ಹೊಸಪೇಟೆಯಲ್ಲಿ ಇದೆ ಡಿಸೆಂಬರ್ 28 ರಂದು ನಾಗರಬೆಟ್ಟ ಆಕ್ಸ್‌ಫರ್ಡ್ ಪಾಟೀಲ ಸಂಸ್ಥೆಯ ವತಿಯಿಂದ 10 ನೇ. ತರಗತಿಯ ವಿದ್ಯಾರ್ಥಿಗಳಿಗೆ – ಟ್ಯಾಲೆಂಟ್ ಅರ್ವಾಡ್ ಪರೀಕ್ಷೆ ನಡೆಸಲಾಗುವುದು.
ನಾಗರಬೆಟ್ಟ ಡಿ.17

ಮುದ್ದೇಬಿಹಾಳ ತಾಲ್ಲೂಕಿನ ನಾಗರಬೆಟ್ಟ ಗ್ರಾಮದ ಗುಡ್ಡದ ಹತ್ತಿರ ಇರುವ ಆಕ್ಸ್‌ಫರ್ಡ್ ಸಂಸ್ಥೆಯು ಪ್ರತಿವರ್ಷ 10 ನೇ. ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಟ್ಯಾಲೆಂಟ್ ಅರ್ವಾಡ್ ಪರೀಕ್ಷೆಯನ್ನು ಆಕರ್ಷಕ ಬಹುಮಾನದ ಜೋತೆಗೆ ಹಮ್ಮಿಕೋಳ್ಳುತ್ತಾರೆ. ಆದರೆ ಈ 2025-26 ನೇ. ಸಾಲಿನ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆಯನ್ನು ಸ್ಟೇಟ್ ಬೋರ್ಡ್, ICSE ಮತ್ತು CBSE ವಿದ್ಯಾರ್ಥಿಗಳು 10 ನೇ. ತರಗತಿಯಲ್ಲಿ ಓದುತ್ತಿರುವ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹೊಸಪೇಟೆ ನಗರದ ಹಂಪಿ ರಸ್ತೆಯಲ್ಲಿ ಇರುವ ಬಾಲಾ ಟಾಕೀಸ್ ಹತ್ತಿರ ಪತ್ತಿಕೊಂಡ ವಿದ್ಯಾಪೀಠ ಪಿ.ವ್ಹಿ.ಎಸ್.ಬಿ.ಸಿ ಹೈಸ್ಕೂಲ್ ನಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಪ್ರಥಮ ಬಾರಿಗೆ ಇದೇ ಡಿಸೆಂಬರ್ 28-2025 ರವಿವಾರ ದಂದು ಕ್ಯಾಶ್ ಪ್ರೈಸ್ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ. ಒಂದನೇ ಬಹುಮಾನ 50000, ಎರಡನೇ ಬಹುಮಾನ 40000, ಮೂರನೇ ಬಹುಮಾನ 30000, ನಾಲ್ಕನೇ ಬಹುಮಾನ 15000, ಐದನೇ ಬಹುಮಾನ 10000, ಆರನೇ ಬಹುಮಾನ 5000 ರೂಪಾಯಿ ನೀಡಲಾಗುವುದು. ಹಾಗೂ ಅತಿ ಹೆಚ್ಚು ಅಂಕ ಗಳಿಸಿದ ಮೊದಲ 10 ವಿದ್ಯಾರ್ಥಿಗಳಿಗೆ 2500 ನಗದು ಬಹುಮಾನ ನೀಡಲಾಗುವುದು. ಪರೀಕ್ಷೆಗೆ ನೊಂದಾಯಿಸುವ ವಿದ್ಯಾರ್ಥಿಗಳು ತಮ್ಮ ಹೆಸರು, ತರಗತಿ, ಶಾಲೆಯ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡಿ 9380095756 ಈ ನಂಬರ್ ಗೆ ಮೆಸೇಜ್ ಮತ್ತು ವ್ಯಾಟ್ಸಪ್ ಕೂಡಾ ಕಳಿಸಿಬಹುದು.

ಪರೀಕ್ಷೆಗೆ ಬರುವ ವಿದ್ಯಾರ್ಥಿಗಳು ಶಾಲೆಯ ಗುರುತಿನ ಚೀಟಿ ಅಥವಾ ಆಧಾರ ಕಾರ್ಡ್ ಕಡ್ಡಾಯವಾಗಿ ತರಬೇಕು. ಮತ್ತು ಪರೀಕ್ಷೆಯ ಕೆಲವು ನಿಯಮಾವಳಿಗಳನ್ನು ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 7483147040, 8310035858 ಈ ನಂಬರ್ ಕರೆ ಮಾಡಿ ಮಾಹಿತಿಯನ್ನು ಪಡೆಯಬಹುದು ಎಂದು ನಾಗರಬೆಟ್ಟ ಆಕ್ಸ್‌ಫರ್ಡ್ ಪಾಟೀಲ್ಸ್ ಕಾಲೇಜ್ ಆಡಳಿತ ಮಂಡಳಿ ಅಮೀತಗೌಡ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ:ಜಿ.ಎನ್ ಬೀರಗೊಂಡ (ಮುತ್ತು)
ಮುದ್ದೇಬಿಹಾಳ.

