“ಸದ್ದಿಲ್ಲದೇ ಸಾಗುವ ಜೀವನ ಆಯುಷ್ಮಾನ ಸಮ್ಮಾನವು”…..

ಕನಸು ಕಂಡಿದ್ದು ಸಿಗದು
ಶ್ರಮದ ಫಲ ನಿಶ್ಚಿತವು
ದುಡಿಕಿದ ಮಾತು ಕೆಡಕು
ನಿಧಾನಿಸಿದ್ದು ಶುಭ ಕ್ಷಣವು
ಹೊಗಳಿಕೆಯ ನುಡಿಯಲಿ ಮೋಸತನವು
ಕೋಪದ ಮಾತಿನಲಿ ಜ್ಞಾನದ ಹೊಳಪು
ಸರಳತೆಯಲಿ ಸುಖದ ಸಿರಿಯು
ಆಡಂಬರತನದ ಗೆರೆ ಬರೆಯು
ಹಿರಿಯರ ನಗು ಅನುಭವದ ಸವಿ
ಕಿರಿಯರ ಅಳು ಬೆಳೆಯುವ ಸಿರಿ
ಹೊಗಳುವವರು ಸಾಧನೆಗೆ ಮೆರಗು
ತೆಗಳುವವರು ಏಳ್ಗೆಗೆ ತಡೆಯು
ಅಹಂಕಾರ ಇರದವ ಸಾವುಕಾರ
ಅಲಂಕಾರ ಇರದವ ಸರಳತೆ ಸಾಕಾರ
ಶ್ವಾರ್ಥ ಸಹಾಯಗುಣದ ಮನುಜನೇ
ಶ್ರೇಷ್ಠತೆನು
ದ್ವೇಷ ಅಸೂಯೆ ಇಲ್ಲದ ಮನವೇ ಶುಭ
ಮಂಗಳವು
ಸದ್ದಿಲ್ಲದೇ ಸಾಗುವ ಜೀವನ ಆಯುಷ್ಮಾನ
ಸಮ್ಮಾನವು
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ
