ಭಾಗ್ಯಶ್ರೀ ಕುಲಿಗೋಡ ಶ್ರೀ ಸಿದ್ದರಾಮೇಶ್ವರ – ಪ್ರೌಢ ಶಾಲೆಗೆ ಪ್ರಥಮ.
ಮುಗಳಖೋಡ ಮೇ.12

ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಶ್ರೀ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ಸಿದ್ದರಾಮೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕುಮಾರಿ ಭಾಗ್ಯಶ್ರೀ ಕುಲಿಗೋಡ ಪ್ರತಿಶತ 96.32% ಹಾಗೂ ಪ್ರಿಯಾ ಹಳ್ಳೂರ 95.04% ಮತ್ತು ಪ್ರತಿಭಾ ಶೇಗುಣಸಿ 94.88% ಅಂಕಗಳನ್ನು ಗಳಿಸುವ ಮೂಲಕ ಹಾಗೂ ಸಮಾಜ ವಿಜ್ಞಾನದಲ್ಲಿ ಮೂರು ಜನ ವಿದ್ಯಾರ್ಥಿಗಳೂ 100 ಕ್ಕೆ 100 ಅಂಕಗಳನ್ನು ಗಳಿಸುವ ಮೂಲಕ ನಮ್ಮ ಪ್ರೌಡ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಹಾಗೂ ಒಟ್ಟು ವಿದ್ಯಾರ್ಥಿಗಳಲ್ಲಿ distinction-10 first class-17 second class-04 ಈ ರೀತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆದು ನಮ್ಮ ಪ್ರೌಢ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಇಂಗ್ಲಿಷ್ ಉಪನ್ಯಾಸಕರಾದ ಬಿ.ಬೀ ಬಂಡಿಗನಿ ಅವರು ಪತ್ರಿಕಾ ವರದಿಯಲ್ಲಿ ತಿಳಿಸಿದ್ದಾರೆ ನಮ್ಮ ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆ ಗಳಲ್ಲಿಯೂ ಕೂಡಾ ವಿವಿಧ ಕ್ರೀಡೆಯಲ್ಲಿ ರಾಜ್ಯ ಮಟ್ಟದವರೆಗಿನ ಕ್ರೀಡೆಗಳಲ್ಲಿಯೂ ಭಾಗವಹಿಸಿ ನಮ್ಮ ಪ್ರೌಢ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಆದ್ದರಿಂದ ನಮ್ಮ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಅಶೋಕ್ ಕೊಪ್ಪದ ಅವರ ನಿರ್ದೇಶನದಂತೆ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಸತ್ಕರಿಸಲಾಯಿತು ಈ ಸಮಯದಲ್ಲಿ ಸಿಬ್ಬಂದಿಗಳಾದ ಪಿ.ಯು ಕಾಲೇಜಿನ ಪ್ರಾಚಾರ್ಯರಾದ ಎಸ್.ಜಿ ಹಂಚಿನಾಳ. ಪ್ರಧಾನ ಗುರುಗಳಾದ ವ್ಹಿ.ಎಂ ಕರಡಿ. ಹಾಗೂ ಸಿಬ್ಬಂದಿಗಳಾದ ಮಹಾನಿಂಗ ಕೊಪ್ಪದ ವಾಯ್.ಕೆ ಕಾಕಂಡಕಿ ಜಿ.ಎಲ್ ಸಂಗಾನಟ್ಟಿ ಎ.ಎಲ್ ಪೂಜೇರಿ ಅಮರ ಮ್ಯಾಗೇರಿ ಹಾಗೂ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪರಶುರಾಮ.ತೆಳಗಡೆ.ರಾಯಬಾಗ