ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮಹಾಪರಿ ನಿರ್ವಾಣ – ರಾಜ್ಯ ಸಂಘಟನಾ ಸಂಚಾಲಕರಾದ ಕೆ.ನಂಜಪ್ಪ ಬಸವನಗುಡಿ ಅವರ ನೇತೃತ್ವದಲ್ಲಿ ಜರುಗಿತು.
ಮೈಸೂರು ಡಿ.07

ಡಾ,ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮಹಾಪರಿ ನಿಬ್ಬಾಣ ದಿನಾಚರಣೆಯನ್ನು ಮಹಾತ್ಮ ಪ್ರೊಫೆಸರ್ ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ರಾಜ್ಯ ಸಂಘಟನಾ ಸಂಚಾಲಕರಾದ ಕೆ.ನಂಜಪ್ಪ ಬಸವನಗುಡಿ ನೇತೃತ್ವದಲ್ಲಿ ದೀಪಗಳ ಮೆರವಣಿಗೆಯನ್ನು ಹೆಬ್ಬಾಳ್ ಕಾಲೋನಿ ಮುಖ್ಯ ರಸ್ತೆ ಹಾಗೂ ಬಸವನಗುಡಿ ಮಾರ್ಗವಾಗಿ ನಿಂಗಯ್ಯನಕೆರೆ ಮೂಲಕ ಅಂಬೇಡ್ಕರ್ ವೃತ್ತಕ್ಕೆ ಬಂದು ಸಂಘದವರು ಯಜಮಾನರುಗಳು ಹಾಗೂ ಯುವಕರೊಂದಿಗೆ ಮೌನಾಚರಣೆಯನ್ನು ಮಾಡಿ ನಮ್ಮನ್ನಗಳಿದ ವಿಶ್ವ ರತ್ನ ಅಂಬೇಡ್ಕರ್ ರವರನ್ನು ಸ್ಮರಿಸಿ ಪುಷ್ಪಾರ್ಚನೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ಕೆ.ನಂಜಪ್ಪ ಬಸವನಗುಡಿ ರವರು ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರು ನೀಡಿರುವ ಸಂವಿಧಾನ ಜೀವಂತವಾಗಿದ್ದು ಕ್ಷಣ ಕ್ಷಣದಲ್ಲೂ ಜನ ಮಾನಸದಲ್ಲಿ ಅತಿ ಹೆಚ್ಚು ಗೌರವಕ್ಕೆ ಪಾತ್ರರಾಗಿರುವ ಏಕೈಕ ವಿಶ್ವ ಜ್ಞಾನಿ ಎಂದರೆ ಅದ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹಾಗಾಗಿ ನಾವೆಲ್ಲರೂ ಅವರ ಮಾರ್ಗದರ್ಶನದಲ್ಲಿ ಎಚ್ಚೆತ್ತುಕೊಂಡು ಸಂಘಟಿತರಾಗಿ ಮೌಢ್ಯತೆಗೆ ಒಳಗಾಗದೆ ಶಿಕ್ಷಣಕ್ಕೆ ಒತ್ತು ಕೊಟ್ಟು ಪ್ರಜಾವಂತರಾಗ ಬೇಕೆಂದು ಕರೆ ನೀಡಿದರು.

