ಯುವ ಕಳ್ಳರು ಎಂಟು ಮನೆಗಳಿಗೆ ನುಗ್ಗಿ – ಸರಣಿ ಕಳ್ಳತನ.

ಬಳ್ಳೊಳ್ಳಿ ಡಿ.16

ಇಂಡಿ ತಾಲೂಕಿನ ಝಳಕಿ ಠಾಣಾ ವ್ಯಾಪ್ತಿಯಲ್ಲಿ ಬರುವ ಬಳ್ಳೊಳ್ಳಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಯುವ ಕಳ್ಳರು 8 ಮನೆಗಳಿಗೆ ನುಗ್ಗಿ ಸರಣಿ ಕಳ್ಳತನ ನಡೆಸಿ, ಮಿನಿ ವ್ಯ್ಹಾನ ಓಮಿನಿ ವಾಹನದಲ್ಲಿ ಪರಾರಿಯಾದ್ದಾರೆ ಎಂದು ಝಳಕಿ ಠಾಣಾ ಅಧಿಕಾರಿಗಳು ಮಂಜುನಾಥ್ ತೀರಕನ್ನವರ ತಿಳಿಸಿದರು.

ಬಳ್ಳೊಳ್ಳಿ ಗ್ರಾಮದ ಬಡ ಜನರು ಕಬ್ಬಿನ ಕಟಾವಕ್ಕೆ, ಇಟಿಂಗಿ ಭಟ್ಟಿಗಳಿಗೆ ದುಡಿಯಲು ಹೊಗಿದ್ದು ಅಂತಹ ಬಡವರ ಮನೆಗಳಿಗೆ ಸುಮಾರು ರಾತ್ರಿ 1:30 ರಿಂದ 2:30 ಸಮಯದಲ್ಲಿ ಸುಮಾರು 8 ಮನೆಗಳಿಗೆ ಕಳ್ಳರು ಮನೆಗಳ ಬೀಗ ಒಡೆದಿದ್ದಾರೆ. ಗ್ರಾಮದ ಸಿ.ಸಿ ಕ್ಯಾಮೆರಾವೊಂದರಲ್ಲಿ ನಾಲ್ಕು ಜನ ಯುವಕರು, ಕೈಯಲ್ಲಿ ಮಾರಕಾಸ್ತ್ರಗಳೊಂದಿಗೆ ತಿರುಗಾಡುವುದು ಕಂಡು ಬಂದಿದೆ, ಆದರೆ ಸರಿಯಾದ ಸಾಕ್ಷಿಗಳು, ಅಥವಾ ಪುರಾವೇಗಳನ್ನು ಕಲೆ ಹಾಕಲು ಶ್ವಾನ ದಳ ಮತ್ತು ಬೆರಳಚ್ಚು ತಂಡ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ, ಝಳಕಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡು ಹೆಚ್ಚಿನ ಕಾರ್ಯಾಚರಣೆ ನಡೆಸಲಾಗಿದೆ. ಕಳ್ಳತನದಲ್ಲಿ ಖಚಿತವಾಗಿ ಇಂತಿಷ್ಠೆ ವಡವೆ, ಹಣ ಇನ್ನಾವುದೇ ಮೊತ್ತದ ವಿಷಯಗಳ ಸರಿಯಾದ ಮಾಹಿತಿ ದೊರೆತಿಲ್ಲ ಎಂದು ಠಾಣಾ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಈರಣ್ಣ ವಾಲಿ, ಹಜರತ ಮುಲ್ಲಾ, ಶರಣಯ್ಯ ಮಠಪತಿ, ಜಂಜುರ್ಡೇ, ಶಿವಲಿಂಗ್ ತುಪ್ಪದ ಪ್ರವೀಣ್ ಬಡಿಗೇರ, ಉಸ್ಮಾನ್ ಪಠಾಣ, ಅಪ್ಪಾಷ್ಯಾ ವಾಲಿಕಾರ, ಸದಾಶಿವ ವಾಲಿಕಾರ ಹಾಗೂ ಗ್ರಾಮಸ್ಥರು ಸಿ. ಸಿ. ಕ್ಯಾಮೆರಾ ಮತ್ತು ಹಲವಾರು ಮಾಹಿತಿ ಕಲ್ಪಿಸಿ ಪೊಲೀಸ್ ಇಲಾಖೆ ಸಿಬ್ಬಂದಿಗಳೊಂದಿಗೆ ಸಹಕರಿಸಿದರು ಎಂದು ವರದಿಯಾಗಿದೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಪ್ಪ.ಬಿ ಹರಿಜನ ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button