ಅದ್ದೂರಿಯಾಗಿ ನಡೆದ ಕಾಲಕಾಲೇಶ್ವರ – ರಥೋತ್ಸವ ಜರುಗಿತು.
ಗಜೇಂದ್ರಗಡ ಏ.13

ದಕ್ಷಿಣ ಕಾಶಿ ಎಂದು ಪ್ರಸಿದ್ದಿ ಪಡೆದಿರುವ ಕಾಲಕಾಲೇಶ್ವರ ರಥೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.ಜಾತ್ರೆಯ ಪ್ರಯುಕ್ತ ಬೆಳಿಗ್ಗೆ ದೇವಸ್ಥಾನದಲ್ಲಿ ಲಿಂಗರೂಪಿಯಾದ ಕಾಲಕಾಲೇಶ್ವರನಿಗೆ ರುದ್ರಾಭಿಷೇಕ, ವಿಶೇಷ ಅಲಂಕಾರ ಸೇವೆ, ಪಲ್ಲಕ್ಕಿ ಸೇವೆ ನಡೆಯಿತು. ಕಾಲಕಾಲೇಶ್ವರನ ದರ್ಶನಕ್ಕೆ ಬಂದಿದ್ದ ದೇವರಿಗೆ ದವನ ಮನೆಗೆ ಭಕ್ತರು ಸಮರ್ಪಿಸಿ ದವನ ಕೊಂಡೊಯ್ದರು.ಸಂಜೆ ಸಮೀಪದ ರಾಜೂರ ಗ್ರಾಮದಿಂದ ರಥದ ಹಗ್ಗವನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು ನಂತರ ಆಕಾಶದಲ್ಲಿ ಚಿತ್ತಾ ನಕ್ಷತ್ರ ಗೋಚರಿಸುತ್ತಿದ್ದಂತೆ ರಥೋತ್ಸವಕ್ಕೆ ಚಾಲನೆ ದೊರೆಯಿತು. ಸುತ್ತಲಿನ ಗ್ರಾಮಗಳ ಜನರು ಆಗಮಿಸಿದ್ದರು. ರಥದ ಕೋಣೆ ಮುಂಭಾಗದಿಂದ ಸಾಗಿದ ರಥ ಪಾದಗಟ್ಟಿ ತಲುಪಿ ಮರಳಿ ರಥದ ಕೋಣೆ ಬಳಿ ಬರುತ್ತಿದ್ದಂತೆ ಭಕ್ತರು ಚಪ್ಪಾಳೆ ತಟ್ಟಿ, ಜೈ ಮುಗಿದು ಜೈಕಾರ ಹಾಕಿದರು. ವಿವಿಧ ಭಾಗಗಳಿಂದ ಜಾತ್ರೆಗೆ ರಥಕ್ಕೆ ಉತ್ತತ್ತಿ ಬಾಳೆಹಣ್ಣು ಹಾಗೂ ಕಬ್ಬು ಕೊಂಡು ಸಾವಿರಾರು ಭಕ್ತರು ಎಸೆದು ಭಕ್ತಿ ಸಮರೂಪಿಸಿ ದವನದೊಂದಿಗೆ ಹಿಂದುರುಗಿದರು ಎಂದು ವರದಿಯಾಗಿದೆ.
ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸಾ.ವಿ ಸಂಕನಗೌಡ್ರ. ರೋಣ.ಗದಗ