ಯಶಸ್ವಿ ಯಾಗಿ ನಡೆದ ಉಚಿತ – ಹೃದಯ ತಪಾಸಣಾ ಶಿಬಿರ.

ಚಳ್ಳಕೆರೆ ಜು.13

ಸ್ವತಃ ಪೂಜ್ಯ ವೈ ರಾಜಾರಾಮ್ ಗುರುಗಳೇ ಚಿಕಿತ್ಸೆಗೆ ಒಳಪಟ್ಟ ಸುಸಂದರ್ಭ 🙏

ಇಸಿಜಿ ಚಿಕಿತ್ಸೆ…..

ನಗರದ ಹೊರ ವಲಯದ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಆವರಣದಲ್ಲಿ ಶ್ರೀನರಹರಿ ಸೇವಾ ಪ್ರತಿಷ್ಠಾನ,ನಾಗ ಸಿಂಹಾದ್ರಿ ಚಾರಿಟೀಸ್, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಇಂಡಿಯಾನಾ ಹಾರ್ಟ್ ಸೆಂಟರ್ ಹಾಗೂ ವಾಸವಿ ಲ್ಯಾಬ್ ನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ. “ಉಚಿತ ಹೃದಯ ತಪಾಸಣಾ ಶಿಬಿರ”ವು ಅತ್ಯಂತ ಯಶಸ್ವಿಯಾಗಿ ನಡೆಯಿತು.

ಡಾ, ಸಿ.ನಾರಾಯಣಮೂರ್ತಿ ಅವರಿಂದ ಅತಿಥಿಗಳ ಪರಿಚಯ…..

ಈ ಶಿಬಿರದಲ್ಲಿ ಬಿ.ಪಿ,ಜಿ.ಆರ್.ಬಿ.ಎಸ್ ಇ.ಸಿ.ಜಿ ಪರೀಕ್ಷೆ ಸೇರಿದಂತೆ ಹೃದಯ ತಜ್ಞರೊಂದಿಗೆ ಸಮಾಲೋಚನೆ ನಡೆಯಿತು. 120 ಜನರು ಉಚಿತ ಹೃದಯ ತಪಾಸಣಾ ಶಿಬಿರದ ಸದುಪಯೋಗ ಪಡೆದು ಕೊಂಡರು.

ಡಾ, ರಾಜೇಶ್ ಅವರ ಭಾಷಣ…..

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ವೈ ರಾಜಾರಾಮ್ ಗುರುಗಳು ಬ್ರಹ್ಮಶ್ರೀ ಸಿಂಹಾದ್ರಿ ಸದ್ಗುರುಗಳ 106 ನೇ. ವರ್ಷದ ಜನ್ಮದಿನೋತ್ಸವದ ಪ್ರಯುಕ್ತ ಈ ಉಚಿತ ವೈದ್ಯಕೀಯ ತಪಾಸಣೆ ಶಿಬಿರವನ್ನು ಆಯೋಜಿಸಿದ್ದು ಸಾರ್ವಜನಿಕರು ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಂಡು ಉತ್ತಮ ಆರೋಗ್ಯ ಕಾಪಾಡಿ ಕೊಳ್ಳಲು ಅವರು ಕರೆ ನೀಡಿದರು.

ಕಾರ್ಯಕ್ರಮದ ಕೊನೆಯಲ್ಲಿ ವೈದ್ಯಕೀಯ ಸಿಬ್ಬಂದಿ ಯವರಿಗೆ ಗೌರವ ಸನ್ಮಾನ ಮಾಡಲಾಯಿತು. ಮಧ್ನಾಹ್ನದ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಸಭಾ ಕಾರ್ಯಕ್ರಮದಲ್ಲಿ ಬಸವೇಶ್ವರ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆಯ ಡೀನ್ ಡಾ, ರಾಜೇಶ್, ಡಾ, ಸಿ ನಾರಾಯಣಮೂರ್ತಿ, ಹೃದ್ರೋಗ ತಜ್ಞ ಡಾ, ಮಂಜುನಾಥ, ಡಾ, ಯೋಗೀಂದ್ರ,ರವಿ, ಮಾಕಂ ಶ್ರೀನಿವಾಸಲು, ಬಿ.ಸಿ.ಸಂಜೀವಮೂರ್ತಿ, ವೆಂಕಟೇಶಮೂರ್ತಿ, ರಾಜೇಶ್ವರಿ, ರಾಮಚಂದ್ರಪ್ಪ, ಮಲ್ಲಿಕಾರ್ಜುನ, ಯತೀಶ್ ಎಂ ಸಿದ್ದಾಪುರ, ಧನಂಜಯ,ಎಸ್.ಎನ್ ಗಂಗಮ್ಮ, ಸರಸ್ವತಿ, ಗೋವಿಂದರಾಜ್, ಗೀತಾ, ಭಕ್ತವತ್ಸಲ, ವಿಜಯ್, ಐಶ್ವರ್ಯ, ಸುಹಾಸ್,ದೀಪಾ, ಸೌಮ್ಯ ಉಮೇಶ್ ಸೇರಿದಂತೆ ವೈದ್ಯಕೀಯ ಸಿಬ್ಬಂದಿ, ನರಹರಿ ಸದ್ಗುರು ಆಶ್ರಮದ ಸದ್ಭಕ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button