18 ರಂದು ಹಡಪದ ಅಪ್ಪಣ್ಣ ಸಮಾಜ ದಿಂದ ಬೃಹತ್ ಪ್ರತಿಭಟನೆ ಬೆಳಗಾವಿ ಚಲೋ – ಎಮ್.ಬಿ ಹಡಪದ ಸುಗೂರ ಎನ್ ಕರೆ.
ಕಲಬುರಗಿ ಡಿ.16

ಪ್ರಮುಖ ಹಕ್ಕೊತ್ತಾಯ ಬೇಡಿಕೆಗಳು ಕೇಳಲು ಬೆಳಗಾವಿ ಸುವರ್ಣ ಗಾರ್ಡನ್ ಟೆಂಟ್ ನಂಬರ್ 4 ರಲ್ಲಿ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳಲು ಡಿ. 18 ರಂದು ನಿಗದಿ ಪಡಿಸಿದೆ. ಬಹು ವರ್ಷಗಳ ನಿರಂತರವಾಗಿ ಮೂರು ದಶಕಗಳ ಬೇಡಿಕೆಯಾಗಿದ್ದ. (1) 20-02-2023 ರಂದು ಘೋಷಿಸಿದ ಹಡಪದ ಅಪ್ಪಣ್ಣ ಸಮಾಜದ ಅಭಿವೃದ್ಧಿ ನಿಗಮ ಮಂಡಳಿಗೇ 100 ಕೋಟಿ ರೂ. ಮೀಸಲಿಡುವಂತೆ ಹಣ ಬಿಡುಗಡೆ ಮಾಡಬೇಕು, (2) “ಹಜಾಮ್” ಎಂಬ ಪದವು ಉರ್ದು ಪದವಾಗಿದ್ದು ಈ ಅವಾಚ ಪದ ಬಳಕೆ ಮಾಡುವ ವ್ಯಕ್ತಿಗಳಿಗೆ ಕಾನೂನು ಪ್ರಕಾರ “ಅಟ್ರಾಸಿಟಿ” ಪ್ರಕರಣ ದಾಖಲಿಸುವಂತೆ ಸರ್ಕಾರ ಸೂಕ್ತ ನಿರ್ಧಾರ ತೆಗೆದು ಕೊಳ್ಳಬೇಕು. (3) ಗ್ರಾಮೀಣ ಭಾಗದಲ್ಲಿ ಕ್ಷೌರ ವೃತ್ತಿ ಕಾಯಕ ಮಾಡುವ ಬಂಧುಗಳಿಗೆ ಕ್ಷೌರ ಕುಟೀರಗಳು ಸರ್ಕಾರ ನೀಡಲೇಬೇಕು. (4) ಶರಣ ಹಡಪದ ಅಪ್ಪಣ್ಣ ನವರ ಜನ್ಮಸ್ಥಳ ಮಸಬಿನಾಳ ಹಾಗೂ ಶಿವಶರಣೆ ಹಡಪದ ಲಿಂಗಮ್ಮನವರ ಜನ್ಮಸ್ಥಳ ದೇಗಿನಾಳವನ್ನು ಬಸವನ ಬಾಗೇವಾಡಿಯ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಿ ಅಭಿವೃದ್ಧಿ ಪಡಿಸುವುದು, (5) ಬಸವಕಲ್ಯಾಣ ತಾಲೂಕಿನಲ್ಲಿ ಇರುವ ಬಸವಣ್ಣನವರ ಅರಿವಿನ ಮನೆ (ಗವಿಯ) ಪಕ್ಕದಲ್ಲಿ ಇರುವ. ನಿಜಸುಖಿ ಹಡಪದ ಅಪ್ಪಣ್ಣ ನವರ ಅರಿವಿನ ಮನೆ (ಗವಿಯನ್ನು) ಬಿಕೆಡಿಬಿಗೇ ಸೇರ್ಪಡೆ ಮಾಡುವ ಮೂಲಕ ಅಭಿವೃದ್ಧಿ ಪಡಿಸಿ ಇತಿಹಾಸ ಉಳಿಸುವ ಕೆಲಸ ಆಗಲಿ ಮತ್ತು (6) ಮುದ್ದೇಬಿಹಾಳ ತಾಲ್ಲೂಕಿನ ಕೂಡಲ ಸಂಗಮ ಪಕ್ಕದಲ್ಲಿ ಇರುವ ಶರಣ ಹಡಪದ ಅಪ್ಪಣ್ಣ ಪೀಠದ ಸರ್ವಾಂಗೀಣ ಅಭಿವೃದ್ಧಿಗೇ 10 ಕೋಟಿ ರೂ ನೀಡುವಂತೆ. (7) ಕ್ಷೌರ ವೃತ್ತಿ ಮಾಡುವ ಕಾಯಕ ಬಂಧುಗಳಿಗೆ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದು ಮತ್ತು ಕಾರ್ಮಿಕ ಇಲಾಖೆಯ ಅಡಿಯಲ್ಲಿ 60 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ 5 ಸಾವಿರ ಪೆನ್ಷನ್ ನೀಡಬೇಕು.

(8) ಒಳ ಮೀಸಲಾತಿಯಲ್ಲಿಯೇ ಹಡಪದ ಅಪ್ಪಣ್ಣ ಸಮಾಜವನ್ನು ಎಸ್ಸಿ ಗೇ ಅಥಾವ ಎಸ್ಟೀ ಗೆ ಸೆರ್ಪಡೇ ಮಾಡಿ ಹಡಪದ ಅಪ್ಪಣ್ಣ ಸಮಾಜಕ್ಕೂ ಪ್ರಸ್ತುತ ಸರಕಾರ ಮೀಸಲಾತಿಯಲ್ಲಿ ಸಂಪೂರ್ಣವಾಗಿ ನೀಡದೆ ಮೂಗಿಗೆ ತುಪ್ಪ ಸವರಿದಂತಾಗಿದೆ ಎಂದು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಹೇಳಿದರು. ಮಂಗಳವಾರ ನಗರದ ಜಿಲ್ಲಾ ಭವನದಲ್ಲಿ ನಡೆದ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು,ಪ್ರಸ್ತುತ ರಾಜ್ಯ ಸರಕಾರ ಒಳ ಮೀಸಲಾತಿಯಲ್ಲಿ ಹಡಪದ ಅಪ್ಪಣ್ಣ ಸಮಾಜಕ್ಕೆ ಸಂಪೂರ್ಣತೆಯಾಗಿ ಮೀಸಲಾತಿ ನೀಡದೆ ಅನ್ಯಾಯ ಮಾಡಿದೆ ಇದರ ಸದುದ್ದೇಶದಿಂದ ಇದೇ ಗುರುವಾರ ಚಲೋ ಬೆಳಗಾವಿ ಇದೇ 18 ರಂದು ಗುರುವಾರ ದಿನ ದಂದು ಆಮರಣಾಂತ ಉಪವಾಸ ಸತ್ಯಾಗ್ರಹ ಮತ್ತು ಬೃಹತ್ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದ್ದು, ರಾಜ್ಯ ಹಡಪದ ಅಪ್ಪಣ್ಣ ಸಮಾಜ ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಸಹಯೋಗದಲ್ಲಿ ಮತ್ತು ಬೆಳಗಾವಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜ ಇವರ ನೇತೃತ್ವದಲ್ಲಿ ಬೃಹತ್ ಹೋರಾಟ ಜರುಗಲಿದೆ ಎಂದರು. ಪ್ರಸ್ತುತ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಸಂಪೂರ್ಣ ಒಳ ಮೀಸಲಾತಿ ಕಾನೂನಿನ ಕಾಯ್ದೆ ರೂಪದಲ್ಲಿ ಜಾರಿಗೆಗಾಗಿ ಮತ್ತು ರಾಜಕೀಯ ರಂಗದಲ್ಲಿ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆ, ಜಿಲ್ಲಾ ಮತ್ತು ತಾಲೂಕು,ಗ್ರಾಮ ಪಂಚಾಯಿತಿಗಳ ಚುನಾವಣೆಯಲ್ಲಿ ಮೀಸಲಾತಿಯ ನೀಡಬೇಕೆಂದು ಒತ್ತಾಯಿಸಿದರು .ಈ ಒಂದು ಮೀಸಲಾತಿ ಜಾರಿಗೆಗಾಗಿ ಬನ್ನಿ ಹಡಪದ ಅಪ್ಪಣ್ಣ ಸಮಾಜದ ಬಂಧುಗಳೆ ಚಲೋ ಬೆಳಗಾವಿ ಉಪವಾಸ ಧರಣಿ ಸತ್ಯಾಗ್ರಹ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಒಂದು ಹೋರಾಟದಲ್ಲಿ ಜಿಲ್ಲೆಯಿಂದ ಸಮಾಜದ ಹಿರಿಯ ನಾಯಕರು, ರಾಜಕೀಯ ಮುಖಂಡರು, ಹೋರಾಟಗಾರರು, ಸಮಾಜದ ಯುವ ಮಿತ್ರರು, ಬುದ್ಧಿಜೀವಿಗಳು, ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಲು ಕೋರಿದರು. ಈ ವೇಳೆಯಲ್ಲಿ ರಾಜ್ಯ ಹಡಪದ ಅಪ್ಪಣ್ಣ ಸಮಾಜದ ಮಾಜಿ ಸಂಘಟನಾ ಕಾರ್ಯದರ್ಶಿ ಬಸವರಾಜ ಸಿ ಹಳ್ಳಿ ಶಹಾಬಾದ, ಹಾಗೂ ಕಲಬುರಗಿ ಜಿಲ್ಲಾಧ್ಯಕ್ಷರು ಈರಣ್ಣ ಸಿ ಹಡಪದ ಸಣ್ಣೂರ .ಮತ್ತು ಜಿಲ್ಲಾ ಕಾರ್ಯಾಧ್ಯಕ್ಷರು ಭಗವಂತ ಸಹ ಶಿಕ್ಷಕರು ಹೊನ್ನಕಿರಣಗಿ, ಮತ್ತು ಜಿಲ್ಲಾ ಪ್ರ ಕಾರ್ಯದರ್ಶಿ ರಮೇಶ್ ಹಡಪದ ನೀಲೂರ. ಜಿಲ್ಲಾ ಉಪಾಧ್ಯಕ್ಷ ರುದ್ರಮಣಿ ಅಪ್ಪಣ್ಣ ಬಟಗೇರಾ. ಕಲಬುರಗಿ ನಗರಾಧ್ಯಕ್ಷ ಮಲ್ಲಿಕಾರ್ಜುನ ಸಾವಳಗಿ, ಹಾಗೂ ಕಲಬುರಗಿ ತಾಲೂಕಾಧ್ಯಕ್ಷ ಚಂದ್ರಶೇಖರ ತೊನಸನಹಳ್ಳಿ, ಮತ್ತು ಅನೇಕ ಸಮಾಜದ ಮುಖಂಡರು ಸಮಾಜದ ಬಂಧುಗಳು ಉಪಸ್ಥಿತರಿದ್ದರು.

