ಇಜೇರಿ ರೈತರ ಹತ್ತಿ ತೂಕದಲ್ಲಿ ಭಾರಿ ಪ್ರಮಾಣದ ಮೋಸ ತೂಕದ ಸಮೇತವಾಗಿ ವ್ಯಾಪಾರಿ ಮಹಿಬೂಬ ಮೀರಗೌಡ ಯಾಳವಾರನ ಕರಾಳ 2 ದಂದೆ – ಡಿಜಿಟಲ್ ತೂಕದ ಕರಾಳ ಮುಖ ಹೋರಾಟಗಾರರಿಂದ ಬಯಲಿಗೆ.
ಇಜೇರಿ ಮೇ.11





ಯಡ್ರಾಮಿ ತಾಲ್ಲೂಕಿನ ಇಜೇರಿ ಗ್ರಾಮದ ರೈತ ಶರಣಪ್ಪ ಬಸಪ್ಪ ಯಂಕಂಚಿ ರವರು ತಮ್ಮ ಹೊಲದಲ್ಲಿ ಕಷ್ಟ ಪಟ್ಟು ದುಡಿದು ಸುಮಾರು 60 ಕ್ವಿಂಟಲ್ ಹತ್ತಿಗೆ ಸರಿಯಾದ ಬೆಲೆ ಬಾರದ ಮನೆಯಲ್ಲಿ ಇಡಲಾಗಿತ್ತು, ಆದರೆ ಸ್ವಲ್ಪ ಪ್ರಮಾಣದ ಹತ್ತಿ ರೇಟ್ ಜಾಸ್ತಿ ಆದ ಕಾರಣ ರೈತ ಹತ್ತಿ ಮಾರಾಟ ಮಾಡಲು ಮುಂದೆ ಆಗಿದ್ದಾನೆ. ಇದನ್ನೆ ಬಂಡವಾಳ ಮಾಡಿ ಕೊಂಡ ಕೆಲ ಹತ್ತಿ ಖರೀದಿ ವ್ಯಾಪಾರಿಗಳು ರೈತರ ಹತ್ತಿಗೆ 1 ಕ್ವಿಂಟಲ ಗೆ ರೂ.7800/-ಮಾರಾಟ ಮಾಡಲು ಯಾಳವಾರ ಗ್ರಾಮದ ಮಹಿಬೂಬ ಎಂಬ ವ್ತಕ್ತಿಗೆ ಇಜೇರಿ ಗ್ರಾಮದ ದಲ್ಲಾಳಿಗೆ ಮಾರಾಟ ಮಾಡಲು ಒಪ್ಪಂದ ಆಗಿದೆ. ನಂತರ ಹತ್ತಿ ವ್ಯಾಪಾರಿ ಡಿಜಿಟಲ್ ತೂಕದಲ್ಲಿ ರೈತರಿಗೆ ಗೋತ್ತಗುತ್ತೆ ತೂಕಕ್ಕೆ ಸೆನ್ಸಾರ್ ಅಳವಡಿಕೆ ಮಾಡಿ ಒಂದು ತೂಕಕ್ಕೆ 10 ರಿಂದ 15 ಕೆಜಿ ಹತ್ತಿ ತೂಕಕ್ಕೆ ಕಡಿಮೆ ಬರುವಾಗೇ ಸೆಟ್ಟಿಂಗ್ ಮಾಡಿ ಒಂದು ಲಾರಿ ಲೋಡ್ ಹತ್ತಿ ಖರೀದಿ ಮಾಡಿದ ಮಹಿಬೂಬ ಮೀರಗೌಡ ಯಾಳವಾರ ಮತ್ತು ದಲ್ಲಾಳಿಗಳು ರೈತರಿಗೆ ಮೋಸ ಮಾಡಿದ್ದಾನೆ. ರೈತನಿಗೆ ಇದರ ಬಗ್ಗೆ ತಿಳಿಯದ ಕಾರಣ 60 ಕ್ವಿಂಟಲ್ ಬದಲು 45 ಕ್ವಿಂಟಲ್ ಮಾತ್ರ ಬಂದಿದ್ದು. ಒಂದು ಲಾರಿಗೆ 10 ರಿಂದ 15 ಕ್ವಿಂಟಲ್ ಹತ್ತಿಯ ತೂಕದಲ್ಲಿ ಮೋಸ ಮಾಡಿದ್ದು ಸಾಕ್ಷೀ ಸಮೇತವಾಗಿ ಇಜೇರಿ ಗ್ರಾಮದಲ್ಲಿ ಡಿಜಿಟಲ್ ತೂಕ ಮತ್ತು ಲಾರಿ ಜೊತೆಗೆ ಖದೀಮರು ಸಿಕ್ಕಿ ಹಾಕಿ ಕೊಂಡಿದ್ದು.

ಗ್ರಾಮದ ಹೋರಾಟಗಾರರು ಇಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ. ತಾಲ್ಲೂಕಿನಲ್ಲಿ ಡಿಜಿಟಲ್ ಸೆನ್ಸಾರ್ ಇರುವ ತೂಕದಿಂದ ರೈತರಿಗೆ ಭಾರಿ ಪ್ರಮಾಣದ ಮೋಸ ಮಾಡುತ್ತಿದ್ದು ದೊಡ್ಡ ಜಾಲ ಕೆಲಸ ಮಾಡುತ್ತಿರುವುದು ಕಂಡು ಬರುತ್ತಿದೆ. ಅದರಲ್ಲಿ ಜೇವರ್ಗಿ ತಾಲ್ಲೂಕಿನ ಯಾಳವಾರ ಗ್ರಾಮದಲ್ಲಿ ಅತೀ ಹೆಚ್ಚು ಹತ್ತಿ ವ್ಯಾಪಾರ ಮಾಡುತ್ತಿರುವ ದಲ್ಲಾಳಿಗಳಲ್ಲಿ ಡಿಜಿಟಲ್ ಮೋಸದ ತೂಕಗಳು ಹೆಚ್ಚು ಇರುವುದು ನೋಡಬಹುದು. ಈ ಹಿಂದೆ ಕೂಡ ಯಡ್ರಾಮಿ ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ಕೂಡ ರೈತರಿಗೆ ಮೋಸ ಮಾಡಿದ್ದು ಮೋಸ ಮಾಡಿದ ವ್ಯಾಪಾರಸ್ಥನ ದನದ ಖೋಟ್ಟಿಗೆ ಕಟ್ಟಿ ಹಾಕಿ ರೂ.14 ಲಕ್ಷ ಗಳನ್ನು ರೂ ದಂಡ ಹಾಕಿದರು. ಇಷ್ಟಿದ್ದರು ಬುದ್ದಿ ಕಲಿಯದ ಈ ಹರಾಮಿಗಳು ಮತ್ತೇ ರೈತರಿಗೆ ಮೋಸ ಮಾಡುತ್ತಿದ್ದು ಕೂಡಲೇ ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಿ ಕಠಿಣ ಶಿಕ್ಷೆ ನೀಡಬೇಕೆಂದು ಹೋರಾಟಗಾರರು ಒತ್ತಾಯಿಸುತ್ತಿದ್ದಾರೆ.