ಸರ್ಕಾರದ ಯಾವುದೇ ಅನುದಾನವಿಲ್ಲದೆ ಪರಿಸರ ಸೇವೆ ಸಲ್ಲಿಸುತ್ತಿರುವ ವನಸಿರಿ ತಂಡದ ಕಾರ್ಯ ಶ್ಲಾಘನೀಯ – ಎಂ.ಅಮರೇಗೌಡ ವಕೀಲರು.
ಸಿಂಧನೂರು ಏ.03





ನಗರದ ಮೆಹಬೂಬ್ ಕಾಲೋನಿಯ ಆರ್.ಜಿ.ಎಮ್.ಶಾಲೆ ಪಕ್ಕದಲ್ಲಿರುವ ಶ್ರೀ ಎಂಮರಿಬಸವನಗೌಡ ವಕೀಲರು ಚಾರಿಟೇಬಲ್ ಟ್ರಸ್ಟ್ ಕಾರ್ಯಾಲಯದಲ್ಲಿ ಟ್ರಸ್ಟ್ ಅಧ್ಯಕ್ಷ ಎಂ.ಅಮರೇಗೌಡ ವಕೀಲರು ಅವರು ವನಸಿರಿ ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಅವರ ಪರಿಸರ ಸೇವೆ ಗುರುತಿಸಿ ಇನ್ನಷ್ಟು ಹೆಚ್ಚಿನ ಪರಿಸರ ಸೇವೆ ಮಾಡಲು 25 ಸಾವಿರ ರೂಪಾಯಿಗಳನ್ನು ಚೆಕ್ ಮೂಲಕ ದೇಣಿಗೆ ನೀಡಿದರು.ವನಸಿರಿ ಪೌಂಡೇಷನ್ ಸಂಸ್ಥೆ ಸುಮಾರು 10 ವರ್ಷಗಳಿಂದ ಕಲ್ಯಾಣ ಕರ್ನಾಟಕದಾದ್ಯಂತ ಗಿಡ ಮರಗಳ ಉಳಿವಿಗಾಗಿ, ಬಿಸಿಲಿನ ತಾಪವನ್ನು ಕಡಿಮೆ ಗೊಳಿಸಲು ಮತ್ತು ಅರಣ್ಯ ಪ್ರದೇಶವನ್ನು ಹೆಚ್ಚಿಸುವ ಗುರಿಯನ್ನು ಹೊಂದಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿದೆ. ಇದನ್ನು ಗುರುತಿಸಿದ ರಾಜ್ಯ ಸರ್ಕಾರ 2023 ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ಸಮಾರಂಭದಲ್ಲಿ ಕರ್ನಾಟಕ ಪರಿಸರ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಕಲ್ಯಾಣ ಕರ್ನಾಟಕದಲ್ಲಿ ಪರಿಸರ ಸೇವೆಗೆ ಹಗಲಿರುಳು ಎನ್ನದೆ ದುಡಿಯುತ್ತಿರುವ ಏಕೈಕ ಸಂಸ್ಥೆ ವನಸಿರಿ ಫೌಂಡೇಶನ್. ವನಸಿರಿ ಫೌಂಡೇಶನ್ ಪರಿಸರ ಸಂರಕ್ಷಣೆ ಜೊತೆಗೆ ರಕ್ತದಾನ ಅನ್ನದಾನ ಮತ್ತು ಕಷ್ಟ ದಲ್ಲಿರುವವರಿಗೆ ಸಹಾಯ ನೀಡುವ ಪರಿಕಲ್ಪನೆಯನ್ನು ಹೊಂದಿದೆ. ಇಂತಹ ಒಂದು ಸಂಸ್ಥೆಗೆ ಸರ್ಕಾರದ ಯಾವುದೇ ಅನುದಾನವಿಲ್ಲದೆ, ಫಲಾ ಪೇಕ್ಷೆಗಳಿಲ್ಲದೆ ಪರಿಸರ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಕಾರ್ಯ. ನಾವುಗಳೆಲ್ಲರೂ ಸಹಾಯ ಸಹಕಾರ ನೀಡುವ ಮೂಲಕ ಇನ್ನೂ ಹೆಚ್ಚಿನ ಪರಿಸರ ಸಂರಕ್ಷಣೆ ಕಾರ್ಯಗಳನ್ನು ಮಾಡಲಿ ಎಂದು ನಮ್ಮ ಶ್ರೀ ಎಂ.ಮರಿ ಬಸನಗೌಡ ವಕೀಲರು ಚಾರಿಟೇಬಲ್ ವತಿಯಿಂದ 25 ಸಾವಿರ ರೂಪಾಯಿಗಳನ್ನು ದೇಣಿಗೆಯಾಗಿ ನೀಡುತ್ತಿರುವುದು ನಮಗೆ ಸಂತೋಷ ದಾಯಕವಾಗುತ್ತಿದೆ. ಮತ್ತು ಇಂತಹ ಸಂಸ್ಥೆಗಳಿಗೆ ನಾವು ನೀವುಗಳೆಲ್ಲರೂ ಸಹಾಯ ಮಾಡುವ ಮೂಲಕ ವನಸಿರಿ ತಂಡದ ಜೊತೆಗೆ ಕೈಜೋಡಿಸೋಣ, ಪರಿಸರ ಸಂರಕ್ಷಣೆಗೆ ಸೇವೆ ಸಲ್ಲಿಸೋಣ ಎಂದು ಶ್ರೀ ಎಂ.ಮರಿ ಬಸವನಗೌಡ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ ಅಮರೇಗೌಡ ವಕೀಲರು ತಿಳಿಸಿದರು.ಶ್ರೀ ಎಂ.ಮರಿ ಬಸವನಗೌಡ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಎಂ.ಅಮರೇಗೌಡ ವಕೀಲರು ಅವರು ವನಸಿರಿ ಪೌಂಡೇಷನ್ ಸಂಸ್ಥೆಯ ಕಾರ್ಯವನ್ನು ಮೆಚ್ಚಿ 25 ಸಾವಿರ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿರುವುದು ತುಂಬಾ ಸಂತೋಷದ ವಿಷಯ. ಅವರ ಈ ಸಹಾಯ ವನಸಿರಿ ತಂಡ ಯಾವತ್ತೂ ಮರೆಯುವುದಿಲ್ಲ. ಇವರ ಸಹಾಯ ನಮಗೆ ಇನ್ನಷ್ಟು ಪರಿಸರ ಸೇವೆ ಮಾಡಲು ಪುಷ್ಟಿ ನೀಡಿದೆ. ಪ್ರತಿ ವರ್ಷ 1 ಲಕ್ಷ ಗಿಡಗಳನ್ನು ನೆಡುವ ಗುರಿಯನ್ನು ಹೊಂದಿದ್ದೆವು ಆದರೆ ಈ ವರ್ಷ 1.20 ಸಾವಿರ ಸಸಿಗಳನ್ನು ನೆಡುವ ಗುರಿಯನ್ನು ಹೊಂದಿದ್ದೇವೆ. ಇದಕ್ಕೆ ಸಹಕರಿಸಿದ ಇದಕ್ಕೆ ಎಂ ಅಮರೇಗೌಡ ವಕೀಲರಿಗೆ ಹೃದಯ ಪೂರ್ವಕ ಧನ್ಯವಾದಗಳು ಎಂದು ವನಸಿರಿ ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ತಿಳಿಸಿದರು.ಈ ಸಂಧರ್ಭದಲ್ಲಿ ಆದನಗೌಡ ಎಲೆಕೂಡ್ಲಿಗಿ, ರಾಜು ಪತ್ತಾರ, ಮುದುಕಪ್ಪ ಹೊಸಳ್ಳಿ ಕ್ಯಾಂಪ್, ಮಂಜುನಾಥ ವಕೀಲರು ಇದ್ದರು ಎಂದು ವರದಿಯಾಗಿದೆ.