ನಶೆ ಮುಕ್ತ ಭಾರತ ಅಭಿಯಾನ ಮತ್ತು ಮಿಷನ್ ಸ್ಪಂದನದ ಅಡಿಯಲ್ಲಿ ವಿಕಸಿತ ಭಾರತದತ್ತ ಒಂದು ಸಬಲವಾದ ಹೆಜ್ಜೆ – ದಾದಿ ಪ್ರಕಾಶ್ ಮಣಿ, ಜಿ.ಪವಿತ್ರ ಸ್ಮರಣೆಯಲ್ಲಿ.
ಮಲಘಾಣ ಆ.21

10 ಕೋಟಿ ನಶಾ ಮುಕ್ತರಾಗುವ ಪ್ರತಿಜ್ಞೆಗಳ ಮಹಾ ಅಭಿಯಾನ ಆಗಸ್ಟ್ 6 ರಿಂದ ಚಾಲನೆಯಲ್ಲಿದೆ ಈ ಅಭಿಯಾನವನ್ನು ಆಲಮೇಲ ತಾಲೂಕಿನ ಮಲಗಾಣ ಗ್ರಾಮದ ವಲಯದಲ್ಲಿ ಬರುವ ಮನಾಲಿ ಸಕ್ಕರೆ ಕಾರ್ಖಾನೆಯ ಎಲ್ಲಾ ಅಧಿಕಾರಿಗಳಿಗೆ ಹಾಗೂ ಅಲ್ಲಿಯ ಕಾರ್ಮಿಕರಿಗಳಿಗೆ ನಮ್ಮ ಭಾರತ ಸರ್ಕಾರ ಆಯೋಜಿಸಿಲಾದ ಈ 10 ಕೋಟಿಯ ನಶಾ ಮುಕ್ತ ಭಾರತ ಎಂದು ಕಾರ್ಯಕರ್ಮವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ರಾಜಯೋಗಿನಿ ಬಿ.ಕೆ ರೇಣುಕಾ ಅಕ್ಕನವರು ಆಲಮೇಲ ಅವರಿಂದ ನಶಾ ಮುಕ್ತರಾಗಿರಿ ಹಾಗೂ ದುಶ್ಚಟಗಳಿಂದ ದೂರವಿರಿ ಅಂತ ಮತ್ತು ತಮ್ಮ ಕುಟುಂಬದೊಂದಿಗೆ ನಗು ನಗುತಾ ಬಾಳಿ ಎಂದರು.
🧘 ರಾಜಯೋಗ ಧ್ಯಾನದ ಮೂಲಕ ವ್ಯಸನ ಮುಕ್ತಿ ರಾಜಯೋಗ ಧ್ಯಾನವು ಮನಸ್ಸನ್ನು ಶಾಂತ ಗೊಳಿಸಿ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿ ಕೊಳ್ಳಲು ಸಹಾಯ ಮಾಡುವ ಒಂದು ಧ್ಯಾನ ವಿಧಾನವಾಗಿದೆ.
ವ್ಯಸನದಿಂದ ಹೊರ ಬರಲು ಇದು ಸಹಾಯಕವಾದ ಪೂರಕ ವಿಧಾನವಾಗಬಹುದು. ರಾಜಯೋಗ ಧ್ಯಾನವು ಹೇಗೆ ಸಹಾಯ ಮಾಡಬಹುದು? ಮನಸ್ಸಿನ ನಿಯಂತ್ರಣ ನಕಾರಾತ್ಮಕ ಆಲೋಚನೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಒತ್ತಡ ಕಡಿಮೆ ಮಾಡುವುದು ಒತ್ತಡ ಮತ್ತು ಆತಂಕವನ್ನು ನಿಭಾಯಿಸಲು ಸಹಾಯ ಮಾಡಬಹುದು. ಆತ್ಮ ವಿಶ್ವಾಸ ಹೆಚ್ಚಿಸುವುದು “ನಾನು ವ್ಯಸನದಿಂದ ಹೊರ ಬರಬಲ್ಲೆ” ಎಂಬ ಸಕಾರಾತ್ಮಕ ಮನೋಭಾವ ಬೆಳೆಸುತ್ತದೆ.ಕೆಟ್ಟ ಅಭ್ಯಾಸಗಳಿಂದ ದೂರವಾಗಲು ಸಹಾಯ ಮನಸ್ಸನ್ನು ಉತ್ತಮ ಚಟುವಟಿಕೆಗಳ ಕಡೆಗೆ ತಿರುಗಿಸಲು ಸಹಕಾರಿ.ಏಕಾಗ್ರತೆ ಮತ್ತು ಶಾಂತಿ ಮನಸ್ಸಿಗೆ ಸ್ಥಿರತೆ ಮತ್ತು ಶಾಂತಿಯನ್ನು ಬೆಳೆಸುತ್ತದೆ.
ಸಕಾರಾತ್ಮಕ ಜೀವನಶೈಲಿ ಉತ್ತಮ ಚಿಂತನೆ, ಉತ್ತಮ ಅಭ್ಯಾಸ ಮತ್ತು ಆರೋಗ್ಯಕರ ಜೀವನದ ಕಡೆಗೆ ಪ್ರೇರೇಪಿಸುತ್ತದೆ. ಸರಳವಾಗಿ “ಮನಸ್ಸನ್ನು ಗೆದ್ದರೆ ವ್ಯಸನವನ್ನು ಗೆಲ್ಲಬಹುದು.” ಆದರೆ ತೀವ್ರವಾದ ಮಾದಕ ವ್ಯಸನ ಇದ್ದಲ್ಲಿ ರಾಜಯೋಗ ಧ್ಯಾನವನ್ನು ಮಾತ್ರ ಅವಲಂಬಿಸದೆ.
ವೈದ್ಯರು/ವ್ಯಸನ ಮುಕ್ತ ತಜ್ಞರ ಚಿಕಿತ್ಸೆ ಮತ್ತು ಕುಟುಂಬದ ಬೆಂಬಲದೊಂದಿಗೆ ಮುಂದುವರಿಯುವುದು ಹೆಚ್ಚು ಸುರಕ್ಷಿತ ಮತ್ತು ಪರಿಣಾಮಕಾರಿ. ಆಗಲಿ ಎಂದು ಪ್ರತಿಜ್ಞೆ ಮಾಡಿಸಲಾಯಿತು ಮನಾಲಿ ಸಕ್ಕರೆ ಕಾರ್ಖಾನೆಯ ಎಲ್ಲಾ ಅಧಿಕಾರಿಗಳು ಹಾಗೂ ಕಾರ್ಮಿಕರು ಎಲ್ಲಾರು ಭಾಗವಹಿಸಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗಾಲಿಬಸಾಹೇಬ ನಾಗಾವಿ ದೇವಣಗಾಂವ
