ಗರ್ಭಿಣಿ ಸ್ತ್ರೀಯರಿಗೆ ಪ್ರಸವ ಪೂರ್ವ – ಹಾರೈಕೆ ಕುರಿತು ಮಾಹಿತಿ.
ತರೀಕೆರೆ ಜು.21

ಗರ್ಭಾವತಿಯಾದ ಮಹಿಳೆಯರು ಮೊದಲನೇ ತಿಂಗಳಿನಿಂದ ಹೆರಿಗೆ ಆಗುವವರೆಗೂ ವೈದ್ಯರಿಂದ ತಪಾಸಣೆ ಮಾಡಿಸಿ ಕೊಳ್ಳಬೇಕು, ಶ್ರುಶೋಷಕಿ ಶಶಿಕಲಾ ಮತ್ತು ರಾಧಮ್ಮ ರವರು ಇಂದು ತರೀಕೆರೆ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಅರಿವು ಮೂಡಿಸುವ ಕೇರ್ ಕಂಪನಿಯನ್ ಪ್ರೋಗ್ರಾಮ್ ಪ್ರಸವ ಪೂರ್ವ ಆರೈಕೆ ಕುರಿತು ಮಾಹಿತಿ ನೀಡಿದರು.
ಗರ್ಭಿಣಿ ಮಹಿಳೆಯರು ಯಾವ ರೀತಿಯ ಆಹಾರ ಪದ್ಧತಿ ಅನುಸರಿಸ ಬೇಕು ಮತ್ತು ಗಂಡಾಂತರ ಗರ್ಭಿಣಿಯರು ತೆಗೆದು ಕೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ವಿವರವಾಗಿ ಗರ್ಭಿಣಿಯರಿಗೆ ತಿಳಿಸಿದರು.
ಈ ಕಾರ್ಯಕ್ರಮವು ಪ್ರಸವ ಪೂರ್ವ ಹಾರೈಕೆ ಮಾಡಿ ಕೊಳ್ಳಲು ಉತ್ತಮವಾದ ಮಾಹಿತಿ ಆಗಿರುತ್ತದೆ. ಹಾಗೂ ಸುಲಭವಾಗಿ ಹೆರಿಗೆ ಯಾಗಲು, ರಕ್ತಹೀನತೆ ಯಿಂದ ಮುಕ್ತರಾಗಲು ಅಗತ್ಯವಾಗಿದೆ ಎಂದು ತಿಳಿಸಿದರು.
ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು

