🔴 ಬ್ರೇಕಿಂಗ್ ನ್ಯೂಸ್, ಹಿಮ್ಮತ್ ಸಿಂಗ್ ಪಟೇಲ್ ವೀಕ್ಷಕರಾಗಿ ನೇಮಕ – ಅಜಿತ್ ಕುಮಾರ್ ಶೆಟ್ಟಿ ಅವರಿಂದ ಶುಭ ಹಾರ್ದಿಕ ಹಾರೈಕೆಗಳು…🔴
ಉಡುಪಿ ಜು.15

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಸಮಿತಿಯ ವೀಕ್ಷಕರಾಗಿ ಹಿಮ್ಮತ್ ಸಿಂಗ್ ಪಟೇಲ್ ನೇಮಕ: ಅಜಿತ್ ಕುಮಾರ್ ಶೆಟ್ಟಿ ಅವರಿಂದ ಶುಭ ಹಾರೈಕೆ.
ಉಡುಪಿ:-
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ, ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಶಾಸಕ ಹಿಮ್ಮತ್ ಸಿಂಗ್ ಪಟೇಲ್ ಅವರನ್ನು ವೀಕ್ಷಕರಾಗಿ (Observer) ನೇಮಕ ಮಾಡಲಾಗಿದೆ.
ಈ ಮಹತ್ವದ ನೇಮಕದ ಬಗ್ಗೆ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಅವರು ಹರ್ಷ ವ್ಯಕ್ತಪಡಿಸಿದ್ದು, ಹಿಮ್ಮತ್ ಸಿಂಗ್ ಪಟೇಲ್ ಅವರಿಗೆ ಶುಭ ಹಾರೈಸಿದ್ದಾರೆ. ಪಟೇಲ್ ಅವರ ಅಪಾರ ಅನುಭವ ಮತ್ತು ಸಮರ್ಥ ನಾಯಕತ್ವವು ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲ ಪಡಿಸಲು ಸಹಕಾರಿ ಯಾಗಲಿದೆ ಎಂದು ಅಜಿತ್ ಕುಮಾರ್ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವರದಿ:ಆರತಿ.ಗಿಳಿಯಾರು.ಉಡುಪಿ
