ಮಹನೀಯರ ಜಯಂತಿ ಆಚರಣೆಯೊಂದಿಗೆ ಅನುಕರಣೆಗೆ ಆದ್ಯತೆ ನೀಡಬೇಕು, ಅಂಬೇಡ್ಕರ್ ಜಯಂತಿ ಉದ್ಘಾಟಿಸಿ – ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ್.

ಹೊಸಪೇಟೆ .15

ಸಮಾನತೆ, ಶಾಂತಿ, ಮಹಿಳೆಯರ ಅಭಿವೃದ್ಧಿ, ಭ್ರಾತೃತ್ವ, ಶಿಕ್ಷಣಕ್ಕೆ ಪ್ರೋತ್ಸಾಹ ಯಾವ ಸಮಾಜದಲ್ಲಿ ಇದೆಯೋ ಅದೇ ನಿಜವಾದ ಧರ್ಮ ಅದೊಂದೆ ಮಾನವ ಧರ್ಮ ಎಂದು ಡಾ, ಬಿ.ಆರ್ ಅಂಬೇಡ್ಕರ್ ಸಂದೇಶ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ್ ಹೇಳಿದರು.ನಗರದ ಜೈ ಭೀಮ್ ವೃತ್ತದಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಹೊಸಪೇಟೆ, ಡಾ, ಬಿ.ಆರ್ ಅಂಬೇಡ್ಕರ್ ಸಂಘ ಮತ್ತು ಡಾ, ಬಾಬು ಜಗಜೀವನ್ ರಾಮ್ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಡಾ, ಬಿ.ಆರ್ ಅಂಬೇಡ್ಕರ್ ರವರ 134 ನೇ. ಜನ್ಮ ದಿನಾಚರಣೆ ಹಾಗೂ ಮಾಜಿ ಉಪ ಪ್ರಧಾನಿ ಡಾ, ಬಾಬು ಜಗಜೀವನ್ ರಾಮ್‌ ರವರ 118 ನೇ. ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಸೋಮವಾರ ಮಾತನಾಡಿದರು. ಡಾ, ಅಂಬೇಡ್ಕರ್ ಜಯಂತಿ ಆಚರಣೆ ಜೊತೆಗೆ ಅವರ ಆದರ್ಶ, ಸಿದ್ದಾಂತಗಳ ಅನುಕರಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ರಕ್ತದಾನ, ಆರೋಗ್ಯ ಸೇವೆಗಳಿಂದ ಅಂಬೇಡ್ಕರ್ ಜಯಂತಿ ಶ್ರೇಷ್ಟತೆ ಪಡೆಯಲಿದೆ. ಅಂದು ಅಂಬೇಡ್ಕರ್ ರವರು ನೀಡಿದ ಸಂವಿಧಾನ ದಿಂದ ಸಮ ಸಮಾಜದ ಕನಸು ನನಸಾಗಿ ದೇಶದ ಗೌರವ ಹೆಚ್ಚಾಗಿದೆ. ಇದು ಜಾಗತಿಕ ಮನ್ನಣೆ ಪಡೆದ ಏಕೈಕ ಸಂವಿಧಾನ ಭಾರತದ್ದಾಗಿದೆ. ಅಂಬೇಡ್ಕರ ನೀಡಿದ ಸಂವಿಧಾನದಿಂದಾಗಿ ಇಂದಿಗೂ ಮಾನವನ ಕಲ್ಯಾಣ ಸಾಧ್ಯವಾಗಿದೆ. ಇದೇ ಮಾದರಿಯಲ್ಲಿ ಮನುಷ್ಯನಲ್ಲಿರುವ ಸಂಸ್ಕಾರ, ಮುಂದಿನ ಮಾನವನ ಸಂಸ್ಕೃತಿಗೆ ಅಸ್ಮಿತೆ ಆಗಬೇಕೆಂಬುದು ಅಂಬೇಡ್ಕರ್‌ ರವರ ಆಶಯವಾಗಿತ್ತು. ಭಗವಂತನಿಗೆ ಭಕ್ತರು ಸಮಾನರು ಎಂಬಂತೆ ಮನುಷ್ಯರಿಗೆ ಮನುಷ್ಯರು ಸಮಾನರು ಆಗಬೇಕಿದೆ, ಆಗಲೇ ಸಮ ಸಮಾಜ ನಿರ್ಮಾಣ ಸಾಧ್ಯ ಎಂಬ ಚಿಂತನೆ ಅವರದ್ದಾಗಿದೆ. ಅಂಬೇಡ್ಕರ್ ತತ್ವಾದರ್ಶಗಳು, ಚಿಂತನೆಗಳನ್ನು ಕೇವಲ ಬೋಧನೆಯಲ್ಲಷ್ಟೇ ಅಲ್ಲ ಬದುಕಿನಲ್ಲಿ ಅಳವಡಿಸಿ ಕೊಂಡರೇ ಜಯಂತಿ ಆಚರಣೆಯಿಂದ ಅರ್ಥಪೂರ್ಣ ಗೌರವ ಸಲ್ಲಿಸಿದಂತಾಗಲಿದೆ ಎಂದರು.ಜಿ.ಪಂ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿ ಷಾ ಮಾತನಾಡಿ, ಅಂಬೇಡ್ಕರ್ ಅಸಮಾನತೆ ವಿರುದ್ಧ ಹೋರಾಟ ಆರಂಭಿಸಿ ಇಡೀ ದೇಶಕ್ಕೆ ಸಮಾನತೆಗೆ ಸಂವಿಧಾನವನ್ನು ಕೊಡುಗೆಯನ್ನಾಗಿ ನೀಡಿದ್ದಾರೆ. ಅದರ ಪ್ರತಿ ಫಲವೇ ಶೋಷಿತ ಸಮುದಾಯಗಳು ಸಮಾನತೆ ಯಿಂದ ಎಲ್ಲಾ ಹಕ್ಕುಗಳನ್ನು ನ್ಯಾಯ ಯುತವಾಗಿ ಪಡೆಯಲು ಸಹಕಾರಿಯಾಗಿದೆ. ಅಂಬೇಡ್ಕರ್‌ ರವರ ಮನೆಯಲ್ಲಿ 50 ಸಾವಿರ ಪುಸ್ತಕಗಳನ್ನು ಹೊಂದಿದ ಬೃಹತ್ ಗ್ರಂಥಾಲಯವನ್ನು ಹೊಂದಿದ್ದರು.

ಅವರು ಮಾಡಿರುವ ಸಾಧನೆಯನ್ನು ಅಕ್ಷರಗಳಲ್ಲಿ, ಮಾತುಗಳಲ್ಲಿ ಪೂರ್ಣ ಗೊಳಿಸಲು ಸಾಧ್ಯವಿಲ್ಲ. ಅಂಬೇಡ್ಕರ್ ರಚನೆಯ ಗ್ರಂಥಗಳನ್ನು ಎಲ್ಲಾರು ಓದಲು ಉತ್ತೇಜನ ನೀಡಬೇಕಿದೆ ಎಂದರು.ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು.ಬಿ.ಎಲ್. ಮಾತನಾಡಿ ಎಲ್ಲಾ ಜಯಂತಿ ಆಚರಣಗಳಿಂದ ನಮಗೆ ಕಲಿಕೆಯುವ ಅಗತ್ಯವಿದೆ. ಅಂಬೇಡ್ಕರ್‌ ರವರ ಸಿದ್ದಾಂತಗಳನ್ನು ಪಾಲಿಸಬೇಕಿದೆ. 1920 ರಲ್ಲಿ ಮೂಕನಾಯಕ ಎಂಬ ಪತ್ರಿಕೆಯನ್ನು ಆರಂಭಿಸಿ ಜನರಿಗೆ ಜಾಗೃತಿ ಮೂಡಿಸಲು ಹರಸಾಹಸ ಪಟ್ಟಿದ್ದಾರೆ. ಶಿಕ್ಷಣ, ಸಂಘಟನೆ, ಹೋರಾಟಗಳ ಮಹತ್ವವನ್ನು ಸಾರಿದ್ದಾರೆ ಎಂದರು.ಡಾ, ಬಿ.ಆರ್ ಅಂಬೇಡ್ಕರ್ ಕುರಿತು ಡಾ, ರಾಜಕುಮಾರ ಹಾಗೂ ಡಾ, ಬಾಬೂಜೀ ಕುರಿತು ಡಾ, ತಿಪ್ಪೇಸ್ವಾಮಿ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಸಂವಿಧಾನದ ಪಿಠೀಕೆಯನ್ನು ವಾಚನ ಮಾಡಲಾಯಿತು. ಇದಕ್ಕೂ ಮುನ್ನ ಹಂಪಿಯ ವಿರೂಪಾಕ್ಷ ದೇಗುಲದಿಂದ ಯುವಕರು ಜ್ಯೋತಿಯನ್ನು ಮೆರವಣಿಗೆ ತಂದು ನಗರದ ಬಳ್ಳಾರಿ ವೃತ್ತದಲ್ಲಿನ ಅಂಬೇಡ್ಕರ್ ಪುತ್ಥಳಿಯಿಂದ ವಿವಿಧ ಪ್ರಮುಖ ಬೀದಿಗಳಲ್ಲಿ ಡಾ, ಬಿ.ಆರ್ ಅಂಬೇಡ್ಕರ್ ಮತ್ತು ಬಾಬೂಜೀಯವರ ಭಾವ ಚಿತ್ರವನ್ನು ಜೈಭೀಮ್ ವೃತ್ತದ ವರೆಗೆ ಭವ್ಯ ಮೆರವಣಿಗೆ ನಡೆಸಲಾಯಿತು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು. ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎನ್.ಎಫ್ ಇಮಾಮ್ ನಿಯಾಜಿ, ಸಹಾಯಕ ಆಯುಕ್ತರಾದ ಪಿ.ವಿವೇಕಾನಂದ, ತಹಸೀಲ್ದಾರ ಎಂ.ಶೃತಿ, ಅಂಬೇಡ್ಕರ್ ಸಂಘದ ಅಧ್ಯಕ್ಷ ಕೆ.ಪಿ.ಉಮಾಪತಿ, ಅಂಬೇಡ್ಕರ್ ಸಂಘದ ಗೌರವಾಧ್ಯಕ್ಷ ವೀರಸ್ವಾಮಿ, ನಗರ ಸಭೆ ಪೌರಯುಕ್ತ ಚಂದ್ರಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button