ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಜಯಂತಿ ಪೂರ್ವಭಾವಿ ಸಭೆ ಹಾಗೂ ಎಸ್.ಐ.ಆರ್ – ಕುರಿತು ಜಾಗೃತಿ ಕಾರ್ಯಕ್ರಮ.
ಕಲಬುರಗಿ ಜು.14

ನಗರದ ಜಗತ್ ಸರ್ಕಲ್‌ನಲ್ಲಿರುವ ಬಸವೇಶ್ವರ ಮೂರ್ತಿಯ ಪಕ್ಕದಲ್ಲಿ ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಶಿವಶರಣ ಹಡಪದ ಅಪ್ಪಣ್ಣನವರ ೮೯೨ ನೇ. ಜಯಂತಿ, ಹಡಪದ ಲಿಂಗಮ್ಮನವರ ದತ್ತಿ ಉಪನ್ಯಾಸ ಕಾರ್ಯಕ್ರಮ ಹಾಗೂ ಎಸ್.ಐ.ಆರ್ (Special Intensive Revision) ಕುರಿತು ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ದಿಂದ ಪೂರ್ವಭಾವಿ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಕಲಬುರಗಿ ಜಿಲ್ಲಾಧ್ಯಕ್ಷರಾದ ಈರಣ್ಣ ಸಿ. ಹಡಪದ ಸಣ್ಣೂರ ವಹಿಸಿದ್ದರು. ಸಭೆಯಲ್ಲಿ ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಸುಗೂರ ಎನ್., ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಹಡಪದ ನೀಲೂರ ಸೇರಿದಂತೆ ಸಮಾಜದ ಪ್ರಮುಖರು ಭಾಗವಹಿಸಿ ಕಾರ್ಯಕ್ರಮಗಳ ಯಶಸ್ವಿ ಆಯೋಜನೆ ಕುರಿತು ಸಮಗ್ರ ಚರ್ಚೆ ನಡೆಸಿದರು.
ಸಭೆಯಲ್ಲಿ ಜುಲೈ ೨೧ ರಂದು ಜಯನಗರದ ಅನುಭವ ಮಂಟಪದಲ್ಲಿ ಶಿವಶರಣ ಹಡಪದ ಅಪ್ಪಣ್ಣನವರು ಹಾಗೂ ತಾಯಿ ಹಡಪದ ಲಿಂಗಮ್ಮನವರ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಜುಲೈ ೨೯ ರಂದು ಕಡ್ಲಿಗಡಬ (ಕಡ್ಲಿಗರ) ಹುಣ್ಣಿಮೆ ಹಾಗೂ ಗುರು ಪೂರ್ಣಿಮೆಯ ಪವಿತ್ರ ದಿನದಂದು ಶರಣ ಹಡಪದ ಅಪ್ಪಣ್ಣನವರ ೮೯೨ ನೇ. ಜಯಂತಿಯನ್ನು ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಮಾಜದ ಸಹಯೋಗದಲ್ಲಿ ಅದ್ಧೂರಿಯಾಗಿ ಆಚರಿಸುವ ಬಗ್ಗೆ ನಿರ್ಧರಿಸಲಾಯಿತು.
ಸಭೆಯಲ್ಲಿ ಎಸ್.ಐ.ಆರ್ ಕುರಿತು ವಿಶೇಷ ಜಾಗೃತಿ ಮೂಡಿಸಲಾಯಿತು. ಪ್ರತಿಯೊಬ್ಬ ಅರ್ಹ ನಾಗರಿಕರು ತಮ್ಮ ಮತದಾನದ ಹಕ್ಕು ಪಡೆಯಬೇಕು. ಯಾರೂ ಸಹ ಮತದಾರರ ಪಟ್ಟಿಯಿಂದ ವಂಚಿತರಾಗಬಾರದು ಎಂದು ಮುಖಂಡರು ಕರೆ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಹಡಪದ ನೀಲೂರ ಅವರು ಎಸ್.ಐ.ಆರ್ ಅರ್ಜಿ ಭರ್ತಿ ಮಾಡುವ ಕುರಿತು ಮಾಹಿತಿ ನೀಡಿ, ಮನೆಗೆ ಭೇಟಿ ನೀಡುವ ಬಿಎಲ್‌ಒ (BLO) ಅಧಿಕಾರಿಗೆ ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು ಅಥವಾ Voters Service Portal ಮೂಲಕ ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು. ಅರ್ಜಿ ಸಲ್ಲಿಸಲು ಮತದಾರರ ಗುರುತಿನ ಚೀಟಿ (EPIC), ಆಧಾರ್ ಕಾರ್ಡ್ ಹಾಗೂ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಅಗತ್ಯವೆಂದು ತಿಳಿಸಿದರು.
ಸಭೆಯಲ್ಲಿ ಸಮಾಜದ ಬಂಧುಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಯಂತಿ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಲಾಯಿತು. ಜೊತೆಗೆ ಶರಣರ ಕಾಯಕ, ಸಮಾನತೆ ಹಾಗೂ ವಚನ ಸಾಹಿತ್ಯದ ಸಂದೇಶವನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವ ಸಂಕಲ್ಪವನ್ನು ವ್ಯಕ್ತಪಡಿಸಲಾಯಿತು.
ಸಭೆಯಲ್ಲಿ ಶಿವಶರಣಪ್ಪ ಯಳವಂತಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆನಂದ ಖೇಳಗಿ, ಕಲಬುರಗಿ ನಗರಾಧ್ಯಕ್ಷ ಮಲ್ಲಿಕಾರ್ಜುನ ಸಾವಳಗಿ, ಚಂದ್ರಶೇಖರ ತೋನಸನಹಳ್ಳಿ, ವಿನೋದ ಅಂಬಲಗಾ, ಸುನೀಲ್ ಕುಮಾರ್ ಭಾಗಹಿಪ್ಪರರ್ಗಾ, ಭೀಮಾಶಂಕರ ನಂದೂರ, ಶಂಕರ ಹರವಾಳ, ಶಿವಕುಮಾರ್ ಹಡಪದ ಕೊಳ್ಳಿ (ನಾಲವಾರ), ಗುರುರಾಜ ಹೊಸ್ಸಳ್ಳಿ (ಕಲಬುರಗಿ), ಮಲ್ಲಿಕಾರ್ಜುನ ಬೆಳಗುಪ್ಪಿ ಸೇರಿದಂತೆ ಸಮಾಜದ ಹಿರಿಯ ಮುಖಂಡರು, ಅಂಗಡಿ ಮಾಲೀಕರು ಹಾಗೂ ಅನೇಕ ಸಮಾಜದ ಬಾಂಧವರು ಉಪಸ್ಥಿತರಿದ್ದರು.
ಈ ಪೂರ್ವಭಾವಿ ಸಭೆಯ ತಯಾರಿಯಲ್ಲಿ ಭಾಗವಹಿಸಿದ ಎಲ್ಲಾ ಪ್ರಮುಖರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತಾ, ಸಮಾಜದ ಎಲ್ಲಾ ಬಂಧುಗಳು ಜುಲೈ ೨೧ ಅನುಭವ ಮಂಟಪ ಕಲಬುರಗಿ ಜಯನಗದಲ್ಲಿ ದತ್ತಿ ಉಪನ್ಯಾಸ ಮತ್ತು ಜುಲೈ ೨೯ ರ ಜಯಂತಿ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸ ಬೇಕೆಂದು ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್. ಅವರು ಮನವಿ ಮಾಡಿದರು.

