ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳ ಮನಸ್ಥಿತಿಗೆ – ಉಗ್ರ ಹೋರಾಟದ ಸಂಗಮೇಶ ಎಚ್ಚರಿಕೆ.
ಕಲಕೇರಿ ಅ.31


ದೇವರ ಹಿಪ್ಪರಗಿ ಮತ ಕ್ಷೇತ್ರದ ವ್ಯಾಪ್ತಿಗೆ ಬರುವ ತಾಳಿಕೋಟಿ ತಾಲೂಕಿನ ಕಲಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಹಾಗೂ ಕರ್ತವ್ಯ ನಿರ್ಲಕ್ಷ್ಯದ ಗಂಭೀರ ಆರೋಪಗಳು ಕೇಳಿ ಬಂದಿವೆ. ಈ ಕುರಿತು ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಂಗಮೇಶ ನಡವಿನಕೇರಿ ಅವರು ಆಸ್ಪತ್ರೆಯ ಆಡಳಿತ ಮತ್ತು ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಂಚ, ನಕಲಿ ಹಾಜರಾತಿ ಮತ್ತು ಪೂರ್ಣ ಸಂಬಳ ಆರೋಪಗಳು, ದಸಂಸ ನಾಯಕ ಸಂಗಮೇಶ ನಡವಿನಕೇರಿ ಅವರ ಪ್ರಕಾರ, ಕಲಕೇರಿ ಪಿ.ಹೆಚ್.ಸಿಯ ಅನೇಕ ಸಿಬ್ಬಂದಿಗಳು ನೇಮಕದ ನಿಯಮಗಳ ಪ್ರಕಾರ ಕೆಲಸ ಮಾಡುತ್ತಿಲ್ಲ.ಕರ್ತವ್ಯ ನಿರ್ಲಕ್ಷ್ಯ ಅನೇಕ ಸಿಬ್ಬಂದಿಗಳು ತಿಂಗಳಿಗೆ ಕೇವಲ 10 ದಿನಗಳು ಮಾತ್ರ ಡ್ಯೂಟಿ ಮಾಡಿ, ಮೇಲಾಧಿಕಾರಿಗಳಿಗೆ ಲಂಚ ನೀಡುವ ಮುಖಾಂತರ ಪೂರ್ಣ ತಿಂಗಳ ಸಂಬಳವನ್ನು ಪಡೆಯುತ್ತಿದ್ದಾರೆ. ನಕಲಿ ಹಾಜರಾತಿ, ಯಾವುದೇ ಕಾನೂನಿನ ಪ್ರಕಾರ ಹಾಜರಾತಿಯನ್ನು ಪಾಲನೆ ಮಾಡದೆ ತಮ್ಮ ಮನಸ್ಸಿಗೆ ಬಂದ ಹಾಗೆ ಲಂಚ ಪಡೆದು ನಕಲಿ ಹಾಜರಾತಿ ಸೃಷ್ಟಿಸಿ ಸಂಬಳ ಪಡೆಯಲಾಗುತ್ತಿದೆ” ಎಂದು ಅವರು ಆರೋಪಿಸಿದ್ದಾರೆ. ಸಂಬಳಕ್ಕೆ, ಕೂಡಲೇ ಪ್ರತಿ ಒಬ್ಬ ನೌಕರರ ಹಾಜರಾತಿಯನ್ನು ಕಟ್ಟು ನಿಟ್ಟಾಗಿ ಪರಿಶೀಲಿಸಿ, ಅವರು ಎಷ್ಟು ದಿನ ಕೆಲಸ ಮಾಡಿರುತ್ತಾರೆ ಅದರ ಪ್ರಕಾರವೇ ಸಂಬಳ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಔಷಧಿ ವಿತರಣೆಯಲ್ಲಿ ಲೋಪ ಮತ್ತು ಸಿಬ್ಬಂದಿ ಕೊರತೆ, ಇದಲ್ಲದೆ, ಈ ಸಮುದಾಯ ಆರೋಗ್ಯ ಕೇಂದ್ರವು ಅತಿ ದೊಡ್ಡ ಆರೋಗ್ಯ ಕೇಂದ್ರವಾಗಿದ್ದರೂ, ರೋಗಿಗಳ ಪ್ರಾಣದೊಂದಿಗೆ ಚೆಲ್ಲಾಟವಾಡಲಾಗುತ್ತಿದೆ ಎಂದು ದೂರಿದ್ದಾರೆ. ಫಾರ್ಮಸಿ ಸಿಬ್ಬಂದಿ ಇಲ್ಲ ರೋಗಿಗಳಿಗೆ ಔಷಧಿ ನೀಡಲು ಒಬ್ಬರೂ ಫಾರ್ಮಸಿ ಸಿಬ್ಬಂದಿ ಔಷಧ ವಿತರಕರು ಇಲ್ಲ.ವಿದ್ಯಾರ್ಥಿಗಳಿಂದ ವಿತರಣೆ, ಇದರ ಬದಲು ನರ್ಸಿಂಗ್ ಕಲಿಯುವ ವಿದ್ಯಾರ್ಥಿಗಳ ಮುಖಾಂತರ ರೋಗಿಗಳಿಗೆ ಔಷಧಿ ನೀಡಲಾಗುತ್ತಿದ್ದು, ಇದು ರೋಗಿಗಳ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ತಕ್ಷಣ ನೇಮಕಾತಿಗೆ ಒತ್ತಾಯ, ರೋಗಿಗಳಿ ಔಷಧಿ ನೀಡಲು ಪ್ರತ್ಯೇಕ ಮತ್ತು ಅರ್ಹ ಸಿಬ್ಬಂದಿಯನ್ನು ಕೂಡಲೇ ನೇಮಕ ಮಾಡಬೇಕು ಹಾಗೂ ಈ ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ಮೌಖಿಕವಾಗಿ ಹಲವು ಬಾರಿ ಹೇಳಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಒಂದು ವೇಳೆ ನಕಲಿ ಹಾಜರಾತಿ ಮುಖಾಂತರ ಸಂಬಳ ಮಾಡಿದ್ದೆ ಆದರೆ, ಮುಂದಿನ ದಿನಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಿ ದಸಂಸ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡ ಬೇಕಾಗುತ್ತದೆ. ಲಂಚದ ಆಸೆಗೆ ನಕಲಿ ಹಾಜರಾತಿ ಸೃಷ್ಟಿ ಮಾಡಿದವರ ಮೇಲೆ ಕಾನೂನಿನ ಪ್ರಕಾರ ಶಿಕ್ಷೆ ನೀಡಬೇಕು, ಎಂದು ಅವರು ಎಚ್ಚರಿಸಿದ್ದಾರೆ. ಅಲ್ಲದೆ, ಆಸ್ಪತ್ರೆಯಲ್ಲಿರುವ ಇನ್ನೂಳಿದ ಹಲವಾರು ಮೂಲಭೂತ ಸೌಕರ್ಯಗಳನ್ನು ಕೂಡಲೇ ಸರಿಪಡಿಸ ಬೇಕು, ವಿಳಂಬ ಮಾಡಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸಂಗಮೇಶ ನಡವಿನಕೇರಿ ಅವರು ಎಚ್ಚರಿಕೆ ನೀಡಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ.ಹಿಪ್ಪರಗಿ
 
				
