ಸಿದ್ಧ ಶ್ರೀ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಪೂರ್ವಭಾವಿ ಸಭೆ – ಚಲನ ಚಿತ್ರಗಳ ಆಹ್ವಾನ.

ಸಿದ್ಧನಕೊಳ್ಳ ಡಿ.06

ಬಾಗಲಕೋಟ ಜಿಲ್ಲೆಯ ಇಲಕಲ್ಲ ತಾಲೂಕಿನ ಐತಿಹಾಸಿಕ ಸ್ಥಳ ಐಹೊಳೆ ಹತ್ತಿರದ ಸುಕ್ಷೇತ್ರ, ಉತ್ತರ ಕರ್ನಾಟಕದ ಕಲಾ ಪೋಷಕರ ಮಠ ಸಿದ್ಧನಕೊಳ್ಳದ ಸಿದ್ಧಶ್ರೀ ರಾಷ್ಟ್ರೀಯ ಉತ್ಸವ ಹಾಗೂ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ-೨೦೨೬ ಜ.೧೪, ೧೫ ಮತ್ತು ೧೬ ರಂದು ಜರುಗಲಿದ್ದು ಜ.೧೪ ರಂದು ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ, ಜ.೧೫ ರಂದು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ,ಜ.೧೬ ರಂದು ಜಾತ್ರಾ ಮಹೋತ್ಸವ ಸಮಾರೋಪ ಜರುಗಲಿದೆ ಎಂದು ಧರ್ಮಾಧಿಕಾರಿಗಳಾದ ಡಾ, ಶಿವಕುಮಾರ ಸ್ವಾಮೀಜಿ ತಿಳಿಸಿದ್ದಾರೆ.

ಸಿದ್ಧನಕೊಳ್ಳದ ಶ್ರೀಮಠದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಸಿದ್ಧಶ್ರೀ ಉತ್ಸವದಲ್ಲಿ ಸಹಸ್ರಾರು ಭಕ್ತರು ಸೇರುತ್ತಿದ್ದು ಸಂಗೀತ, ನೃತ್ಯ, ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳು ನೆರವೇರುತ್ತವೆ. ರಾಜ್ಯ, ಹೊರ ರಾಜ್ಯಗಳ ವಿವಿಧ ಸಾಧಕರು, ಪ್ರತಿಭಾನ್ವಿತ ಉದಯೋನ್ಮುಖ ಕಲಾ ಪ್ರತಿಭೆಗಳಿಗೂ ವೇದಿಕೆ ನೀಡಿ ಪ್ರೋತ್ಸಾಹಿಸಲಾಗುತ್ತದೆ.

ಪ್ರತಿ ವರ್ಷದಂತೆ ಈ ವರ್ಷವೂ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಹಮ್ಮಿಕೊಳ್ಳಲಾಗುತ್ತಿದ್ದು ಈಗಾಗಲೇ ಚಿತ್ರೋತ್ಸವ ಆಯ್ಕೆ ಸಮಿತಿ ರಚಿಸಲಾಗಿದೆ. ಚಲನ ಚಿತ್ರ ಪತ್ರಕರ್ತರಾದ ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ, ಜ್ಯೂ. ಉಪೇಂದ್ರ ವೀರೇಶ ಪುರವಂತ, ಚಲನ ಚಿತ್ರ ಕಲಾವಿದರಾದ ಸಂಗನಗೌಡ್ರು ಕುರುಡಗಿ, ಚಲನ ಚಿತ್ರ ನಿರ್ದೇಶಕ ಅರವಿಂದ ಮುಳಗುಂದ, ಚಲನ ಚಿತ್ರ ನಿರ್ದೇಶಕ, ನಿರ್ಮಾಪಕ ಲೋಕೇಶ ವಿದ್ಯಾಧರ, ಚಲನ ಚಿತ್ರ ಕಲಾವಿದೆ ಶ್ರೀಮತಿ ಸುನಂದಾ ಕಲ್ಬುರ್ಗಿ, ಭರತ ನಾಟ್ಯ ಕಲಾವಿದೆ ಕೃತ್ತಿಕಾ ಕಾರ್ಯ ನಿರ್ವಹಿಸಲಿದ್ದಾರೆ.

ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ಇನ್ನೂ ಬಿಡುಗಡೆ ಯಾಗದ ತಮ್ಮ ೨೦೨೫ ರಲ್ಲಿ ನಿರ್ಮಾಣವಾದ, ಆಗುತ್ತಿರುವ ಹೊಸ ಚಲನ ಚಿತ್ರಗಳ, ಟೆಲಿಫಿಲ್ಮ್, ಕಿರು ಚಿತ್ರಗಳ, ಟ್ರೈಲರ್, ಟೀಸರ್ ಮತ್ತು ಪೋಸ್ಟರ್‌ಗಳನ್ನು ಬಿಡುಗಡೆ ಮಾಡಬಹುದು. ಯಾವುದೇ ಪ್ರವೇಶ ಶುಲ್ಕವಿಲ್ಲದೆ ಉಚಿತ ಅವಕಾಶ ಕಲ್ಪಿಸಲಾಗಿದೆ. ಭಾಗವಹಿಸಿದ ಚಲನ ಚಿತ್ರ ತಂಡಗಳಿಗೆ ಅಭಿನಂದನಾ ಪತ್ರ, ನೆನಪಿನ ಸ್ಮರಣಿಕೆ, ಕಿರುಚಿತ್ರ ತಂಡಗಳಿಗೆ ಅಭಿನಂದನಾ ಪತ್ರಗಳನ್ನು ನೀಡಲಾಗುತ್ತದೆ.

ಆಸಕ್ತತರು ಡಿಸೆಂಬರ್ ೩೧ ರೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿ ಕೊಳ್ಳಬೇಕು. ನಂತರ ಬಂದವರಿಗೆ ಅವಕಾಶ ಇರುವುದಿಲ್ಲ. ಶ್ರೀಗಳ ಮತ್ತು ಆಯ್ಕೆ ಸಮಿತಿ ತೀರ್ಮಾನವೇ ಅಂತಿಮ. ಆಯ್ಕೆ ಯಾದವರಿಗೆ ನಂತರ ತಿಳಿಸಲಾಗುತ್ತದೆ.

ತಮ್ಮ ಟೀಸರ್, ಟ್ರೈಲರ್, ಪೋಸ್ಟರ್‌ಗಳನ್ನು ಡಾ, ಪ್ರಭು ಗಂಜಿಹಾಳ. ವಾಟ್ಸಪ್ ನಂ-೯೪೪೮೭೭೫೩೪೬ ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಚಲನ ಚಿತ್ರೋತ್ಸವ ವಿಭಾಗದ ಡಾ, ಪ್ರಭು ಗಂಜಿಹಾಳ-ಮೊ.೯೪೪೮೭೭೫೩೪೬, ಡಾ, ವೀರೇಶ ಹಂಡಿಗಿ-ಮೊ.೯೦೬೦೯೩೩೫೯೬, ವೀರೇಶ ಪುರವಂತ-ಮೊ.೭೦೨೬೦೬೨೩೬೪, ಸಂಗನಗೌಡ್ರು ಕುರುಡಗಿ-ಮೊ.೮೮೬೧೮೧೧೧೨೮ ಇವರನ್ನು ಸಂಪರ್ಕಿಸ ಬಹುದಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಡಾ, ಪ್ರಭು ಗಂಜಿಹಾಳ, ಸಂಗನಗೌಡ ಕುರುಡಗಿ, ವೀರೇಶ ಪುರವಂತರ, ವೀರಭದ್ರೇಶ್ವರಸ್ವಾಮಿ ಲಿಂಗಸೂರು, ಕರವೇ ಅಧ್ಯಕ್ಷ ಅಶೋಕ ಪೂಜಾರ, ವೀಣಾ ಹಿರೇಮಠ, ಚಲನ ಚಿತ್ರ ನಿರ್ದೇಶಕರಾದ ಲೋಕೇಶ ವಿದ್ಯಾಧರ, ಶಿವರಾಜು, ಸ್ಟೈಲ್ ಶಶಿ, ಸಂಗಮೇಶ ಹುದ್ದಾರ, ಮೈಲಾರಗೌಡ ಗೌಡಪ್ಪಗೌಡರ ಮೊದಲಾದವರು ಉಪಸ್ಥಿತರಿದ್ದರು.

ರಾಜ್ಯ ಮಟ್ಟದ ವಿಶೇಷ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button