ಭರದಿಂದ ಸಾಗಿದ ಶಂಕರ್ ಫಿಲ್ಮ್ ಮೈಸೂರು ಅವರ – ‘ಆಚಾರ್ಯ’ ಚಿತ್ರೀಕರಣ.
ಮೈಸೂರು ಜು.13

ಶಂಕರ್ ಫಿಲ್ಮ್ಸ್ ಮೈಸೂರು ಅವರ ‘ಆಚಾರ್ಯ’ ಕನ್ನಡ ಚಲನ ಚಿತ್ರದ ಮುಹೂರ್ತ ಸಮಾರಂಭ ಮೈಸೂರಿನ ಟಿ.ಕೆ ಲೇಔಟ್‌ನಲ್ಲಿರುವ ಬಿಸಿಲು ಮಾರಮ್ಮ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು.
ಚಲನ ಚಿತ್ರ ಹಿರಿಯ ನಟರಾದ ಮಂಡ್ಯ ರಮೇಶ್‌ರವರು ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿ ಚಿತ್ರ ತಂಡಕ್ಕೆ ಶುಭ ಕೋರಿದರು.
ಮಹಾ ಮಾನವತಾವಾದಿ ಜಗಜ್ಯೋತಿ ಬಸವಣ್ಣನವರ ಅನುಯಾಯಿಯಾದ ಕಥಾ ನಾಯಕ ಬಸವಣ್ಣನವರ ಆದರ್ಶಗಳನ್ನ ಪಾಲಿಸುತ್ತ ಅವರಂತೆಯೇ ಸಮಾಜ ತಿದ್ದುವ ಕೆಲಸ ಮಾಡುವಾಗ ಈ ಸಮಾಜ ಆತನನ್ನ ಯಾವ ರೀತಿ ನೋಡುತ್ತದೆ, ಸಮಾಜದ ಕೆಂಗಣ್ಣಿಗೆ ಗುರಿಯಾಗಿ ನಾಯಕ ಏನಾಗುತ್ತಾನೆ ಎಂಬ ಸಂದೇಶ ಚಿತ್ರದಲ್ಲಿದೆ.
ಮೈಸೂರ್, ನಂಜನಗೂಡು, ಕುಶಾಲನಗರ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಎರಡು ಸಾಹಸ ದೃಶ್ಯಗಳಿವೆ, ಸಧ್ಯ ಮೈಸೂರ ಸುತ್ತಮುತ್ತ ಚಿತ್ರೀಕರಣ ಭರದಿಂದ ಸಾಗಿದೆ ಎಂದು ನಿರ್ದೇಶಕ ರವಿಶಂಕರ ನಾಗ್ ತಿಳಿಸಿದರು.

ತಾರಾಂಗಣದಲ್ಲಿ ಕಲ್ಕಿ ಶ್ರೀವತ್ಸವ್, ಲಕ್ಷ್ಮೀಪತಿ ಬಾಲಾಜಿ, ದಿಶಾ, ಬಲರಾಜ್ ವಾಡಿ, ಶಂಕರ್ ಅಶ್ವಥ್, ಪದ್ಮವಾಸಂತಿ, ಸುಧಾ, ಕೈಲಾಶ್ ಕುಟ್ಟಪ್ಪ, ನಂಜು ಸಿದಪ್ಪ, ಸ್ಯಕ್ ಶಿವಾಜಿ, ಶಿವು, ನರಸಿಂಹ, ಆನಂದ್ ಸಿಂಗ್, ಪಾರ್ಥಸಾರಥಿ, ಲಯನ್ ಗೋಲ್ಡನ್ ಸುರೇಶ್, ಲಯನ್ ಪ್ರಮಿಳ ಮೊದಲಾದ ಕಲಾವಿದರಿದ್ದಾರೆ.
ಛಾಯಾಗ್ರಹಣ ವಿನಸ್ ಮೂರ್ತಿ, ಸಂಗೀತ ಹೆಜ್ಜಿಗೆ ನಾರಾಯಾ ಸ್ವಾಮಿ, ಸಾಹಸ ಮಾರುತಿ ಮಾಗಡಿ, ಸಂಕಲನ ವೆಂಕಿ ಯುಡಿವಿ, ಡಿಆಯ್-ಕಮಲ್ ಗೋಯಲ್, ಕೋರಿಯೋಗ್ರಫಿ ಮೈಸೂರು ರಾಜು, ಪಿ.ಆರ್.ಓ ಡಾ, ಪ್ರಭು ಗಂಜಿಹಾಳ, ಡಾ, ವೀರೇಶ್ ಹಂಡಿಗಿ, ಸಹ ನಿರ್ದೇಶನ ಸ್ಟಾರ್ ಗಣೇಶ್ ಅವರದಿದ್ದು.
ಈ ಮೊದಲು ‘ಮಾವುತ’ ಯಶಸ್ವಿ ಚಿತ್ರ ನಿರ್ದೇಶಿಸಿದ್ದ ರವಿಶಂಕರ್ ನಾಗ್ ಸಾಹಿತ್ಯ ಚಿತ್ರಕಥೆ ಸಂಭಾಷಣೆ ನಿರ್ದೇಶನ ಜೊತೆಗೆ ನಿರ್ಮಾಪಕರೂ ಆಗಿದ್ದಾರೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಡಾ, ಪ್ರಭು ಗಂಜಿಹಾಳ ಗದಗ

