ಛಾಯಾ ಗ್ರಾಹಕರ ಕ್ಲಬ್‌ನಿಂದ 187 ನೇ. ವಿಶ್ವ – ಛಾಯಾ ಗ್ರಾಹಕರ ದಿನಾಚರಣೆ.

ಮಾನ್ವಿ ಆ.21

ಪಟ್ಟಣದಲ್ಲಿ ಛಾಯಾ ಗ್ರಾಹಕರ ಕ್ಲಬ್ ವತಿಯಿಂದ 187 ನೇ. ವಿಶ್ವ ಫೋಟೋಗ್ರಾಫರ್ ದಿನಾಚರಣೆಯನ್ನು ಸಂಭ್ರಮ ದಿಂದ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಛಾಯಾಗ್ರಹಣ ಕ್ಷೇತ್ರದಲ್ಲಿ ಸುದೀರ್ಘ 38 ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿದ ಹಿರಿಯ ಛಾಯಾಗ್ರಾಹಕ ಪ್ರಸಾದ್ ಮಿಶ್ರಾ ಅವರನ್ನು ಸಂಘದ ವತಿಯಿಂದ ವಿಶೇಷವಾಗಿ ಗೌರವಿಸಿ, ಸನ್ಮಾನಿಸಲಾಯಿತು.

ವಿಶ್ವ ಛಾಯಾಗ್ರಾಹಕರ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರು ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಕಳೆದ 38 ವರ್ಷಗಳಿಂದ ಫೋಟೋಗ್ರಫಿ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡು, ತಮ್ಮ ಕಲೆಯ ಮೂಲಕ ಸಮಾಜಕ್ಕೆ ಸುದೀರ್ಘ ಸೇವೆ ಸಲ್ಲಿಸಿದ ಪ್ರಸಾದ್ ಮಿಶ್ರಾ ಅವರಿಗೆ ಶಾಲೂ ಹಾರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ನಂತರ ಮಾತನಾಡಿದ ಸಂಘ ಸದಸ್ಯ ಶರಣು ಕಳಸ ಅವರು ತಂತ್ರಜ್ಞಾನ ಎಷ್ಟೇ ಬದಲಾದರೂ ಹಿರಿಯ ಛಾಯಾ ಗ್ರಾಹಕರ ಅನುಭವ ಮತ್ತು ಶ್ರಮ ಇಂದಿನ ಯುವ ಛಾಯಾ ಗ್ರಾಹಕರಿಗೆ ಸದಾ ಮಾರ್ಗದರ್ಶಕವಾಗಿರಲಿದೆ ಎಂದು ಕ್ಲಬ್‌ನ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಮಾನ್ವಿ ಛಾಯಾಗ್ರಾಹಕರ ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು ಹಾಗೂ ತಾಲೂಕಿನ ಪ್ರಮುಖ ಛಾಯಾಗ್ರಾಹಕರು ಭಾಗವಹಿಸಿ, ಪ್ರಸಾದ್ ಮಿಶ್ರಾ ಅವರ ಸೇವಾ ಜೀವನಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಫಿ ಚಾವುಶ್, ಎಂಡಿ ಗೌಸ್ ಹಾಗೂ ಶಕ್ಷಾವಲಿ ಉಪಸ್ಥಿತಿಯಲ್ಲಿದ್ದರು

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button