ಮಾನ್ವಿಯಲ್ಲಿ ಅದ್ಧೂರಿಯಾಗಿ ನಡೆದ – ಅಂಬೇಡ್ಕರ್ ಜಯಂತಿ ಆಚರಣೆ.
ಮಾನ್ವಿ ಏ.14

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕ ಆಡಳಿತ ವತಿಯಿಂದ ಡಾ, ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಐ.ಬಿ ವೃತ್ತದ ಸರ್ಕಲ್ ನಿಂದ ಅದ್ಧೂರಿಯಾಗಿ ಆಚರಿಸಲಾಯಿತು.
ಮಾನ್ವಿ ಪಟ್ಟಣದಲ್ಲಿ ವಿಜೃಂಭಣೆ ಯಿಂದ ನಡೆದ ಮೆರವಣಿಗೆಗೆ ಶಾಸಕ ಹಂಪಯ್ಯ ನಾಯಕ ಚಾಲನೆ ನೀಡಿದರು. ಅಂಬೇಡ್ಕರ್ ಅನುಯಾಯಿಗಳು ಅಂಬೇಡ್ಕರ್ ಹಾಡಿಗೆ ಕುಣಿದು ಕುಪ್ಪಳಿಸಿದರು.
ಅಂಬೇಡ್ಕರ್ ಈ ದೇಶಕ್ಕೆ ಸಂವಿಧಾನ ಸಮರ್ಪಣೆ ಮಾಡಿರುವುದು ನೋಡಿದರೆ ಕೇವಲ ಒಂದು ಸಮಾಜಕ್ಕೆ ನೀಡಿರುವ ಸಂವಿಧಾನವಲ್ಲ ಅದು ಈ ದೇಶದ ಜನರಿಗಾಗಿ ಕೊಟ್ಟಿರುವ ಸಂವಿಧಾನ. ಹೀಗಾಗಿ ಅಂಬೇಡ್ಕರ್ ಅವರು ನಮಗೆ ಪರಮಾತ್ಮ ಇದ್ದಂಗೆ ಎಂದರು.
ಉಪನ್ಯಾಸಕ ಪಿ.ರವಿಕುಮಾರ್ ಮಾತನಾಡಿ. ಅಂಬೇಡ್ಕರ್ ಅವರ ಇತಿಹಾಸವನ್ನು ಅರಿತು ನಾವೆಲ್ಲರೂ ಬದುಕ ಬೇಕಾಗಿದೆ. ಅಂಬೇಡ್ಕರ್ ಅವರು ಶಿಕ್ಷಣ ಪಡೆದ ರೀತಿಯನ್ನು ನೋಡಿದರೆ ಬಲು ಕಷ್ಟಕರವಾಗಿತ್ತು ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ