“ಕಾಯಕ ತತ್ವ ನಾಯಕ” “ನಿಜ ಮನುಜ ಮತದವನು ಶ್ರೀಯುತ ರಮೇಶ ಶಂಕ್ರೆಪ್ಪ ಅಂಗಡಿ. (ಪೂಜಾರಿ ಸಾಹುಕಾರ)”…..

ವಿಶ್ವದಲಿ ಜೀವರಾಶಿಗಳ ನಿತ್ಯ ಬದುಕು ಹೋರಾಟದಿ ಸಹ ಒಡನಾಟದಿಂದ ನೋವು ನಲಿವಿನೊಂದಿಗೆ ಗೆಲುವಿನ ಜೀವನ ಸಾಗಿಸುವ ಸರ್ವ ಜೀವ ಸಂಕುಲಗಳು ಆದರೂ ಮಾನವ ಮಾತ್ರ ಶ್ರೇಷ್ಠತೆಯ ಬುದ್ಧಿ ಜ್ಞಾನ ಹುಟ್ಟಿನಿಂದ ಕೆಲವೊಬ್ಬರಿಗೆ ವರದಾನವಾಗಿರುತ್ತದೆ.ಉತ್ತರ ಕನ್ನಡ ಉಡುಗೆಯ ಗತ್ತು ಗಮ್ಮತ್ತಿನ ಮೇರು ವ್ಯಕ್ತಿತ್ವದ ಮಾದರಿ ರೂವಾರಿ.ಅಪರೂಪದ ಉತ್ತಮ ಗುಣಗಳು ಹೊರಹೊಮ್ಮಲು ಕೆಲವರಿಗೆ ಮಾತ್ರ ಸಾಧ್ಯ ಅಂತಹ ಪ್ರತ್ಯಕ್ಷತೆಯ ಪವಾಡವೆ ಸರಿತಂದೆ ತಾಯಿ ದೇವರ ವರ ಪ್ರಸಾದದ ಫಲವೆ ಪುಣ್ಯ ಪುರುಷರ ಜನನ ಲೋಕದಲಿ ಸಮಾಜ ಕುಟುಂಬಕ್ಕೆ ಇವರ ಇರುವಕೆ ಮಹತ್ವ ಅನಿವಾರ್ಯ ತೆ ಇರುತ್ತದೆ. ಸ್ವಾರ್ಥ ಇರದ ಸಹಾಯ ಗುಣ ತತಕ್ಷಣ ಸ್ಪಂದನೆ ತನ್ನಿಂದಾಗುವ ಸಹಾಯ ಬಡವ ಸಿರಿವಂತ ಬೆದ ಮಾಡದೆ ಅಳಿಲು ಸೇವೆಗೆ ದಾವಿಸಿ ನಿಭಾಯಿಸಿ ಹೊಗಳಿಕೆಗೆ ಹಿಗ್ಗದೆ ತೆಗಳಿಕೆ ಕುಗ್ಗದೆ ನಗುಮುಖದಿ ಸಹಜತೆಯ ಸಹಕಾರದ ತತ್ವ ಕಾಣದ ರೂಪದಲಿರುವ ಮೇರುತನದವನು.ದೇವರ ಹಿಪ್ಪರಗಿಯ,ಶ್ರೀಯುತ ರಮೇಶ ಶಂಕ್ರೆಪ್ಪ ಅಂಗಡಿ(ಪೂಜಾರಿ ಸಾಹುಕಾರ)ಶಿಕ್ಷಣ ಪದವಿ ಇರದ ಅವರಗಿಂತ ಜ್ಞಾನವ ಅರಿತ ಅಪರೂಪದ ಗುಣ ದೈವಿ ವರದವನು.ಸಂಸ್ಕಾರ ಸಂಸ್ಕೃತಿ ನೋಡಿ ಕೇಳಿ ಅನುಸರಿಸಿ ಪಡೆದ ಸಿರಿ ಸಮಾಜ ಕುಟುಂಬದ ಏಳ್ಗೆಗೆ ಉಪಯೋಗಿಸುವ ಕಲೆ ಕರಗತ ನಾಯಕತ್ವದ ನಿಜ ಮನುಜ ಮತದವನು.ಜಗದಲಿ ನೋವು ನಲಿವು ಸುಖದುಃಖ ಸಿರಿ ಬಡತನ ಬೆನ್ನು ಹತ್ತಿ ಮಾನವನನ್ನು ಕುಗ್ಗಿಸಿದರೂ ಬಗ್ಗದ ಜಗ್ಗದ ಜನ ನಾಯಕ ಅಹಂ ತೋರದ ಪ್ರೀತಿ ಸಹಕಾರವೇ ಮನುಜ ಮತದ ತತ್ವವೆಂದು ಅರಿತವನು ನಿತ್ಯ ಕಾಯಕ ಜೀವನ ಉದ್ಧಾರ ಮೂಲ ಎಂಬ ಅರಿತ ದಣಿವರಿಯದ ದಣಿ ಗರ್ವ ಇರದ ಸರಳ ಸಜ್ಜನಿಕೆಯ ಅಪರೂಪದವರು ತೆರೆಮರೆಯಲಿದ್ದು ಜೀವನ ಪಯಣ ಸಾಗುವರು.ಬಂಗಾರ ಎಂದು ಗೊತ್ತಿದ್ದರೂ ಅಕ್ಕಸಾಲಿಗ ಪರೀಕ್ಷಿಸುವ ಹಾಗೇ ಸೃಷ್ಟಿ ಕರ್ತನು ಇಂಥವರಿಗೆ ನೋವು ನಲಿವು ನೀಡುವದು ಮರೆಯನು ಎಂಥಹ ಸಂಧರ್ಭದಲ್ಲೂ ಉತ್ತಮತನವ ಮಾಡುವ ಗುಣ ದ್ವಿಗುಣಭಾವ ಹೆಚ್ಚಸಿ ಒಳ್ಳೆಯ ಕಾಯಕ ದೇವನ ಸ್ಮರಣೆ ಮರೆಯದವನು. ಬದುಕು ನಾಲ್ಕು ಜನರ ನಾಲಿಗೆಯಲಿ ಒಳ್ಳೆತನದವನು ಎಂಬ ತಂತಾನೆ ನುಡಿಯಲಿ ನಲಿಯುವವನು. ನಿತ್ಯ ಕಾಯಕದ ಜೋತೆ ಸಮಾಜಮುಖಿ ಶುಭ ಕಾರ್ಯದಲಿ ಪಾಲ್ಗೊಂಡು ಅಳಿಲು ಸೇವೆ ಮಾಡುವುದು. ಬಡವ ಬಲ್ಲಿದ ಎನ್ನದೇ ಸಮಾನ ಮನಸ್ಕ ಒಡನಾಟದ ಜೀವನಾಡಿ ತರಹ ಸಮಾಜ ಕುಟುಂಬ ಹಿತವ ಮುಖ್ಯ ಗುರಿಯಾಗಿರುತ್ತದೆ. ಬರಹದ ಉಧ್ಯೇಶ ಇಷ್ಟೆ ನಮ್ಮ ಸುತ್ತ ಮುತ್ತ ಕುಟುಂಬ ಸಮಾಜದಲ್ಲಿ ಅಪರೂಪದ ವ್ಯಕ್ತಿತ್ವದವರು ಇರುವರು ಇಂಥವರನ್ನು ಗೌರವಿತವಾಗಿ ಕಂಡು ಧನ್ಯರಾಗೋಣ. ಶುಧ್ಧ ಮನ ಸ್ವಚ್ಛ ಹೃದಯ ಭಾವ ಬೆಸೆಯೋಣ ಹರುಷದಿ ನಲಿಯೋಣ.

ಶ್ರೀ ದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ
 
				
 
						