ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳಿಗೆ – ಪ್ರತಿಭಾ ಪುರಸ್ಕಾರ ಹಾಗೂ ಮುಂಗಾರು ಮಕ್ಕಳ ಕವಿಗೋಷ್ಠಿ ಜರುಗಿತು. ‌

ಚಿತ್ತಾಪುರ ಜು.20

ನಾಲವಾರ ವಲಯ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಡಾ ಬಿ.ಆರ್ ಅಂಬೇಡ್ಕರ್ ಸಭಾ ಭವನ, ನಾಲವಾರದಲ್ಲಿ ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಮುಂಗಾರು ಕವಿಗೋಷ್ಠಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವು ನಾಡಗೀತೆ ಹಾಗೂ ಪ್ರಾರ್ಥನೆಯೊಂದಿಗೆ ಆರಂಭ ಗೊಂಡಿತು. ಕನ್ನಡಾಂಬೆಯ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ, ಶ್ರೀವಾಣಿ, ಪಶುವೈದ್ಯಾಧಿಕಾರಿಗಳು, ನಾಲವಾರ, “ಸಾಧನೆಗಳು ಸಾಧಕರ ಸ್ವತ್ತು, ಸೋಮಾರಿಗಳ ಸ್ವತ್ತಲ್ಲ. ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದಲ್ಲಿ ಶ್ರದ್ಧಾಭಕ್ತಿಯಿಂದ ವಿದ್ಯಾಭ್ಯಾಸ ಮಾಡಿದರೆ ಮಾತ್ರ ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯ. ಹೆಚ್ಚಿನ ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆಶಯ ನುಡಿಗಳನ್ನಾಡಿದ ನಾಲವಾರ ವಲಯ ಘಟಕದ ಕಸಾಪ ಅಧ್ಯಕ್ಷ ಅಂಜುನಾಥ ಎಸ್. ನಾಯ್ಕಲ್ ಅವರು, “ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿ ತಂದೆ-ತಾಯಿಯರ ಋಣ ತೀರಿಸಬೇಕು” ಎಂದು ಕರೆ ನೀಡಿದರು.

ನಾಲವಾರ ವಲಯ ಘಟಕದ ಕಸಾಪ ಗೌರವ ಕಾರ್ಯದರ್ಶಿ ಅರುಣಕುಮಾರ ಸುಣಗಾರ ಮಾತನಾಡಿ, “ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದನ್ನೇ ಆಯ್ಕೆ ಮಾಡಿಕೊಂಡು ಶ್ರೇಷ್ಠ ಸಾಧನೆ ಮಾಡಬೇಕು. ಜಗತ್ತಿಗೆ ಅಗತ್ಯವಿರುವ ಕಾರ್ಯವನ್ನು ಗುರಿಯಾಗಿಸಿಕೊಂಡು ಇಂದಿನಿಂದಲೇ ಬದಲಾವಣೆಯೊಂದಿಗೆ ಮುನ್ನಡೆಯ ಬೇಕು” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ನಾಲವಾರ ಹೋಬಳಿ ವ್ಯಾಪ್ತಿಯ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆ. ಮತ್ತು ಶ್ರೀ ಕೋರಿಸಿದ್ಧೇಶ್ವರ ಶಿಕ್ಷಣ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಶಿಕ್ಷಣ ಸಂಸ್ಥೆ, ಕೊಲ್ಲೂರು ಹಾಗೂ ತರಕಸಪೇಠ ಶಾಲೆಗಳ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ ಲೇವಡಿ, ಗೌರವ ಕಾರ್ಯದರ್ಶಿ ಸಿದ್ದುಗೌಡ ಕುರಾಳ (ಸುಗೂರ ಎನ್), ಕಾಂಗ್ರೆಸ್ ಯುವ ಮುಖಂಡ ಸಂತೋಷ ಮಳಭಾ, ಶ್ರೀಧರ ಪತ್ತಾರ, ಹೋಬಳಿ ಘಟಕದ ಕಜಾಪ ಅಧ್ಯಕ್ಷ ರಾಜೇಂದ್ರ ಕೊಲ್ಲೂರು, ಮಹಿಳಾ ಪ್ರತಿನಿಧಿ ಶಿವಲೀಲಾ ತುನ್ನೂರು, ಮಲ್ಲಿಕಾರ್ಜುನ ತಳವಾರ (ಸುಗೂರ ಎನ್), ನಾಗರಾಜ ಸಾಹು ಇಂಗಳಗಿ, ಶರಣು ಸಾಹು ಮದರಕಿ, ಅನಿಲಕುಮಾರ ವಿಶ್ವಕರ್ಮ, ರವಿ ಮಠದ, ಮಲ್ಲೇಶಿ ಸೊಟ್ಟೆನ್ನರ್, ದೇವು ಪೂಜಾರಿ, ಸಲೀಂ ಮದರಕಿ, ಅಧಿಕಾರಿಗಳು, ವಿದ್ಯಾರ್ಥಿಗಳು ಈ ಮುಂಗಾರು ಮಕ್ಕಳ ಕವಿ ಗೋಷ್ಠಿಯಲ್ಲಿ ಭಾಗವಹಿಸಿ ಕವನಗಳ ವಾಚನ ಮಾಡಿದರು. ಹಾಗೂ ಸಾರ್ವಜನಿಕರು ಮತ್ತು ನೂರಾರು ಕನ್ನಡ ಮನಸ್ಸು ಗಳು ಭಾಗವಹಿಸಿದ್ದರು. ‌

ವೇದಿಕೆಯಲ್ಲಿದ್ದ ಎಲ್ಲಾ ಗಣ್ಯ ಅತಿಥಿಗಳನ್ನು ಮಲ್ಲಿಕಾರ್ಜುನ ಬಿ. ಹಡಪದ, ಸುಗೂರ ಎನ್, ನಾಲವಾರ ವಲಯ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಯವರು ಸ್ವಾಗತಿಸಿದರು. ‌

ಸೋಮನಾಥ ಕೊಚ್ಚೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಂದನಾರ್ಪಣೆ ಸಲ್ಲಿಸಿದರು. ಈ ನಾಲವಾರ ವಲಯ ಘಟಕದ ಕಸಾಪ ಕಾರ್ಯಕ್ರಮದಲ್ಲಿ ಪಲ್ಲವಿ ಸಿದ್ದಪ್ಪ ಭರತನಾಟ್ಯ ಮಾಡಿದಳು ಕಾರ್ಯಕ್ರಮವನ್ನು ಶಾಂತಕುಮಾರ ಎಣ್ಣಿ ಕಸಾಪ ಸಲಹೆಗಾರರು ಅಚ್ಚುಕಟ್ಟಾಗಿ ನಿರೂಪಿಸಿದರು..

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button