🚨 ಬ್ರೇಕಿಂಗ್ ನ್ಯೂಸ್ 🚨ಕಾಂಗ್ರೆಸ್ ಪಾಳಯದಲ್ಲಿ ಸಂಚಲನ, ಉಡುಪಿ ಇಂಟಕ್ ಘಟಕದಿಂದ ಪಕ್ಷಕ್ಕೆ ಹೊಸ ಶಕ್ತಿ – ಯುವ ನಾಯಕತ್ವಕ್ಕೆ ಮಹತ್ವ ನೀಡುತ್ತಿರುವ ರತ್ನಾಕರ ಪೂಜಾರಿ ಘೋಷಣೆ…!
ಉಡುಪಿ ಅ.31


ರಾಜ್ಯ ರಾಜಕಾರಣದ ಗಮನ ಸೆಳೆದಿರುವ ಸುದ್ದಿಯಲ್ಲಿ, ಉಡುಪಿ ಜಿಲ್ಲಾ ಇಂಟಕ್ (INTUC) ಘಟಕವು ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲು ಅನುಸರಿಸುತ್ತಿರುವ ಹೊಸ ಮತ್ತು ಆಕ್ರಮಣಕಾರಿ ಕಾರ್ಯತಂತ್ರವನ್ನು ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷರಾದ ರತ್ನಾಕರ ಪೂಜಾರಿ ಅವರು ಪತ್ರಿಕಾ ಹೇಳಿಕೆಯ ಮೂಲಕ ರಾಜ್ಯ ನಾಯಕರ ಗಮನಕ್ಕೆ ತಂದಿದ್ದಾರೆ.ಪೂಜಾರಿ ಅವರ ಹೇಳಿಕೆ ರಾಜ್ಯ ಕಾಂಗ್ರೆಸ್ ನಾಯಕತ್ವದಲ್ಲಿ ಚರ್ಚೆಗೆ ಕಾರಣವಾಗಿದ್ದು, ಉಡುಪಿ ಘಟಕದ ಕಾರ್ಯವೈಖರಿ ಶ್ಲಾಘನೆಗೆ ಪಾತ್ರವಾಗಿದೆ.
ಉಡುಪಿ ಇಂಟಕ್‌ನ ಐದು ಆಯಾಮಗಳ ‘ಪಕ್ಷ ಬಲವರ್ಧನೆ’ ಕಾರ್ಯತಂತ್ರ:-
ಯುವ ನೇತೃತ್ವಕ್ಕೆ ಆದ್ಯತೆ:-
ಇಂಟಕ್ ಮೂಲಕ ಹೊಸ ಯುವ ನಾಯಕತ್ವವನ್ನು ಸೃಷ್ಟಿಸಿ, ಅವರನ್ನು ನೇರವಾಗಿ ಕಾಂಗ್ರೆಸ್ ಪಕ್ಷದ ಕೆಲಸಗಳಿಗೆ ಸಜ್ಜು ಗೊಳಿಸಲಾಗುತ್ತಿದೆ. ಇದು ಭವಿಷ್ಯದ ನಾಯಕರಿಗೆ ವೇದಿಕೆ ಕಲ್ಪಿಸಿದೆ.
ಬ್ಲಾಕ್‌ಗಳಲ್ಲಿ ಕ್ರಿಯಾಶೀಲತೆ:-
ಜಿಲ್ಲೆಯ ಪ್ರತಿ ಬ್ಲಾಕ್ ಅಧ್ಯಕ್ಷರ ಹುದ್ದೆಗಳಿಗೆ ಸಂಘಟನಾ ಕೌಶಲ್ಯ ಮತ್ತು ಚುರುಕುತನ ಹೊಂದಿರುವ ಯುವಕರನ್ನು ನೇಮಕ ಮಾಡಲಾಗಿದೆ. ಇದರಿಂದ ಇಂಟಕ್ ಘಟಕವು ಹಿಂದೆಂದಿಗಿಂತಲೂ ಹೆಚ್ಚು ಚಟುವಟಿಕೆಯಿಂದ ಕೆಲಸ ಮಾಡುತ್ತಿದೆ.
ಮಹಿಳಾ ಘಟಕದ ಸಂಪೂರ್ಣ ಬಲವರ್ಧನೆ:-
ಮಹಿಳಾ ಘಟಕಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಸಂಘಟನೆಯು ಸಮಾಜದ ಎಲ್ಲ ಸ್ತರಗಳನ್ನು ತಲುಪಲು ಪ್ರಯತ್ನಿಸುತ್ತಿದೆ.
ಕಾರ್ಮಿಕರ ಸಮುದಾಯದ ಏಕೀಕರಣ:-
ಅಸಂಘಟಿತ ಕಾರ್ಮಿಕರ ಸಂಘಗಳು, ಚಾಲಕರ ಸಂಘಗಳು ಸೇರಿದಂತೆ ಇಂಟೆಕ್ ಕೂಡ ಚಾಲಕ ಸಂಘ ಮತ್ತು ಅಸಂಘಟಿತ ಕಾರ್ಮಿಕ ಸಂಘ ಎರಡನ್ನು ಹೊಸದಾಗಿ ಪ್ರಾರಂಭ ಮಾಡಿದೆ.ಎಲ್ಲಾ ಕಾರ್ಮಿಕ ವಲಯವನ್ನು ಒಗ್ಗೂಡಿಸಿ ಕಾಂಗ್ರೆಸ್‌ನ ಮುಖ್ಯವಾಹಿನಿಗೆ ತರಲಾಗುತ್ತಿದೆ. ಇದು ಪಕ್ಷಕ್ಕೆ ಬೃಹತ್ ಕಾರ್ಮಿಕ ಸಮುದಾಯದ ಬೆಂಬಲವನ್ನು ಖಚಿತ ಪಡಿಸಲಿದೆ.
ರತ್ನಾಕರ ಪೂಜಾರಿ ಅವರ ಬಲವಾದ ಪ್ರತಿಪಾದನೆ:-
ಉಡುಪಿ ಜಿಲ್ಲಾ ಇಂಟಕ್ ಘಟಕದ ಈ ಸಕ್ರಿಯ ಕೆಲಸದಿಂದ ಹೊಸ ಮುಖಗಳು ಮತ್ತು ಯುವ ಜನಾಂಗ ಕಾಂಗ್ರೆಸ್ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಆದ್ದರಿಂದ, ರಾಜ್ಯ ಮತ್ತು ಜಿಲ್ಲಾ ಕಾಂಗ್ರೆಸ್ ನಾಯಕರು ಇಂಟಕ್ ಘಟಕಕ್ಕೆ ಹೆಚ್ಚಿನ ಬೆಂಬಲ ಮತ್ತು ಮಾನ್ಯತೆ ನೀಡಬೇಕು. ಈ ಬೆಂಬಲದಿಂದ ಉಡುಪಿ ಜಿಲ್ಲೆಯು ಪಕ್ಷಕ್ಕೆ ಮಹತ್ತರವಾದ ಬಲವನ್ನು ತಂದುಕೊಡುವ ಸಾಮರ್ಥ್ಯ ಹೊಂದಿದೆ ಎಂದು ಪೂಜಾರಿ ಅವರು ಬಲವಾಗಿ ಪ್ರತಿಪಾದಿಸಿದ್ದಾರೆ.ಈ ಬೆಳವಣಿಗೆಯಿಂದ ರಾಜ್ಯ ಕಾಂಗ್ರೆಸ್ ಉಡುಪಿ ಘಟಕದ ಮೇಲೆ ಇಡೀ ರಾಜ್ಯದ ನಾಯಕರ ಗಮನ ನೆಟ್ಟಿದೆ.
ವರದಿ:ಆರತಿ.ಗಿಳಿಯಾರು.ಉಡುಪಿ
 
				
 
						