ದೇಗುಲಗಳ ನಗರಿ ಬೃಂದಾವನ – ಮಾತಾಜೀ ತ್ಯಾಗಮಯೀ.
ಚಳ್ಳಕೆರೆ ಜು.12

ಶ್ರೀಮಾತೆ ಶಾರದಾದೇವಿಯವರು ಭೇಟಿ ನೀಡಿದ್ದ ಭಗವಾನ್ ಶ್ರೀಕೃಷ್ಣನ ದಿವ್ಯ ಲೀಲಾಕ್ಷೇತ್ರ ಬೃಂದಾವನ ದೇಗುಲಗಳ ನಗರಿ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಮಹಾತೀರ್ಥಗಳಲ್ಲಿ ಮಹಾಮಾತೆ” ಎಂಬ ವಿಷಯವಾಗಿ ವಿಶೇಷ ಪ್ರವಚನ ನೀಡಿದರು.

ದಿವ್ಯತ್ರಯರಿಗೆ ಮಂಗಳಾರತಿ
ಸತ್ಸಂಗದ ಆರಂಭದಲ್ಲಿ ಯತೀಶ್ ಎಂ ಸಿದ್ದಾಪುರ ನೇತೃತ್ವದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ, ದಿವ್ಯತ್ರಯರಿಗೆ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
“ಮಹಾತೀರ್ಥಗಳಲ್ಲಿ ಮಹಾಮಾತೆ” ಎಂಬ ವಿಷಯವಾಗಿ ಮಾತಾಜೀ ತ್ಯಾಗಮಯೀ ಅವರಿಂದ ಪ್ರವಚನ
ಕಾರ್ಯಕ್ರಮದಲ್ಲಿ ವನಜಾಕ್ಷಿ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಮಂಜಳಾ ಉಮೇಶ್, ಚೆನ್ನಕೇಶವ, ಡಿ.ಕಾವೇರಿ, ಪಂಕಜಾ, ಕವಿತಾ, ಮಂಜುಳಾ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

