶೆಟ್ಟಿಹಳ್ಳಿ ಕೂಡು ರಸ್ತೆ ಅಭಿವೃದ್ಧಿ ಕಾಮಗಾರಿ ೩೭.೪೩ಲಕ್ಷ ಕೆ.ಕೆ.ಆರ್.ಡಿ.ಬಿ ಅನುದಾನ ದಿಂದ ಪಂ.ರಾ ಇಂಜಿನೀಯರಿಂಗ್ ಇಲಾಖೆಯಿಂದ ಅನುಷ್ಠಾನ ಗೊಳಿಸಲಾಗಿದೆ.

ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ, ಪ್ರತಿ ನಿತ್ಯ ಸಾರ್ವಜನಿಕರು ಸಂಚರಿಸುವ ರಸ್ತೆ ಯಾದ್ದರಿಂದ, ಅಭಿವೃದ್ಧಿ ಇಂದಿನಿಂದಲೇ, ಆರಂಭಿಸಲಾಗಿದೆ ಎಂದು ಶಾಸಕ ಡಾ, ಎನ್.ಟಿ. ಶ್ರೀನಿವಾಸ್ ಹೇಳಿದರು. ಹುರುಳಿಹಾಳು ಗ್ರಾಮದಿಂದ ಕೊರಚರಹಟ್ಟಿ ಕ್ರಾಸ್‌ವರೆಗೂ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಿಂದ ೧೦೦ ಲಕ್ಷ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗುವುದು. ಬಣವಿಕಲ್ಲು ಗ್ರಾಮದ ಕೆ.ಜಿ.ಬಿ.ವಿ ಬಾಲಕಿಯರ ವಸತಿ ನಿಲಯದಲ್ಲಿ ಡಾರ್‌ಮಿಟರಿ ಕಟ್ಟಡ ನಿರ್ಮಾಣಕ್ಕೆ ೧೦೮ ಲಕ್ಷ, ಡಿಎಂಎಫ್ ಫಂಡ್ ೨೨ ಲಕ್ಷಗಳಲ್ಲಿ ಸೂಲದಹಳ್ಳಿ ಶಾಲೆಗೆ ಭೋಜನಾಲಯ, ಕೆಕೆಆರ್‌ಡಿಬಿ ಓಬಳಶೆಟ್ಟಿಹಳ್ಳಿ ೧೮ ಲಕ್ಷ, ಹೊಸಹಟ್ಟಿ ಅಂಗನವಾಡಿ-ಎ ಕೇಂದ್ರಕ್ಕೆ ೧೮ ಲಕ್ಷ, ಅಂಗನವಾಡಿ-ಬಿ ಕೇಂದ್ರಕ್ಕೆ ೨೦ ಲಕ್ಷ ಅನುದಾನಗಳಲ್ಲಿ ಅಂಗನವಾಡಿ ಹೊಸ ಕಟ್ಟಡಗಳನ್ನು ಉದ್ಘಾಟಿಸಿದ್ದೇನೆ.

ಇದರಿಂದ ಪುಟ್ಟ ಮಕ್ಕಳಿಗೆ ಪೌಷ್ಠಿಕ ಆಹಾರ ಸೇವಿಸುವುದರ ಮೂಲಕ ಮಕ್ಕಳ ಕಲಿಕೆಗೆ ಆದ್ಯತೆ ನೀಡಲಾಗುವುದರಿಂದ ಸುಸಜ್ಜಿತ ಕಟ್ಟಡಗಳು ಅವಶ್ಯಕತೆ ಇತ್ತು, ಈಗ ಅದನ್ನು ಈಡೇರಿಸಲಾಗಿದೆ ಎಂದರು. ಭೀಮಸಮುದ್ರ ಗ್ರಾಮ ಎಸ್.ಸಿ ಕಾಲೋನಿಗೆ ಸಿ.ಸಿ ರಸ್ತೆಗೆ ೨೦ ಲಕ್ಷ, ಸಿದ್ದಾಪುರ ಗ್ರಾಮದ ಎಸ್.ಸಿ. ಕಾಲೋನಿಯಲ್ಲಿ ಸಿಸಿ ರಸ್ತೆಗೆ ೩೦ ಲಕ್ಷ, ಎಂ.ಬಿ ಅಯ್ಯನಹಳ್ಳಿ-ಮೀನಕೆರೆ ಮುಖ್ಯ ರಸ್ತೆಯಿಂದ ಕುರಿಹಟ್ಟಿ ಕೂಡು ರಸ್ತೆ ಡಾಂಬರೀಕರಣ ಕಾಮಗಾರಿಗಾರಿಗೆ ೩೭.೨೫ ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. ಹೀಗೆ, ಹತ್ತು ಹಲವಾರು ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗಿದ್ದೇನೆ ಎಂದು ಶಾಸಕ ಡಾ, ಎನ್.ಟಿ. ಶ್ರೀನಿವಾಸ್ ಹೇಳಿದರು. ಲೋಕೋಪಯೋಗಿ ಇಲಾಖೆಯ ಎಇಇ ಕೆ.ನಾಗನಗೌಡ ಜಿ.ಪಂ ಇಂಜಿನಿಯರಿಂಗ್ ಇಲಾಖೆಯ ಮಲ್ಲಿಕಾರ್ಜುನ ಗುತ್ತಿಗೆದಾರರು, ಶಾಸಕರ ನಿಕಟವರ್ತಿ ಎಂ. ಮರುಳಸಿದ್ಧಪ್ಪ, ಮಣಿ, ಸೇರಿದಂತೆ ಆಯಾ ಗ್ರಾಮದ ಮುಖಂಡರು ಇದ್ದರು. ಶಾಸಕರು ಆಯಾ ಗ್ರಾಮದ ಓಣಿಯಲ್ಲಿ ಸಂಚರಿಸುವ ಮೂಲಕ ಅಗತ್ಯವಾಗಿ ಆಗಬೇಕಾದ ಕೆಲಸಗಳನ್ನು ಪಟ್ಟಿ ಮಾಡಿ ಕೊಂಡರು. ಹಂತ ಹಂತವಾಗಿ ಗ್ರಾಮಗಳನ್ನು ಸ್ವಚ್ಛ, ಸುಂದರ ಹಳ್ಳಿಗಳನ್ನಾಗಿಸು ವಂತೆ ಅಭಿವೃದ್ಧಿ ಪಡಿಸಲಾಗುವುದು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರಸಾಲುಮನೆ ಕೂಡ್ಲಿಗಿ.