“ಸರ್ವ ಮಾನವ ಜೀವ ಸಂಕುಲ ಅನುಭವಿಸುವ ಭಾಗ್ಯ”…..

ನಡೆಯುತ ನಡೆಯುತ ದಾರಿ ತಪ್ಪದಿರಲಿ
ವಿಶ್ವಾಸ ನಂಬಿಕೆ ಮೋಸದಾಗಿರದಿರಲಿ
ನುಡಿ ಹುಸಿಯಾಗದಿರಲಿ
ಸ್ನೇಹ ಸಂಬಂಧ ಪವಿತ್ರತೆಗೆ
ಕಪ್ಪುತನ ತಾಗದಿರಲಿ
ಪ್ರೀತಿ ಮಮತೆ ಶುದ್ಧತೆ ಇರಲಿ
ಹುಂಬತನದ ಹುಸಿತನ ಇರದಿರಲಿ
ಖುಷಿಯ ಕ್ಷಣಗಳು
ನಿಜ ಸ್ವರ್ಗದ ಸಿರಿತನ
ಇನ್ನೊಬ್ಬರ ಆನಂದ
ಕಸಿಯದಿರುವ ಮನವಿರಲಿ
ನಿತ್ಯ ಕಾಯಕವೇ ಜೀವಂತದ
ಗುರುತರದ ಸುಸಮಯ
ಪ್ರಾಮಾಣಿಕತೆ ವಿನಯತೆ ನೈಜತೆ
ಕ್ರಿಯಾಶೀಲತೆ ಇಲ್ಲದವ
ಜಡತ್ವದ ಕುರೂಹು
ಸುಖಾನುಭವ ಸುಲಭದಲ್ಲ
ಕಷ್ಟನಷ್ಟ ಸಮ್ಮಿಲನ
ಜೀವನದಿ ಸವಿಯು ಸಾರ
ಎನಗಿಂತ ಉತ್ತಮರಿಲ್ಲದಿಲ್ಲ
ಅತ್ಯೂತ್ತಮತನದವರು
ಅಧಿಕರಿರುವರು
ಮೆಚ್ಚಿಸಲು ಜೀವಿಸದಿರು
ಅಳಿಲು ಸೇವೆ ಅಮರ
ಲೋಕದೊಳಗಿರುವದು
ದುರಂಕಾರ ಅಹಂಕಾರ
ಜನಮನದಲ್ಲಿರಲು ಅನರ್ಹ
ತೋರಿಕೆಗೆ ಇರುವ ಒಳ್ಳೆತನನ
ಡುಬೀದಿಯಲ್ಲಿರು ಶ್ವಾನದಂತೆ
ಸಣ್ಣತನ ಸಹಾಯ ಸಹಕಾರ
ಜನಮನದಲಿ ಅಮರ ಕ್ಷಣ
ಅತೀಯಾವುದಾದರೇನು ಸೋಲುತನ
ಖಚಿತ ನಿಶ್ಚತ ಸೃಷ್ಠಿಯ ಸಿರಿತನ
ಸರ್ವ ಮಾನವ ಜೀವ ಸಂಕುಲ
ಅನುಭವಿಸುವ ಭಾಗ್ಯ
ಮಾನವ ಎಷ್ಟು ಸಿರಿತನ ಗಳಿಸಿದರೇನು
ಕೋನೆಗೆ ಸಿರಿ ಸವಿ ಅನುಭವಿಸದ
ಆವರಿಸುವ ಬಡತನ
ಭೂಮಡಿಲಲಿ ಲಯವಾಗುವ ಕ್ಷಣ
ಶೂನ್ಯ ಸಂಪಾದನೆ
ಜಗದಲಿ ಜನನ ಮರಣ
ಪರಿವರ್ತನೆಯೇ ಜಗದ ನಿಯಮ
ಸೃಷ್ಟಿಯ ಜೀವನ ಚಕ್ರ
ಸತ್ಯವಾದರೂ ವಿಚಿತ್ರ

-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
“ವಿಶ್ವ ಮಾನವ ಜೀವ ರಕ್ಷಕ”
ರಾಷ್ಟ್ರೀಯ ಐಕಾನ್ ಪ್ರಶಸ್ತಿಪುರಸ್ಕೃತರು
ಬಾಗಲಕೋಟ.