ಅಪರಿಚಿತರು ಬಂದು ಮನೆಯ ಬಾಗಿಲು ತಟ್ಟಿದರೆ ಮನೆಯ ಬಾಗಿಲನ್ನು ತೆರೆಯಬೇಡಿ – ಅನುಮಾನಾಸ್ಪದ ಬಂದರೆ ಪೋಲಿಸ್ ಠಾಣೆಗೆ ತಿಳಿಸಿರಿ.
ಕೊಟ್ಟೂರು ಫೆ.12

ಪಟ್ಟಣದ ಆಂಜನೇಯ ಬಡಾವಣೆ 108 ಶಿವಲಿಂಗ ಟೆಂಪಲ್ ಹತ್ತಿರ ರೆಡ್ಡಿ ಇಂಜಿನಿಯರ್ ಅವರ ಮನೆ ಹತ್ತಿರ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ದಿನಾಂಕ 7.2.2025 ರಂದು ಮಧ್ಯಾಹ್ನ 3:00ಗೆ ಮತ್ತು ದಿನಾಂಕ 11.05.2025 ರಂದು 3:30 ಕ್ಕೆ ಮನೆ ಹತ್ತಿರ ಬಂದು ಮನೆಯ ಬಾಗಿಲು ಬಡಿದು ನಾವು ಸೆಂಟ್ರಲ್ ಅವರು ಅಂತ ಹೇಳಿದರು. ನಾವು ಬಾಗಿಲು ತೆಗೆಯಲಿಲ್ಲ. ಆದಕಾರಣ ಕೊಟ್ಟೂರು ಪಟ್ಟಣದ ಮತ್ತು ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಯಾರಾದರೂ ಅಪರಿಚಿತರು ಬಂದು ಮನೆಯ ಬಾಗಿಲು ತಟ್ಟಿದರೆ ಮನೆ ಬಾಗಿಲನ್ನು ತೆರೆಯಬೇಡಿ ಅನುಮಾನಾಸ್ಪದ ಬಂದರೆ ಕೊಟ್ಟೂರು ಪೊಲೀಸ್ ಠಾಣೆಗೆ ತಿಳಿಸಿರಿ.
ಸಾಧ್ಯವಾದಷ್ಟು ಸಿ.ಸಿ ಕ್ಯಾಮೆರಾ ಅಳವಡಿಸಿ ಕೊಳ್ಳಿರಿ ಸಾರ್ವಜನಿಕರು ಎಚ್ಚರ ವಹಿಸಬೇಕು ಸ್ವಲ್ಪ ಯಾಮಾರಿದರೂ ಮನೇಲಿರುವ ಹಣ ಒಡವೆ ಇತ್ಯಾದಿ ಬೆಲೆ ಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗುತ್ತಾರೆ ಮುನ್ನೆಚ್ಚರಿಕೆಯಿಂದ ಇರಬೇಕು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು