ಯುವ ಜನಾಂಗ ಸ್ವಾಮಿ ವಿವೇಕಾನಂದರ ಮಹಾನ್ ವಾಕ್ಯಗಳನ್ನು ಧ್ಯಾನಿಸಿ ಅನುಷ್ಠಾನಕ್ಕೆ ತರಬೇಕು – ಸ್ವಾಮಿ ಶಿವಪ್ರಿಯಾನಂದಜೀ ಮಹಾರಾಜ್.

ಚಳ್ಳಕೆರೆ ಏ.28

ಇಂದಿನ ಯುವ ಜನಾಂಗ ಸ್ವಾಮಿ ವಿವೇಕಾನಂದರು ಜಗತ್ತಿಗೆ ಸಾರಿ ಹೇಳಿದ ಮಹಾನ್ ಸಂದೇಶಗಳನ್ನು ಪ್ರತಿನಿತ್ಯ ಧ್ಯಾನಿಸಿ ಅವುಗಳನ್ನು ಅನುಷ್ಠಾನಕ್ಕೆ ತಂದಾಗ ಮಾತ್ರ ಸದೃಢ ರಾಷ್ಟ್ರ ಕಟ್ಟಲು ಸಾಧ್ಯವಾಗುತ್ತದೆ ಎಂದು ಗದಗನ ಹುಲಕೋಟಿಯ ಶ್ರೀರಾಮಕೃಷ್ಣ-ವಿವೇಕಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಸ್ವಾಮಿ ಶಿವಪ್ರಿಯಾನಂದಜೀ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಯುವಕ-ಯುವತಿಯರು-ಸದ್ಭಕ್ತರಿಗಾಗಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು‌.

ಸ್ವಾಮಿ ವಿವೇಕಾನಂದರ ಭವ್ಯ ವ್ಯಕ್ತಿತ್ವ ನಮಗೆ ಮಾದರಿಯಾಗಬೇಕು.ಅವರು ತಿಳಿಸಿದ ಸಂದೇಶಗಳ ಬೆಳಕಿನಲ್ಲಿ ಸಮರ್ಥ ಚಾರಿತ್ರ್ಯವಂತ ವ್ಯಕ್ತಿತ್ವವನ್ನು ರೂಪಿಸಿ ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸತ್ಸಂಗದಲ್ಲಿ ಪ್ರಾರ್ಥನೆ ಮತ್ತು ಭಜನೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿ ಕೊಟ್ಟರೆ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ದಿವ್ಯತ್ರಯರಿಗೆ ಮಂಗಳಾರತಿಯನ್ನು ಮಾಡಿದರು. ನಂತರ ಸಂನ್ಯಾಸಿ ಗೀತೆಯ ಗಾಯನ,ಪ್ರಸಾದ ವಿನಿಯೋಗ ನಡೆಯಿತು.

ಕಾರ್ಯಕ್ರಮದಲ್ಲಿ ಶ್ರೀಮತಿ ಎಂ ಗೀತಾ ನಾಗರಾಜ್, ಡಾ, ಸಿ.ಟಿ ಬಸವರಾಜಪ್ಪ, ರತ್ನಮ್ಮ, ವನಜಾಕ್ಷಿ ಮೋಹನ್, ಗೀತಾ ವೆಂಕಟೇಶ್, ಅಭಿಷೇಕ್, ತೇಜಸ್ವಿನಿ, ಹನ್ವಿಕಾ, ಕಾವೇರಿ ಸುರೇಶ್, ಜಯಾದಿತ್ಯ, ಚೇತನ್, ಸಂತೋಷ್, ಹೃತಿಕ್, ಸಂಜನಾ, ನಾಗೇಶ್, ಶ್ರೀಜನಿ, ಮಾನ್ಯ, ಡಾ, ಭೂಮಿಕಾ, ಜ್ಞಾನೇಶ್ವರಿ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಭಕ್ತರು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button