“ಆ ದಿನಗಳು ಈ ದಿನಗಳು ಎಲ್ಲರಿಗೂ ಬಾಲ್ಯದ ನೆನಪುಗಳು ಅತೀ ಅಮೂಲ್ಯ”…..

ನಾವೆಲ್ಲಾ ನೋಡಿದ ನೋಟ,ಆಡಿದ ಆಟ, ಹಾಡಿದ ಹಾಡು, ಬೆಳದಿಂಗಳ ಊಟ, ಒತ್ತಡವಿಲ್ಲದ ಪಾಠ, ಕಂಠಪಾಠ, ಓರಗೆಯವರ ಒಡನಾಟ ಮುಂತಾದವು, ಇಂತಹ ಅವಕಾಶಗಳನ್ನು ಪಡೆದ ನಮ್ಮ ಬಾಲ್ಯ ಎಷ್ಟು ಚೆನ್ನ!
ನಿರ್ಬಂಧ ಹೇರದ ಪೋಷಕರು, ಕೃತ್ರಿ ಮತೆ ಇಲ್ಲದ ಮನಸ್ಸುಗಳು, ಅಸೂಯೆಯಿರದ ಸ್ವಚ್ಛಂದದ ಅವಕಾಶಗಳನ್ನು ಅನುಭವಿಸಿದ ನಾವೇ ಧನ್ಯರು. ಹಬ್ಬ ಹರಿದಿನಗಳ ಸಡಗರ ಸಂಭ್ರಮ, ತಾರತಮ್ಯ ಎಣಿಸದ, ಎಲ್ಲವನ್ನೂ ಎಲ್ಲರನ್ನೂ ಹತ್ತಿರದಿಂದ ನೋಡುವ, ಸುಖ ದುಃಖಗಳಲ್ಲಿ ಭಾಗಿಯಾಗುವ ನಮ್ಮ ಬಾಲ್ಯ ಅವರ್ಣನೀಯ,

ಇಂದಿನ ಮಕ್ಕಳಿಗೆ ಮನೆಯಿಂದ ಹೊರಬಂದು ಆಡುವ ಅವಕಾಶಗಳಿಲ್ಲ. ಪೋಷಕರ ಅತೀ ಪ್ರೀತಿ ಹಾಗೂ ಅಂಕಗಳ ಗೀಳು ಒತ್ತಡದ ವಿದ್ಯಾಭ್ಯಾಸ, ಮಕ್ಕಳ ಬಾಲ್ಯವನ್ನೇ ನುಂಗಿ ಹಾಕಿವೆ. ಟಿ.ವಿ, ಮೊಬೈಲ್, ಕಂಪ್ಯೂಟರ್ ಮುಂತಾದವು ಮಕ್ಕಳ ಸಮಯವನ್ನು ಕಿತ್ತು ಕೊಂಡಿವೆ. “ಸಾಸಿವೆ ತರಲು ಸಾವಿಲ್ಲದ ಮನೆಯಿಲ್ಲ” ಅಂದು .
“ಮೊಬೈಲ್ ಇಲ್ಲದ ಮನೆಯಿಲ್ಲ” ಇಂದು .ಮಾಧ್ಯಮಗಳ ಬಳಕೆ ಸದುಪಯೋಗಕ್ಕೆ ಮಾತ್ರ ಎನ್ನುವ ಜಾಗೃತಿ ಎಲ್ಲರಲ್ಲೂ ಬರಬೇಕು, ದಿನೇ ದಿನೇ ಪ್ರಗತಿಯತ್ತ ಸಾಗಬೇಕಾದ ನಮ್ಮ ಮಕ್ಕಳ ಬಾಲ್ಯ ಎತ್ತ ಸಾಗುತಿದೆ? ಕೆಲವೇ ವರ್ಷಗಳ ಅಂತರದಲ್ಲಿ ಈ ನಿರಾಶದಾಯಕ ಬಾಲ್ಯ ಸರಿಯೇ? ಸಮಾಜದ ಎಲ್ಲರೂ ಸೇರಿ ಮಕ್ಕಳಿಗೆ ಸಿಗಬೇಕಾದ ಬಾಲ್ಯ ದೊರಕಿಸಲು ಶ್ರಮಿಸೋಣ.
ಎಸ್. ದ್ಯಾಮಕ್ಕ
ಶಿಕ್ಷಕಿ, ಸ.ಹಿ.ಪ್ರಾ ಶಾಲೆ
ಕಾಟಪ್ಪನಹಟ್ಟಿ.ಚಳ್ಳಕೆರೆ