3 ನೇ. ರಾಜ್ಯ ಮಟ್ಟದ ವಿಶ್ವಕರ್ಮ ವಧು ವರರ ಸಮಾವೇಶ – 2026 ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ – ಚನ್ನಪ್ಪ.ಕೆ. ಹೊಸಹಳ್ಳಿ ಅವರಿಗೆ ಗೌರವದ ನಮನ ಸಲ್ಲಿಕೆ.

ಸಿಂಧನೂರು ಏ.28

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯ ಘಟಕದ ವತಿಯಿಂದ ಹಮ್ಮಿಕೊಂಡಿದ್ದ 3 ನೇ. ರಾಜ್ಯ ಮಟ್ಟದ ವಿಶ್ವಕರ್ಮ ವಧುವರರ ಅನ್ವೇಷಣೆ ಕಾರ್ಯಕ್ರಮದಲ್ಲಿ ಸಿಂಧನೂರಿನ ಚನ್ನಪ್ಪ ಕೆ ಹೊಸಹಳ್ಳಿ ಅವರ ಕಾರ್ಯಕ್ರಮದಲ್ಲಿ ಊಟದ ಉಸ್ತುವಾರಿಯಾಗಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದ್ದಕ್ಕಾಗಿ ಸನ್ಮಾನಿಸಿ ಗೌರವಿಸಲಾಯಿತು.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷರಾದ ಕೆ.ಪಿ ನಂಜುಂಡಿ ವಿಶ್ವಕರ್ಮ ಅವರ ನೇತೃತ್ವದಲ್ಲಿ ವಿಶ್ವಕರ್ಮ ಮಠಾದೀಶ್ವರ ಮತ್ತು ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ, ಹಿರಿಯರಾದ ಶ್ರೀ ಬಸವರಾಜ ಮದ್ದೂರ ಸಮಾವೇಶದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಬೆಂಗಳೂರು ನಗರ ಮತ್ತು ರಾಜ್ಯದ ವಿವಿಧ ಜಿಲ್ಲೆ, ತಾಲೂಕು ಮತ್ತು ಗ್ರಾಮಗಳಿಂದ ಆಗಮಿಸಿದ ಸಮಾಜದ ಮುಖಂಡರುಗಳ ಸಮ್ಮುಖದಲ್ಲಿ 3 ನೇ. ರಾಜ್ಯ ಮಟ್ಟದ ವಿಶ್ವಕರ್ಮ ವಧು ವರರ ಸಮಾವೇಶ – 2026 ಸಮಾರೋಪ ಸಮಾರಂಭ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

ಕಾರ್ಯಕ್ರಮದ ಉದ್ಘಾಟಕರಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಹಾಗೂ ಮಾಜಿ ಯಶವಂತಪುರ ಮತ ಕ್ಷೇತ್ರದ ಶಾಸಕರಾದ ಎಸ್.ಟಿ ಸೋಮಶೇಖರ ಅವರು ವಿಶೇಷ ಅತಿಥಿಗಳಾಗಿ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂಧರ್ಭದಲ್ಲಿ ಸಮಾರಂಭಕ್ಕೆ ಆಗಮಿಸಿದ ಬಂಧುಗಳಿಗೆ ಊಟದ ಉಸ್ತುವಾರಿಯಾಗಿ ಊಟದ ವ್ಯವಸ್ಥೆಯನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದಕ್ಕಾಗಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಯಚೂರು ಜಿಲ್ಲಾ ಯುವ ಘಟಕ ಪ್ರಧಾನ ಕಾರ್ಯದರ್ಶಿ ಹಾಗೂ ಸಿಂಧನೂರು ತಾಲೂಕ ವಿಶ್ವಕರ್ಮ ಸಮಾಜ ಸಂಘಟನಾ ಕಾರ್ಯದರ್ಶಿಗಳಾದ ಚನ್ನಪ್ಪ ಕೆ. ಹೊಸಹಳ್ಳಿ ಅವರಿಗೆ ಸವಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಕೆ.ಪಿ.ಸಿ.ಸಿ ಕುಶಲಕರ್ಮಿ ವಿಭಾಗ ರಾಜ್ಯಾಧ್ಯಕ್ಷರಾದ ಪ್ರಸನ್ನಕುಮಾರ್ ಚಳ್ಳಿಕೆರೆ, ರವಿಕುಮಾರ ರಾಜ್ಯ ಯುವ ಮುಖಂಡರು,ರಾಜ್ಯ ಉಪಾಧ್ಯಕ್ಷರಾದ ಅಶೋಕ ಪೊದ್ದಾರ, ನಾಗಲಿಂಗಪ್ಪ ಪತ್ತಾರ, ಕೊಪ್ಪಳ ಜಿಲ್ಲಾಧ್ಯಕ್ಷರಾದ ವೀರೇಶ ಪತ್ತಾರ, ಸಿರಗುಪ್ಪ ತಾಲೂಕ ಅಧ್ಯಕ್ಷ ಮೌನೇಶ ಆಚಾರಿ, ತೆಕ್ಕಲಕೋಟೆ ಹೋಬಳಿ ಅಧ್ಯಕ್ಷ ಬಸವರಾಜ ಹಾಗೂ ಚನ್ನಪ್ಪ ಬಡಿಗೇರ ಕೆ.ಹೊಸಹಳ್ಳಿ ಹಾಗೂ ವಿವಿಧ ಜಿಲ್ಲೆ ತಾಲೂಕು,ಹೋಬಳಿಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button