ನಾನು ಯಾರು ? ಎಂಬ ಪ್ರಶ್ನೆಗೆ ಮಕ್ಕಳು ಉತ್ತರ ಕಂಡು ಕೊಳ್ಳಬೇಕು – ಸಂತೋಷ್ ಕುಮಾರ್.

ಚಳ್ಳಕೆರೆ ಜು.07

ನಾನು ಯಾರು ? ಎಂಬ ಪ್ರಶ್ನೆಗೆ ಮಕ್ಕಳು ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಸಂತೋಷ್ ಕುಮಾರ್ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ವಾರದ ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ನಾನು ಯಾರು ?” ಎಂಬ ವಿಷಯವಾಗಿ ಪಿ.ಪಿ.ಟಿ ತರಗತಿ ನಡೆಸಿ ಕೊಟ್ಟರು.

ಕಾರ್ಯಕ್ರಮದ ಪ್ರಯುಕ್ತ ಕುಮಾರಿ ಮಾನ್ಯ ನೇತೃತ್ವದಲ್ಲಿ ಮಕ್ಕಳಿಂದ ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಗಾಯತ್ರಿ ಮಂತ್ರ ಪಠಣ, ಮಾತಾಜೀ ತ್ಯಾಗಮಯೀ ಅವರಿಂದ “ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿಗಳ ಪಠಣ ಮತ್ತು ಉಪನ್ಯಾಸ”, ಜೈಕಾರ, ಪ್ರಸಾದ ವಿನಿಯೋಗ ನಡೆಯಿತು.

ತರಗತಿಯಲ್ಲಿ ಪ್ರಭಾವತಿ, ಸುಮಾ, ಯತೀಶ್ ಎಂ ಸಿದ್ದಾಪುರ, ಡಾ, ಭೂಮಿಕಾ, ರಶ್ಮಿ, ಯಶಸ್ವಿ, ಲಕ್ಷ್ಮೀ, ವಿವಿಕ್ತ, ಚಿರಣ್ಯ, ಶುಕ್ತಿಜಾ, ವಿವೇಕ್, ನಿರಂಜನ್ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button