🚨 BREAKING NEWS, ಕುಂದಾಪುರ ಪುರ ಸಭೆಯಲ್ಲಿ ಹಗಲು ದರೋಡೆ! 🚨. 💥 ಸರ್ಕಾರಿ ಹಣಕ್ಕೆ ಕನ್ನ, ಖಾಸಗಿ ಆಸ್ತಿಯಲ್ಲಿ ಇಂಟರ್‌ಲಾಕ್ ಭಾಗ್ಯ – ಅಧಿಕಾರಿಗಳ ಅಕ್ರಮ ಬಯಲಿಗೆ..!

ಕುಂದಾಪುರ ಡಿ.17

ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ತೆರಿಗೆ ಹಣ ಅಕ್ಷರಶಃ ಲೂಟಿಯಾಗುತ್ತಿದೆಯೇ? ನಿಯಮಗಳನ್ನು ಗಾಳಿಗೆ ತೂರಿ, ಖಾಸಗಿ ವ್ಯಕ್ತಿಗಳ ಹಿತಾಸಕ್ತಿಗಾಗಿ ಸರ್ಕಾರಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆಯೇ? ಹೌದು ಎನ್ನುತ್ತಿವೆ ಕುಂದಾಪುರ ಪುರಸಭೆಯ ಇತ್ತೀಚಿನ ಬೆಚ್ಚಿ ಬೀಳಿಸುವ ಬೆಳವಣಿಗೆಗಳು..!

🔍 ಏನಿದು ಇಂಟರ್‌ಲಾಕ್ ಹಗರಣ.?:-

ಕುಂದಾಪುರದ ಮುದ್ದುಗುಡ್ಡೆ ರಸ್ತೆ ಬಳಿಯ ಕಾನ್ವೆಂಟ್ ಶಾಲೆಯ ಹತ್ತಿರವಿರುವ ಖಾಸಗಿ ಸ್ಥಳವೊಂದರಲ್ಲಿ ಯಾವುದೇ ಅಧಿಕೃತ ದಾನಪತ್ರ (Gift Deed) ಇಲ್ಲದಿದ್ದರೂ, ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಇಂಟರ್‌ಲಾಕ್ ಅಳವಡಿಸಿರುವುದು ಈಗ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ನಿಯಮ ಏನು ಹೇಳುತ್ತದೆ?:-

ಯಾವುದೇ ಖಾಸಗಿ ಸ್ಥಳದಲ್ಲಿ ಸರ್ಕಾರಿ ಅನುದಾನ ಬಳಸುವ ಮೊದಲು ಆ ಸ್ಥಳದ ಮಾಲೀಕರು ಆ ರಸ್ತೆಯನ್ನು ಪುರಸಭೆಗೆ ನೋಂದಾಯಿತ ದಾನಪತ್ರ (Registered Gift Deed) ನೀಡಬೇಕು. ಇದು ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಆದೇಶವೂ ಹೌದು.

ಅಧಿಕಾರಿಗಳ ಎಡವಟ್ಟು:-

ಪುರಸಭೆಯ ಲಿಖಿತ ವರದಿಯ ಪ್ರಕಾರ, ಈ ಖಾಸಗಿ ಸ್ಥಳದಲ್ಲಿ 5-6 ಮನೆಗಳಿದ್ದು, ಕೇವಲ ಇಬ್ಬರು ಮಾತ್ರ ದಾನಪತ್ರ ನೀಡಿದ್ದಾರೆ. ಉಳಿದ 4 ಮನೆಯವರು ದಾನಪತ್ರ ನೀಡದಿದ್ದರೂ, ಆ ಸ್ಥಳ ಸಂಪೂರ್ಣ ಖಾಸಗಿಯಾಗಿದ್ದರೂ ಅಧಿಕಾರಿಗಳು ಮಾತ್ರ ಅಲ್ಲಿ ಇಂಟರ್‌ಲಾಕ್ ಅಳವಡಿಸಿ ಸರ್ಕಾರಿ ಹಣವನ್ನು ಲೂಟಿ ಮಾಡಿದ್ದಾರೆ!

📌 ವರದಿಯ ಪ್ರಮುಖ ಆಘಾತಕಾರಿ ಅಂಶಗಳು:-

🚫 ನಿಯಮಕ್ಕೆ ಎಳ್ಳು ನೀರು:-

ಜಿಲ್ಲಾಧಿಕಾರಿಗಳ ಆದೇಶವಿದ್ದರೂ, ದಾನ ಪತ್ರ ಪಡೆಯದೆ ಖಾಸಗಿ ಜಾಗದಲ್ಲಿ ಚರಂಡಿ ಹಾಗೂ ಇಂಟರ್‌ಲಾಕ್ ನಿರ್ಮಾಣ ಮಾಡಲಾಗಿದೆ.

💸 ಟೆಂಡರ್ ಇಲ್ಲದೆ ಕಾಮಗಾರಿ:-

ಅಡ್ವಾನ್ಸ್ ವರ್ಕ್ ಹೆಸರಿನಲ್ಲಿ, ಇ-ಟೆಂಡರ್ ಪ್ರಕ್ರಿಯೆಯನ್ನೇ ನಡೆಸದೆ ಕಾಮಗಾರಿ ನಡೆಸಿರುವುದು ಪಾರದರ್ಶಕತೆಯ ಬಗ್ಗೆ ಗಂಭೀರ ಪ್ರಶ್ನೆ ಮೂಡಿಸಿದೆ.

🏗️ 23 ವಾರ್ಡ್‌ಗಳಲ್ಲೂ ಗೋಲ್ಮಾಲ್..?: –

ಪುರಸಭೆಯ ಎಲ್ಲಾ 23 ವಾರ್ಡ್‌ಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಶೇ. 50 ರಷ್ಟು ಪಾರದರ್ಶಕತೆ ಇಲ್ಲ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

🤐 ಆಡಳಿತಾಧಿಕಾರಿಗಳಿಗೂ ಇಲ್ಲ ಮಾಹಿತಿ:-

ಕುಂದಾಪುರ ಉಪವಿಭಾಗಾಧಿಕಾರಿಗಳೇ ಪುರಸಭೆಯ ಆಡಳಿತಾಧಿಕಾರಿಯಾಗಿದ್ದರೂ, ಅವರ ಗಮನಕ್ಕೆ ತಾರದೆ ಈ ಎಲ್ಲಾ ಅಕ್ರಮಗಳು ನಡೆಯುತ್ತಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ.

❓ ನಾಗರಿಕರ ಪ್ರಶ್ನೆ:-

ಈ ಹಗರಣದ ಹಿಂದೆ ಯಾರಿದ್ದಾರೆ?ಸಾರ್ವಜನಿಕ ಹಣವನ್ನು ಖಾಸಗಿ ಆಸ್ತಿಗಳ ಅಭಿವೃದ್ಧಿಗೆ ಬಳಸುತ್ತಿರುವ ಈ “ಹಗಲು ದರೋಡೆ”ಯ ಸೂತ್ರಧಾರ ಯಾರು? ಅಧಿಕಾರಿಗಳು ಯಾರ ಒತ್ತಡಕ್ಕೆ ಅಥವಾ ಆಮಿಷಕ್ಕೆ ಮಣಿದು ಈ ಅಕ್ರಮ ಎಸಗಿದ್ದಾರೆ? ಎಂದು ಕುಂದಾಪುರ ಸಮಸ್ತ ನಾಗರಿಕರು ಪ್ರಶ್ನಿಸುತ್ತಿದ್ದಾರೆ.

“ಇದು ಕೇವಲ ಹಣದ ದುರ್ಬಳಕೆಯಲ್ಲ, ವ್ಯವಸ್ಥಿತವಾಗಿ ನಡೆಯುತ್ತಿರುವ ಭ್ರಷ್ಟಾಚಾರ. ಈ ಕೂಡಲೇ ಆಡಳಿತಾಧಿಕಾರಿಗಳು 23 ವಾರ್ಡ್‌ಗಳ ಕಾಮಗಾರಿ ಕಡತಗಳನ್ನು ಮುಟ್ಟುಗೋಲು ಹಾಕಿಕೊಂಡು ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸ ಬೇಕು.” ಸ್ಥಳೀಯ ನಾಗರಿಕರ ಆಗ್ರಹ.

⚠️ ಮುಂದಿನ ಹಂತವೇನು..?

ಈಗಾಗಲೇ ಸ್ಥಳೀಯರು ಮಾನ್ಯ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಇಂಟರ್‌ಲಾಕ್ ಹಗರಣವು ಇಡೀ ಪುರಸಭೆಯ ಆಡಳಿತದ ಪಾರದರ್ಶಕತೆಯನ್ನು ಅಣಕಿಸುವಂತಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗುತ್ತದೆಯೇ ಅಥವಾ ಈ ಹಗರಣವೂ ಧೂಳು ಹಿಡಿಯುತ್ತದೆಯೇ? ಕಾದು ನೋಡಬೇಕಿದೆ.

🎤 ವರದಿ:ಆರತಿಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button