ಪುರ ಸಭೆ ನಾಮ ನಿರ್ದೇಶಿತ ಸದಸ್ಯರಿಂದ – ಅಧಿಕಾರ ಸ್ವೀಕಾರ.
ಮಾನ್ವಿ ಅ.30


ಪಟ್ಟಣದ ಪುರ ಸಭೆಗೆ ಸರ್ಕಾರದಿಂದ ನಾಮ ನಿರ್ದೇಶನದ ಆಧಾರದ ಮೇಲೆ ಆಯ್ಕೆಯಾದ ಐದು ಸದಸ್ಯರು ಇಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾನ್ವಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜಿ.ಹಂಪಯ್ಯ ನಾಯಕ ಅವರು ಉಪಸ್ಥಿತರಿದ್ದು, ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.ನಂತರ ಮಾತನಾಡಿದ ಶಾಸಕರು.

“ಪಕ್ಷ ಮತ್ತು ಸರ್ಕಾರ ನಿಮಗೆ ಒಂದು ಮಹತ್ವದ ಜವಾಬ್ದಾರಿಯನ್ನು ಕೊಟ್ಟಿದೆ. ಆ ಜವಾಬ್ದಾರಿಯನ್ನು ಅರಿತು, ಚುನಾಯಿತ ಜನ ಪ್ರತಿನಿಧಿಗಳ ಜೊತೆಗೂಡಿ, ಮಾನ್ವಿ ನಗರದ ಅಭಿವೃದ್ಧಿಗೆ ಹಾಗೂ ಬಾಕಿ ಉಳಿದಿರುವ ಕಾಮಗಾರಿಗಳ ಪೂರ್ಣ ಗೊಳಿಸಲು ಸಕ್ರಿಯ ಪಾತ್ರ ವಹಿಸ ಬೇಕು” ಎಂದು ಹೇಳಿದರು.

ಅವರು ಮುಂದುವರಿದು, ಪುರ ಸಭೆಯ ಮುಖ್ಯಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಮಾನ್ವಿಯ ಸೌಂದರ್ಯೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ನಾಮನಿರ್ದೇಶಿತ ಸದಸ್ಯರಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಹಂಪಯ್ಯ ನಾಯಕ, ಜಮೀಲ್ ಅಹಮದ್, ಈ. ವಿಜಯಕುಮಾರ, ರೇಣುಕಾ ರೆಡ್ಡಿ ಮತ್ತು ಕಾಮೇಶ ನೂತನ ನಾಮನಿರ್ದೇಶನ ಸದಸ್ಯರಾಗಿ ಶಾಸಕರ ನೇತೃತ್ವದಲ್ಲಿ ಅಧಿಕಾರ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಪುರಸಭೆ ಪ್ರಭಾರಿ ಅಧ್ಯಕ್ಷೆ ಮೀನಾಕ್ಷಿ ಡಿ.ರಾಮಕೃಷ್ಣ, ಪುರಸಭೆ ಮುಖ್ಯಾಧಿಕಾರಿ ಪರಶುರಾಮ ದೇವಮಾನಿ, ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ಪಂಚ ಗ್ಯಾರಂಟಿಗಳ ಅಧ್ಯಕ್ಷ ಬಿ.ಕೆ ಅಮರೇಶಪ್ಪ, ಪುರಸಭೆ ಸದಸ್ಯರಾದ ಲಕ್ಷ್ಮೀದೇವಿ ನಾಯಕ, ಶೇಖ್ ಫರಿದ್ ಉಮ್ರಿ, ಹೆಚ್.ಪಿ.ಎಂ.ಭಾಷ, ಸುಖಮುನಿ, ಸಾಬಿರ್ ಪಾಷಾ, ಕಾಂಗ್ರೆಸ್ ಪಕ್ಷದ ಮುಖಂಡರಾದ ಸೈಯದ್ ಖಾಲಿದ್ ಖಾದ್ರಿ, ರಾಜಾ ಸುಭಾಷಚಂದ್ರ ನಾಯಕ, ಗಂಗಣ್ಣ ಸಾಹುಕಾರ, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಪುರಸಭೆ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಸೇರಿದಂತೆ ನೂತನ ಸದಸ್ಯರಿಗೆ ಅಭಿನಂದಿಸಲು ಆಗಮಿಸಿದ ನೂರಾರು ಜನ ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

