ಶ್ರೀಶಾರದಾಶ್ರಮದಲ್ಲಿ ಡಿಸೆಂಬರ್ 11 ರಿಂದ – ಶಾರದಾಮಾತೆ ಜಯಂತ್ಯುತ್ಸವ.
ಚಳ್ಳಕೆರೆ ಡಿ.8

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಡಿಸೆಂಬರ್ 11 ರಿಂದ 13 ರ ವರೆಗೆ ಶ್ರೀಮಾತೆ ಶಾರದಾದೇವಿಯವರ 173 ನೇ. ಜಯಂತ್ಯುತ್ಸವ ಸತ್ಸಂಗ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಪ್ರತಿ ದಿನ ಸಂಜೆ 5.30 ರಿಂದ ಭಜನೆ, ಅರ್ಚನೆ ಮತ್ತು ವಿವಿಧ ಉಪನ್ಯಾಸಗಳನ್ನು ಏರ್ಪಡಿಸಿದ್ದು ಇದರಲ್ಲಿ ಮಾತಾಜೀ ತ್ಯಾಗಮಯೀ, ರಮ್ಯಾ ಕಲ್ಲೂರು, ಡಾ, ಎಚ್.ಎನ್ ಮುರಳೀಧರ ಭಾಗವಹಿಸಿ ಪ್ರವಚನ ನೀಡಲಿದ್ದಾರೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ-ಯತೀಶ್.ಎಂ ಸಿದ್ದಾಪುರ, ಚಳ್ಳಕೆರೆ.

