ಶ್ರೀ ಕೋಡಿಕೊಪ್ಪದ ವೀರಪ್ಪಜ್ಜ ನವರ ಜೀವನ ದರ್ಶನ – ಪುರಾಣ ಪ್ರವಚನ ಸಮಾರಂಭ.

ಕೋಡಿಕೊಪ್ಪ ಫೆ.04

ನರೇಗಲ್ಲ ಸಮೀಪದ ಕೋಡಿಕೊಪ್ಪ ಗ್ರಾಮದಲ್ಲಿ ಹಠಯೋಗಿ ಕೋಡಿಕೊಪ್ಪದ ವೀರಪ್ಪಜ್ಜ ನವರ ಪುಣ್ಯಾರಾಧನೆ, ಶತಮಾನೋತ್ಸವ ಅಂಗವಾಗಿ ನಡೆದ ಶ್ರೀ ವೀರಪ್ಪಜ್ಜ ನವರ ಜೀವನ ದರ್ಶನ ಪುರಾಣ ಪ್ರವಚನ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು.ಯೋಗಿಗಳು, ಮಹಾನ್ ಪುಣ್ಯ ಪುರುಷರು ಅವರ ನೀಡಿರುವ ಯಾವುದು ಹೌದು ಅದು ಅಲ್ಲಾ, ಯಾವುದು ಅಲ್ಲಾ ಅದು ಹೌದು ಎನ್ನುವಂತೆ ಸತ್ಯ ದರ್ಶನ ತೋರ್ಪಡಿಸಿದ ಮಹಾನ್ ಪುರುಷರು, ಇಂತಹ ಮಹಾ ಮಹಿಮನ ಕ್ಷೇತ್ರದ ವ್ಯಾಪ್ತಿಯಲ್ಲಿ ಜೀವಿಸುತ್ತಿರುವ ನೀವುಗಳೆಲ್ಲರು ಪುಣ್ಯವಂತರೆಂದು ಮುಂಡರಗಿಯ ನಾ.ಜ ಶ್ರೀ ಅನ್ನದಾನೀಶ್ವರ ಸ್ವಾಮಿಗಳು ಹೇಳಿದರು. ಎಂದಿಗೂ ಯಾವುದು ಒಳಿತು ಎನ್ನಿಸು ವುದಿಲ್ಲವೋ ಅದು ಪುರಾಣ. ಜಗತ್ತಿನಲ್ಲಿ ಅದೆಷ್ಟೋ ಪುರಾಣಗಳಿವೆ. ಅವೆಲ್ಲದರಲ್ಲಿ ಶ್ರೀ ವೀರಪ್ಪಜ್ಜ ನವರ ಪುರಾಣವು ಬಹಳಷ್ಟು ವೈಶಿಷ್ಟ್ಯತೆಯಿಂದ ಕೂಡಿದೆ. ನಿತ್ಯವೂ ಅದನ್ನು ಕೇಳಿ ನೀವುಗಳೆಲ್ಲ ಪುನೀತರಾಗಿ. ಜೀವನದಲ್ಲಿ ನೆಮ್ಮದಿಯಿಂದ ಬದುಕಲು ದೇವರಿದ್ದಾನೆ ಮತ್ತು ನಾವುಗಳು ಖಂಡಿತ ಸಾಯುತ್ತೇವೆ ಎಂಬ ಎರಡು ವಿಷಯ ನೆನಪಿನಲ್ಲಿಡ ಬೇಕು, ನಾವು ಬೇರೆಯವರಿಗೆ ಮಾಡಿದ ಉಪಕಾರ, ಬೇರೆಯವರಿಂದ ನಮಗಾದ ಅಪಕಾರ ಮರೆಯಬೇಕೆಂದು ತಿಳಿಸಿದರು.ಓಂಕಾರ ಗಿರಿ ಮಠದ ಶ್ರೀ ಫಕೀರೇಶ್ವರ ಪಟ್ಟಾಧ್ಯಕ್ಷರು ಆಶೀರ್ವಚನ ನೀಡಿ, ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ, ಇದ ನ್ನೇ ಶ್ರೀ ವೀರಪ್ಪಜ್ಜ ನವರು ತಮ್ಮ ವೇದ ವಾಕ್ಯದಲ್ಲಿ ತಿಳಿಸಿದ್ದಾರೆ. ಇದನ್ನು ಅರ್ಥ ಮಾಡಿ ಕೊಂಡವರು ಜೀವನದಲ್ಲಿ ಗೆದ್ದಂತೆ. ಶ್ರೀ ವೀರಪ್ಪಜ್ಜ ನವರು ತಮ್ಮನ್ನು ತಾವು ಸುಟ್ಟುಕೊಂಡು ಈ ಜಗತ್ತಿಗೆ ಬೆಳಕು ನೀಡಿದ ಮಹಾ ಮಹಿರು ಎಂದರು. ಸಾನಿಧ್ಯ ವಹಿಸಿದ್ದ ಕಪೋತಗಿರಿಯ ಶ್ರೀ ಶಿವಕುಮಾರ ಸ್ವಾಮಿಗಳು ಆಶೀರ್ವಚನ ನೀಡಿ, ಶ್ರೀ ವೀರಪ್ಪಜ್ಜ ನವರು ಹುಚ್ಚರಲ್ಲ. ಅವರನ್ನು ಹುಚ್ಚರೆಂದು ಕರೆಯುತ್ತಿರುವ ನಾವುಗಳು ಹುಚ್ಚರು. ಸಂಸಾರದ ಹಿಂದೆ ಬಿದ್ದು ಆಧ್ಯಾತ್ಮ ಮರೆತು ಬಾಳುತ್ತಿರುವ ನಾವುಗಳು ಮೂಢರು. ಪುರಾಣ ಶ್ರವಣ ದಿಂದ ಜ್ಞಾನ ಸಿಗುತ್ತದೆ. ಅದರಲ್ಲಿಯೂ ಶ್ರೀ ವೀರಪ್ಪಜ್ಜ ನವರ ಪುರಾಣ ಖಂಡಿತ ನಿಮ್ಮ ಬಾಳಿಗೆ ಬೆಳಕು ನೀಡುತ್ತದೆ. ನಿತ್ಯವೂ ಕೇಳಿ ಬಾಳಿಗೆ ಬೆಳಕು ತಂದು ಕೊಳ್ಳಿರಿ ಶ್ರೀ ವೀರಪ್ಪಜ್ಜ ನವರಿಂದ ನರೇಗಲ್ಲ ಮತ್ತು ಕೋಡಿಕೊಪ್ಪಕ್ಕೆ ಈ ನಾಡಿನಲ್ಲಿ ದೊಡ್ಡ ಹೆಸರಿದೆ. ವೀರಪ್ಪಜ್ಜ ನವರ ಜ್ಞಾನ ಪ್ರಸಾದ, ಅನ್ನ ಪ್ರಸಾದ ಸ್ವೀಕರಿಸಿ ನೀವುಗಳೆಲ್ಲರೂ ಪುಣ್ಯ ವಂತರಾಗಿರಿ ಎಂದರು.ರೋಣ ಬೂದೀಶ್ವರ ಮಠದ ಡಾ, ವಿಶ್ವನಾಥ ಸ್ವಾಮಿಗಳು ಪುರಾಣ ಪ್ರಾರಂಭಿಸಿದರು. ಚಿಕ್ಕಮನ್ನಾಪುರದ ಹನುಮಂತ ಮೇಟಿ ಸಂಗೀತ ಮತ್ತು ಬರದೂರಿನ ಶಾಂತ ಕುಮಾರ ಹಿರೇಮಠ ತಬಲಾ ಸಾಥ್ ನೀಡಿದರು. ಪುಣ್ಯಾರಾಧನೆ ಶತಮಾನೋತ್ಸವಕ್ಕೆ ದಾನ ನೀಡಿದ ಮಹನೀಯರುಗಳನು ಸನ್ಮಾನಿಸಲಾಯಿತು. ಕನಕದಾಸ ಸಮಿತಿಯ ರವಿ ದಂಡಿನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಈ ಸಮಯದಲ್ಲಿ ಕಾರ್ಯಕ್ರಮದಲ್ಲಿ ಕುಕನೂರಿನ ಗುದ್ದೆಪ್ಪ ಮಠದ ಸ್ವಾಮಿಗಳು, ಟ್ರಸ್ಟ್ ಕಮಿಟಿ ಅಧ್ಯಕ್ಷ ಡಾ, ಎಂ.ಸಿ. ಚಪ್ಪನ್ನಮನ, ನಿವೃತ್ತ ಶಿಕ್ಷಕ ಎಂ.ಎ ಹಿರೆವಡೆಯರ ಉಪಸ್ಥಿತರಿದ್ದರು ಡಾ, ಕಲ್ಲಯ್ಯ ಹಿರೇಮಠ ನಿರೂಪಿಸಿದರು. ನಿವೃತ್ತ ಪ್ರಾ ಬಿ.ಆರ್ ಜಾಲೀಹಾಳ ಸ್ವಾಗತಿಸಿದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button